Google search engine
ಮನೆUncategorizedಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೆ ಬರಲ್ಲ - ಸಚಿವ ಸತೀಶ್ ಜಾರಕಿಹೊಳಿ

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೆ ಬರಲ್ಲ – ಸಚಿವ ಸತೀಶ್ ಜಾರಕಿಹೊಳಿ

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೆ ಬರಲ್ಲ – ಸಚಿವ ಸತೀಶ್ ಜಾರಕಿಹೊಳಿ

ಅಥಣಿ – ಬಿಜೆಪಿಯವರು ನಡೆಸಿರುವ ಮುಡಾ ಹಗರಣದ ಪಾದಯಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸತೀಶ್‌ ಜಾರಕಿಹೊಳಿ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಬಿಜೆಪಿಯ ಅಧಿಕಾರದಲ್ಲಿ ಮುಡಾ ನಿವೇಶನ ಹಂಚಿಕೆಯಾಗಿದೆ. ಕಾಂಗ್ರೆಸ್ ನವರು ಸಹ ಜನರ ಮುಂದೆ ಸತ್ಯ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದೆ, ಪಾದಯಾತ್ರೆಗೆ ವಿರುದ್ಧವಾಗಿ ನಾವು ಸಹ ಸಮಾವೇಶ ಮಾಡುತ್ತೇವಿ ಎಂದು ಹೇಳಿದ್ದರು .

ಶಾಸಕ ಲಕ್ಷ್ಮಣ ಸವದಿಯೊಂದಿಗೆ ಕಾರಿನಲ್ಲಿ ಹೋಗಿರುವ ವಿಷಯ ಈಗ ಬೇಡ, ಅಥಣಿ ತಾಲೂಕಿನ ನೆರೆ ಸಂತ್ರಸ್ತರಿಗೆ ಮನೆಯಗಳ ಹಂಚಿಕೆ ಬಗ್ಗೆ ಚರ್ಚಿಸಲಾಗಿದೆ, ಹಿಂದಿನ ಶಾಸಕರಾದ ಮಹೇಶ್ ಕುಮಟ್ಟಳ್ಳಿ ಇದ್ದಾಗಲೂ ಚರ್ಚೆ ನಡೆಯುತ್ತೀದು, ನೆರೆ ಸಂತ್ರಸ್ತರಿಗೆ ಬೇರೆ ಕಡೇಗೆ ವ್ಯವಸ್ಥೆ ಮಾಡಲಾಗುತ್ತೀದೆ ಎಂದು ಹೇಳಿದ್ದರು .

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಈ ಸಲ ಮಳೆಗಾಲದಲ್ಲಿ ರಾಜ್ಯದ ರಸ್ತೆಗಳು ಹಾನಿಯಾಗಿವೆ ಎಂದು ಶಾಸಕರುಗಳು ದೂರಿದ್ದಾರೆ. ಅವುಗಳನ್ನು ಸರಿಪಡಿಸಲಾಗುವುದು, . ಅಪಾಯದ ಹಂತದಲ್ಲಿರುವ ಹಾಳಾದ ಸೇತುವೆ ಗಳನ್ನು ಎತ್ತರದಲ್ಲಿ ನಿರ್ಮಾಣ ಮಾಡುವ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಹೇಳಿದ್ದರು .

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!