ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಂಬಂಧಿ ಸಂಜೀವ್ ಹೊಸಪೇಟೆ ನಗರದಲ್ಲಿರುವ ಪುನೀತ್ ರಾಜಕುಮಾರ್ ವೃತ್ತಕ್ಕೆ ಭೇಟಿ ನೀಡಿದರು.
ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಜೀವ್ ಪುನೀತ್ ರಾಜಕುಮಾರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಕಿಚ್ಚನ ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಕಿಚಡಿ ವಿಶ್ವ, ರಾಜು ಗುಜ್ಜಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.





