ಅಥಣಿ : ಇದು ತಾಲೂಕಿನಲ್ಲೆ ಹೆಸರಾಂತ ಹಾಗೂ ಏಕೈಕ ಶಾಲೆ ಇಲ್ಲಿ ವರ್ಷದ ಕೆಲವು ದಿನ ಪ್ರಾರ್ಥನೆ ನಡೆಯಲ್ಲ ಮಕ್ಕಳು ಆಟ ಆಡೋ ಹಾಗಿಲ್ಲ, ಕಾರಣ ಕೇಳಿದ್ರೆ ನೀವು ಕೂಡ ಶಾಕ್ ಆಗೋದು ಗ್ಯಾರಂಟಿ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನದಿ ಇಂಗಳಗಾವ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಕಥೆ ಇದು ಸ್ಥಳೀಯ ಶಾಸಕ ಲಕ್ಷ್ಮಣ ಸವದಿ ಅದ್ಯಕ್ಷತೆಯ ಸರ್ಕಾರಿ ಶಾಲೆಗೆ ಅವ್ಯವಸ್ಥೆ ಕಂಡು ಬಂದಿದೆ. ತಾಲೂಕಿಗೆ ಮಾದರಿಯಾಗಬೇಕಿದ್ದ ಶಾಲೆಯಲ್ಲಿ ರಾಷ್ಟ್ರಗೀತೆ ಹಾಗೂ ನಾಡಗೀತೆಗೆ ಸ್ಥಳಾವಕಾಶ ಇಲ್ಲದೆ ಇರುವುದು ದುರಂತ.
ಮಳೆಗಾಲ ಪ್ರಾರಂಭವಾದ್ರೆ ಸಾಕು ಶಾಲಾ ಆವರಣದಲ್ಲಿ ಸಂಪೂರ್ಣವಾಗಿ ನೀರು ತುಂಬಿಕೊಂಡು ಮಕ್ಕಳಿಗೆ ಪ್ರಾರ್ಥನೆ ಮಾಡಲು ಸ್ಥಳ ಇಲ್ಲದೆ ಶಿಕ್ಷಕರು ಶಾಲೆಯಲ್ಲಿ ಪ್ರಾರ್ಥನೆ ಮಾಡುವಂತಾಗಿದೆ. ಶಾಲಾ ಶಿಕ್ಷಕರು ಸ್ಥಳೀಯ ಗ್ರಾಮ ಪಂಚಾಯತ್ ಗೆ ಮುರಮಿಕರ ಮಾಡಲು ಮನವಿ ಸಲ್ಲಿಸಿದರು ಗಮನ ಹರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಏನೆ ಆಗಲಿ ಮಕ್ಕಳಿಗೆ ಪಾಠದ ಜೊತೆ ಆಟ, ಪ್ರಾರ್ಥನೆ ಅಷ್ಟೇ ಮುಖ್ಯವಾಗಿರುತ್ತದೆ. ಸ್ಥಳೀಯ ಶಾಸಕರು ತಮ್ಮದೆ ಶಾಲೆಗೆ ಆದಷ್ಟು ಬೇಗ ಮೈದಾನದ ವೆವಸ್ಥೆ ಕಲ್ಪಿಸಿ ಮಕ್ಕಳ ಮುಖದಲ್ಲಿ ನಗು ಮೂಡಿಸಬಲ್ಲರಾ ಅನ್ನೋದನ್ನ ಕಾದು ನೋಡಬೇಕಿದೆ.