Home Uncategorized ಬೀದರ್ ನಗರದಲ್ಲಿನ ಮಾರುತಿ ಹೆಲ್ತ್ ವೆಲ್ಫೇರ್ ಟ್ರಸ್ಟ್ ಅಡಿಯಲ್ಲಿ ಬರುವ ವಿಶ್ವಾಸ ಬುದ್ದಿಮಾಂದ್ಯ ಮಕ್ಕಳ ವಸತಿ ರಹಿತ ಶಾಲೆಯಲ್ಲಿ ಶ್ರೀಕೃಷ್ಣ ಜಯಂತಿ

ಬೀದರ್ ನಗರದಲ್ಲಿನ ಮಾರುತಿ ಹೆಲ್ತ್ ವೆಲ್ಫೇರ್ ಟ್ರಸ್ಟ್ ಅಡಿಯಲ್ಲಿ ಬರುವ ವಿಶ್ವಾಸ ಬುದ್ದಿಮಾಂದ್ಯ ಮಕ್ಕಳ ವಸತಿ ರಹಿತ ಶಾಲೆಯಲ್ಲಿ ಶ್ರೀಕೃಷ್ಣ ಜಯಂತಿ

0

ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಇಂದು ಬೀದರ್ ನಗರದಲ್ಲಿನ ಮಾರುತಿ ಹೆಲ್ತ್ ವೆಲ್ಫೇರ್ ಟ್ರಸ್ಟ್ ಅಡಿಯಲ್ಲಿ ಬರುವ ವಿಶ್ವಾಸ ಬುದ್ದಿಮಾಂದ್ಯ ಮಕ್ಕಳ ವಸತಿ ರಹಿತ ಶಾಲೆಯಲ್ಲಿ ಶ್ರೀಕೃಷ್ಣ ಜಯಂತಿ ಆಚರಿಸಲಾಯಿತು.

ಕೃಷ್ಣ ಜಯಂತಿ ಆಚರಣೆ ಸಂದರ್ಭದಲ್ಲಿ ಹಲವು ಮಕ್ಕಳು ಕೃಷ್ಣ ರುಕ್ಮಿಣಿಯರ ವೇಶ ಧರಿಸುವ ಮೂಲಕ ವಿಶೇಷವಾಗಿ ಕಂಡರು. ನಂತರ ಕೃಷ್ಣಣ ವೇಶ ಧರಿಸಿದ ಮಕ್ಕಳು ಬೆಣ್ಣೆ ಗಡಿಗೆಯನ್ನು ತೆಗೆದುಕೊಂಡು ವಿಶೇಷವಾಗಿ ಆಟವಾಡಿದರು. ನಂತರ ಸಂಸ್ಥೆಯ ಅರವಿಂದ ಅವರು ಮಾತನಾಡಿ ಕೃಷ್ಣ ಮಹಿಮೆ ಮತ್ತು ಅವರು ನಡೆದು ಬಂದ ಜೀವನದ ಬಗ್ಗೆ ಮೆಲುಕು ಹಾಕಿದರು‌. ನಂತರ ಸಮಾಜ ಸೇವಕರಾದ ನಾಗರಾಜ ಅವರು ಮಾತನಾಡಿ ಡಾ. ಮಾರುತಿ ಚಂದಹಳ್ಳಿಕರ್ ಅವರು ಬಡ ಬುದ್ದಿಮಾಂದ್ಯ ಮಕ್ಕಳಿಗಾಗಿ ಹತ್ತು ವರ್ಷದಿಂದ ವಿಶ್ವಾಸ ಬುದ್ದಿಮಾಂದ್ಯ ಮಕ್ಕಳ ಶಾಲೆ ನಡೆಸುತ್ತಿದ್ದಾರೆ. ಈಗ ಈ ಶಾಲೆಯು ಹೆಮ್ಮರವಾಗಿ ಈ ಭಾಗದಲ್ಲಿ ಬೆಳೆದು ನಿಂತಿದ್ದೂ, ಬುದ್ದಿಮಾಂದ್ಯ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿಸುವುದರೊಂದಿಗೆ ಅವರಲ್ಲಿ ಆತ್ಮ ಸ್ತೈರ್ಯ ಮತ್ತು ಅವರಲ್ಲಿ ಆತ್ಮ ಗೌರವವನ್ನು ಉಂಟು ಮಾಡಿ ಅಂಗವಿಕಲತೆಯನ್ನು ಮೆಟ್ಟಿ ಬದುಕುವಂತೆ ಮಾಡುವುದೇ ಅವರ ಗುರಿಯಾಗಿತ್ತು, ವಿಭಿನ್ನ ಸಾಮರ್ಥ್ಯದ ವಿಕಲಚೇತನರು ಸಹ ಶಿಕ್ಷಣ ಮತ್ತು ತರಬೇತಿ ಪಡೆದು ತಂದೆ ತಾಯಿಯರ ಮತ್ತು ಸಮಾಜದ ಮೇಲೆ ಅವಲಂಬಿತರಾಗದೇ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳು, ಸಿಬ್ಬಂದಿ ವರ್ಗದವರು ಸೇರಿ ಹಲವರು ಇದ್ದರು

LEAVE A REPLY

Please enter your comment!
Please enter your name here

error: Content is protected !!