Google search engine
ಮನೆUncategorizedಅಭಿವೃಧ್ದಿ ಅಧಿಕಾರಿಯಾದ ಶ್ರೀಮತಿ ವಿದ್ಯಾವತಿ ಪಂಚಾಯತಿ ಹಣ ದುರ್ಬಳಕೆ; ಲತೀಫ್ ಜಾಗೀರ್ದಾರ್

ಅಭಿವೃಧ್ದಿ ಅಧಿಕಾರಿಯಾದ ಶ್ರೀಮತಿ ವಿದ್ಯಾವತಿ ಪಂಚಾಯತಿ ಹಣ ದುರ್ಬಳಕೆ; ಲತೀಫ್ ಜಾಗೀರ್ದಾರ್

ಕಲಬುರಗಿ ಜಿಲ್ಲೆ ಕಲಬುರಗಿ ತಾಲೂಕಿನ ಫಿರೋಜಾಬಾದ್ ಗ್ರಾಮ ಪಂಚಾಯತಿಯ ಅಭಿವೃಧ್ದಿ ಅಧಿಕಾರಿಯಾದ ಶ್ರೀಮತಿ ವಿದ್ಯಾವತಿ ಅವರು ಪಂಚಾಯತಿ ಹಣ ದುರ್ಬಳಕೆಯಿಂದ ದುರುಪಯೋಗ ಮಾಡಿ ಹಣ ಲೂಟಿ‌ ಮಾಡುತ್ತಿದ್ದಾರೆ ಎಂದು ಲತೀಫ್ ಜಾಗೀರ್ದಾರ್ ಆರೋಪಿಸಿದ್ದಾರೆ.

ನಗರದಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಈಗಿನ ಪಿಡಿಓ ಆದ ಶ್ರೀಮತಿ ವಿದ್ಯಾವತಿರವರು ಬಂದು ಐದು ತಿಂಗಳು ಕೂಡ ಆಗಿಲ್ಲ 2024 ರ ಐದನೇ, ಏಳನೇ ತಿಂಗಳಲ್ಲಿ ಇವರು 14 ಮತ್ತು 15 ನೇ ಹಣಕಾಸಿನ ಹಣದಲ್ಲಿ ಸುಮಾರು 22 ಲಕ್ಷ ಹಣವನ್ನು ಅಭಿವೃದ್ಧಿ ಹೆಸರಿನಲ್ಲಿ ತನ್ನ ಸ್ವಂತ ಅಭಿವೃದ್ದಿ ಸಲುವಾಗಿ ಲೂಟಿ ಮಾಡಿದ್ದಾರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಪಂಚಾಯತಿ ಕಾರ್ಯಾಲದಲ್ಲಿ ಹಣದ ವ್ಯವಹಾರದ ಬಗ್ಗೆ ಮತ್ತು ಪಂಚಾಯತಿ ನಡಾವಳಿ ಬಗ್ಗೆ ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿ ಕೇಳಿದರೆ ಮಾಹಿತಿ ಕೇಳಿದ ಕೆಲವೇ ಗಂಟೆಗಳಲ್ಲಿ ಇಲ್ಲಿನ ಅಧ್ಯಕ್ಷರಾದ ರಾಶನ ರಾಜು ಅವರು ನಾವು ದಲಿತರು, ನಾನು ದಲಿತ ಇದ್ದೇನೆ ನೀವು ಪಂಚಾಯತಿ ಬಗ್ಗೆ ಏನೂ ಕೇಳಬಾರದು ಎಂದು ಪದೇ ಪದೇ ಹೇಳುತ್ತಾರೆ, ಆಗ ನಾನು ಅವರಿಗೆ ಪಂಚಾಯತಿ ಲೆಕ್ಕ ಕೇಳುವುದು ನನ್ನ ಕರ್ತವ್ಯ, ನಾನು ಕೇಳಿದ್ದೇನೆ ನಾನು ಏನು ತಪ್ಪು ಮಾಹಿತಿ ಕೇಳಿಲ್ಲ ಎಂದಾಗ, ಒಂದು ತರಹ ನನಗೆ ಬೆದರಿಕೆ ಒಡ್ಡುವ ದೃಷ್ಟಿಯಿಂದ ನೀವು ಪಂಚಾಯತಿ ವಿಷಯದಲ್ಲಿ ತಲೆ ಹಾಕಬಾರದು ಎಂದು ಹೆದರಿಸುವ ಹಂತಕ್ಕೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!