ಚಿಂಚೋಳಿ ಪಟ್ಟಣದ ಚಂದಾಪುರದ ಬಂಜಾರ ಭವನದಲ್ಲಿ ತಾಲೂಕಾ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ 185 ನೇಯ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ರಕ್ತ ಶಿಬಿರ ಅಪಘಾತ ವಿಮೆ ಛಾಯಾಚಿತ್ರ ಪ್ರದರ್ಶನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು
ಕಾರ್ಯಕ್ರಮವನ್ನು ಶಾಸಕರಾದ ಡಾ. ಅವಿನಾಶ್ ಜಾಧವ್ ಅವರು ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಉದ್ಘಾಟನೆಯನ್ನು ಮಾಡಿದರು.
ಕಾರ್ಯಕ್ರಮದ ಉದ್ದೇಶಿಸಿ ಅವರು ಮಾತನಾಡಿ ಚಿಂಚೋಳಿ ತಾಲೂಕಿನಲ್ಲಿ ತಾಲೂಕಾ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಈ ಕಾರ್ಯಕ್ರಮವು ಅತ್ಯುತ್ತಮ ಕಾರ್ಯಕ್ರಮವಾಗಿದ್ದು ನಾನು ಎಷ್ಟೇ ಬ್ಯುಸಿ ಇದ್ದರೂ ಕೂಡ ಈ ಕಾರ್ಯಕ್ರಮಕ್ಕೆ ಹತ್ತನೇ ನಿಮಿಷ ಸಮಯ ಕೊಟ್ಟಿದ್ದೆ ಆದರೆ ಈ ಕಾರ್ಯಕ್ರಮ ನೋಡಿದರೆ ನನಗೆ ಬಹಳ ಸಂತೋಷವಾಗುತ್ತಿದೆ ಮುಂಬರುವ ದಿನಗಳಲ್ಲಿ ಕೂಡ ಈ ಸಂಘದ ವತಿಯಿಂದ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಅವರು ಹೇಳಿದರು
ಕಾರ್ಯಕ್ರಮದಲ್ಲಿ ಗ್ರೇಟ 2 ತಹಶೀಲ್ದಾರ್ ವೆಂಕಟೇಶ್ ದುಗ್ಗನ್, ಸಂಜೀವಕುಮಾರ್ ಗಾರಂಪಳ್ಳಿ,ಅಂಬರೀಶ್ ಕಂದಿ,ನಾಗರಾಜ ಪಾಟೀಲ್, ಶ್ರೀನಿವಾಸ್ ಚಂದ್ರಿಮನಿ ಮತ್ತು ಅನೇಕ ತಾಲೂಕು ನಾಯಕರು ಹಾಗೂ ತಾಲೂಕಾ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು