Home Uncategorized ಈ ವಿಷಯ ಕೇಳಿದ್ರೆ ನಿಮಗೆ ಅಚ್ಚರಿಯಾಗಬಹುದು ಆದ್ರೆ ಇದು ಖಂಡಿತ ಸತ್ಯ

ಈ ವಿಷಯ ಕೇಳಿದ್ರೆ ನಿಮಗೆ ಅಚ್ಚರಿಯಾಗಬಹುದು ಆದ್ರೆ ಇದು ಖಂಡಿತ ಸತ್ಯ

0

ಆಕೆ ಕಲಬುರಗಿ ಜಿಲ್ಲೆಗೆ ಮಹಾರಾಷ್ಟ್ರದಿಂದ ಓದೋಕೆ ಅಂತ ಬಂದಿದ್ಳು, ಆಕೆಯೊಂದಿಗೆ ಸ್ನೇಹ ಬೆಳೆಸಿ ಆಕೆಯ ಜೊತೆಗೆ ರೂಮಿನಲ್ಲಿದ್ದ ಗೆಳತಿಯಿಂದಲೇ ಹೆಲ್ಪ್ ತಗೊಂಡು ಆಕೆಯನ್ನ ಪ್ರೀತಿಸ್ದ, ಹಾಗೆಯೇ ಆಕೆಯನ್ನ ಗರ್ಭಿಣಿಯಾನ್ನಾಗಿಯೂ ಮಾಡ್ದ, ಕೊನೆಗೆ ಅವನಿಗೆ ಏನನ್ನಸ್ತೋ ಗೊತ್ತಿಲ್ಲ! ಆಕೆಯನ್ನ ದೂರ ಮಾಡಿ ಅವಳು ಕಣ್ಣೀರು ಹಾಕುವಂತೆ ಮಾಡಿದ್ದಾನೆ

ಈ ವಿಷಯ ಕೇಳಿದ್ರೆ ನಿಮಗೆ ಅಚ್ಚರಿಯಾಗಬಹುದು ಆದ್ರೆ ಇದು ಖಂಡಿತ ಸತ್ಯ.. ಏನದು ಅಂತೀರಾ? ಹೌದು ಇದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸುಶೀಲ ಎಂಬುವವನ ಮೋಸದ ಕಹಾನಿ. ಕಲಬುರಗಿ ನಗರಕ್ಕೆ ಮಹಾರಾಷ್ಟ್ರ ಮೂಲದಿಂದ ಓದೋಕೆ ಅಂತ ಬಂದ ಸುಹಾಸಿನಿ ಎಂಬಾಕೆಯೇ ಈತನ ಬಲಿಪಶು. ಈಕೆ ಕಲಬುರಗಿಯಲ್ಲಿನ ಪಿಜಿಯೊಂದರಲ್ಲಿ ರೂಮ್ ಮಾಡಿಕೊಂಡಿದ್ಲು, ಆಕೆಯ ರೂಮ್ ಮೇಟ್ ಆಗಿ ಒಂದು ತಿಂಗಳ‌ ಮಟ್ಟಿಗೆ ಬಂದ ಆಕೆಯ ಗೆಳತಿ ಶೀಲಾ ಎಂಬುವವಳು ಈಕೆಯನ್ನ ಸುಶೀಲ ಎಂಬುವಾತನಿಗೆ ಪರಿಚಯ ಮಾಡಿಸ್ತಾಳೆ ಆಗಿನಿಂದಲೇ ಶುರುವಾಯು ನೋಡಿ ಇವರ ಸ್ಟೋರಿ..

ನಂತರ ಪರಿಚಯವಾಗಿ ಸ್ನೇಹ ಬೆಳೆದು ಪ್ರೀತಿಯಾಗಿ ಅದೆಲ್ಲಿಗೋ ತಲುಪಿತ್ತು, ಜೊತೆಗೆ ಎಲ್ಲವೂ ಆಯ್ತು.. ಹಾಗೆಯೇ ಈಕೆ ಗರ್ಭಿಣಿಯೂ ಆದ್ಲು ನಂತರ ನಿನ್ನ ಮದುವೆಯಾಗ್ತೀನಿ ಈ ವಿಷ್ಯ ಯಾರಗೂ ಹೇಳಬೇಡ ಅಂದಿದ್ದವ ಆಕೆಯನ್ನ ಕರೆದುಕೊಂಡು ಒಂದು ಪ್ರೈವೇಟ್ ಹಾಸ್ಪಿಟಲ್ ನರ್ಸ್ ಒಬ್ಬರ ಸಹಾಯ ಪಡೆದು ಅಬಾಷನ್ ಮಾಡಿಸಿ, ಈಗ ಈಕೆಯನ್ನ ದೂರ ತಳ್ಳಿದ್ದಾನೆ.

ನಂತರ ಆಕೆ ಮಹಿಳಾ ಆಯೋಗದಿಂದ ಹಿಡಿದು, ಪೋಲೀಸ್ ಸ್ಟೇಷನ್’ವರೆಗೂ ತಿರುಗಾಡಿದ್ರೂ ಅವಳಿಗೆ ನ್ಯಾಯ ಸಿಕ್ಕಿಲ್ಲ..

ಅಷ್ಟಕ್ಕೂ ಆ ಹುಡುಗಿಗೆ ನ್ಯಾಯ ಸಿಗುತ್ತಾ ಎಂಬುದೇ ಯಕ್ಷ ಪ್ರಶ್ನೆಯಾಗಿದೆ

 

LEAVE A REPLY

Please enter your comment!
Please enter your name here

error: Content is protected !!