ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ನುಲಿಯ ಚಂದಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಇಂದು ಕಲಬುರಗಿ ನಗರದಲ್ಲಿನ ಎಸ್. ಎಮ್. ಪಂಡಿತ ರಂಗ ಮಂದಿರದಲ್ಲಿ ಆಯೋಜಿಸಿದ್ದ ನುಲಿಯ ಚಂದಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಚಂದಯ್ಯ, ಅಂಬೇಡ್ಕರ್ ಹಾಗೂ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ವಿವಿಧ ಅತಿಥಿ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ತದನಂತರ ಮಾತನಾಡಿದ ಕನ್ನಡ ಅಧ್ಯಾಪಕರಾದ ಡಿ.ಎನ್. ಪಾಟೀಲ ಅವರು 12 ನೇ ಶತಮಾನದ ಬಸವಾದಿ ಶರಣರಲ್ಲಿ ಒಬ್ಬರಾದ ನುಲಿಯ ಚಂದಯ್ಯನವರ ಜಯಂತ್ಯೋತ್ಸವವನ್ನು ಆಚರಿಸುತ್ತಿರುವ ಕಲಬುರಗಿ ಜಿಲ್ಲಾಡಳಿತಕ್ಕೆ ಅಭಿನಂದಿಸಿದ ಅವರು, 12 ನೇ ಶತಮಾನದಲ್ಲಿ ನುಲಿಯ ಚಂದಯ್ಯನವರು ಕಾಯಕದ ಮೂಲವಾಗಿ ದೇವರನ್ನೇ ಕೆಲಸಕ್ಕೆ ಹಚ್ಚಿದಂತಹ ಶರಣ ನುಲಿಯ ಚಂದಯ್ಯ ಎಂದು ಚಂದಯ್ಯನವರ ಕುರಿತು ಹೊಗಳಿದರು





