Google search engine
ಮನೆUncategorizedವಾಡಿ ಬಿಜೆಪಿ ಕಛೇರಿಯಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ

ವಾಡಿ ಬಿಜೆಪಿ ಕಛೇರಿಯಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ

ಚಿತ್ತಾಪುರ ತಾಲೂಕಿನ ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ 113ನೇ ಮನ್​ ಕಿ ಬಾತ್​ ಕಾರ್ಯಕ್ರಮವನ್ನು  ಮುಖಂಡರು ವೀಕ್ಷಿಸಿದರುಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ,ಪ್ರಧಾನಿ ಮೋದಿ ಜಿ ಅವರು  ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಬಗ್ಗೆ,ತಂತ್ರಜ್ಞಾನದಿಂದ ದೇಶಕ್ಕೆ ಆಗಿರುವ ಲಾಭಗಳ ಬಗ್ಗೆ,ಯುವಕರು ಸಾಧನೆಗಳ ಬಗ್ಗೆ ವಿಸ್ತೃತವಾಗಿ ಹೇಳಿದ್ದಾರೆ.ರಾಜಕೀಯದಲ್ಲಿ ಯುವಕರ ಉತ್ಸಾಹ ಇಮ್ಮಡಿಸುವ ವುದರ ಜೊತೆಗೆ ತಮ್ಮ ಶ್ರೇಷ್ಠ ಭಾರತದ ಪರಿಕಲ್ಪನೆ ನಮಗೆ ‌ನೀಡಿದರು.ಹರ್ ಘರ್ ತ್ರಿವರ್ಣ ಅಭಿಯಾನದಲ್ಲಿ ನಮ್ಮೆಲ್ಲರ ಸಕ್ರಿಯತೆ ಅವರಿಗೆ ಖುಷಿ ತಂದಿದೆ.ಅವರಲ್ಲಿನ ದೇಶದ ಶ್ರೇಯೋಭಿವೃದ್ಧಿ ಕನಸಿಗೆ ನಾವೆಲ್ಲರೂ ಒಮ್ಮನಸ್ಸಿನಿಂದ ಶ್ರಮಿಸಿಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ವಿಠಲ ವಾಲ್ಮೀಕ ನಾಯಕ,ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಹರಿ ಗಲಾಂಡೆ, ಅರ್ಜುನ ಕಾಳೆಕರ,ಮಲ್ಲಿಕಾರ್ಜುನ ಸಾತಖೇಡ, ನಾಗರಾಜಗೌಡ ಗೌಡಪ್ಪನೂರ,ರಾಜು ಪವಾರ,ಆನಂದ ಶಿರವಾಳ,ಮಲ್ಲು ಪಾಟೀಲ,ನಾಗರಾಜ ರಂಜೊಳ್ಳಿ,ಆಕಾಶ ಜಾಧವ,ರವಿ ರಾಠೋಡ,ಧನ್ನು ಜಾಧವ, ರಾಮು ರಾಠೋಡ ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!