Google search engine
ಮನೆಬಿಸಿ ಬಿಸಿ ಸುದ್ದಿವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘ ಕಲಬುರಗಿ ವತಿಯಿಂದ 15ನೇ ವರ್ಷದ ರಂಗವೈಭವದ ರಂಗಸಂಭ್ರಮ‌...

ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘ ಕಲಬುರಗಿ ವತಿಯಿಂದ 15ನೇ ವರ್ಷದ ರಂಗವೈಭವದ ರಂಗಸಂಭ್ರಮ‌ ಕಾರ್ಯಕ್ರಮವನ್ನು ನಗರದ ಎಸ್.ಎಮ್ ಪಂಡಿತ್ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು

ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘ ಕಲಬುರಗಿ ವತಿಯಿಂದ 15ನೇ ವರ್ಷದ ರಂಗವೈಭವದ ರಂಗಸಂಭ್ರಮ‌ ಕಾರ್ಯಕ್ರಮವನ್ನು ನಗರದ ಎಸ್.ಎಮ್ ಪಂಡಿತ್ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿಶ್ವರಂಗದ ಸಂಸ್ಥಾಪಕರಾದ ವಿಶ್ವರಾಜ್ ಪಾಟೀಲ್ ಅವರ ಪ್ರಾಸ್ತಾವಿಕ ನುಡಿಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ, ಹದಿನೈದನೇ ವರ್ಷದ ಪ್ರಯುಕ್ತವಾಗಿ ಹದಿನೈದು ಜನ ಸಾಧಕರಿಗೆ ವಿಶ್ವರಂಗ ಗೌರವ ಪುರಸ್ಕಾರವನ್ನು ಮಾಡಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೂತನ ರಂಗಾಯಣ ನಿರ್ದೇಶಕಿಯಾದ ಸುಜಾತ ಜಂಗಮಶೆಟ್ಟಿ ಅವರು ಜ್ಯೋತಿ ಬೆಳಗಿಸುವ ಮೂಲಕ ಮಾಡಿದರು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸ್.ಎಸ್.ವಿ.ಟಿವಿ ಸಂಸ್ಥಾಪಕರಾದ ಶಂಕರ್ ಕೋಡ್ಲಾ, ಸರ್ವಜ್ಞ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಚೆನ್ನಾರೆಡ್ಡಿ ಪಾಟೀಲ್ ಮತ್ತು ಗುಲಬರ್ಗಾ ವಿವಿಯ ನಿವೃತ್ತ ಹಿರಿಯ ಪ್ರಾಧ್ಯಾಪಕರಾದ ಡಾ. ಕೆ.ಲಿಂಗಪ್ಪ ಅವರು ಆಗಮಿಸಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವರಂಗ ಕಲಬುರಗಿಯ ಅಧ್ಯಕ್ಷರಾದ ನೀತಾ ಪಾಟೀಲ್ ಅವರು ವಹಿಸಿಕೊಂಡಿದ್ದರು, ಇನ್ನೂ ಕಾರ್ಯಕ್ರಮದ ಉಪಸ್ಥಿತಿಯನ್ನು ವಿಶ್ವರಂಗದ ಖಜಾಂಚಿಗಳಾದ ಬಸವರಾಜ್ ಎಸ್ ಪಾಟೀಲ್ ವಹಿಸಿಕೊಂಡಿದ್ದರು. ನಂತರ ಕಾರ್ಯಕ್ರಮದಲ್ಲಿ ನೂತನ ರಂಗಾಯಣ ನಿರ್ದೇಶಕಿಯಾದ ಸುಜಾತ ಜಂಗಮಶೆಟ್ಟಿ ಅವರು ಮಾತನಾಡಿ ನನಗೆ ಇಲ್ಲಿನ ರಂಗ ವೈಭವ ಎಂಬ ಈ ಕಾರ್ಯಕ್ರಮ ನೋಡುತ್ತಿದ್ದರೇ ಈ ಹೆಸರೇ ಸೂಚಿಸುವಂತೆ ರಂಗಭೂಮಿಗೆ ಈ ವೇದಿಕೆಯಿಂದ ಕಳೆ ಬಂದಿದ್ದೂ, ಇಲ್ಲಿನ ವೈಭವ ನೋಡುತ್ತಿದ್ದರೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರವೇ ಇಲ್ಲಿಗೆ ಬಂದಂತೆ ಗೋಚರಿಸುತ್ತಿದೆ, ಇನ್ನೂ ಇಲ್ಲಿನ ಈ ಎಲ್ಲಾ ಕಾರ್ಯಕ್ರಮದ ಬಗ್ಗೆ ಕಾಳಜಿ ವಹಿಸಿ ಇದರ ಎಲ್ಲಾ ಕೆಲಸಗಳನ್ನು ಮಾಡಿರುವ ಎಲ್ಲರಿಗೂ ಅಭಿನಂದನೆ ಎಂದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ನಂತರ ಕಾರ್ಯಕ್ರಮದಲ್ಲಿ ಮಂಗಳೂರಿನ ವಿವಿಧ ಕಲಾವಿದರಿಂದ ನಾಟಕ ಮತ್ತು ಹಲವು ರೀತಿಯ ನೃತ್ಯಗಳು ಜರುದವು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!