ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪೊಟೋಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಹಗರಗುಂಡ ಗ್ರಾಮದಲ್ಲಿ ಘಟನೆ.
ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿರುವ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು.
ನಿನ್ನೆ ತಡ ರಾತ್ರೀ ಚಪ್ಪಲಿ ಹಾರ ಹಾಕಿರುವ ಶಂಕೆ.
ಇಂಥ ಮಹಾನ್ ವ್ಯಕ್ತಿಗಳಿಗೆ ಅವಮಾನ ಮಾಡಿದರೆ ಹೆತ್ತ ತಾಯಿಗೆ ಅವಮಾನ ಮಾಡಿದಂತೆ ಎಂದು ಹಾಲುಮತ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳದಲಿ ಬಿಗುವಿನ ವಾತಾವರಣ.
ಸ್ಥಳಕ್ಕೆ ಬಸವನ ಬಾಗೇವಾಡಿ ಡಿಎಸ್ಪಿ ಬಾಲಪ್ಪ ನಂದಾಗವಿ ಭೇಟಿ, ಪರಿಶೀಲನೆ ನಡೆಸಿದರು. ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಶ್ ಹೊಸಮನಿ ಎಸ್ ಎಸ್ ವಿ ಟಿವಿ ನ್ಯೂಸ್ ತಾಳಿಕೋಟೆ
ತಾಳಿಕೋಟೆಯಲ್ಲಿ ಸಂಗೊಳ್ಳಿ ರಾಯಣ್ಣ ನವರ ಭಾವಚಿತ್ರಕ್ಕೆ ಅವಮಾನಿಸಿ ದ ಕಿಡಿಗೇಡಿಗಳು





