ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ದನದ ಕೊಟ್ಟಿಗೆಗೆ ಬೆಂಕಿ ತಗುಲಿ, 1 ಹೋರಿ ಸಜೀವ ದಹನವಾಗಿದ್ದು, 2 ಎತ್ತುಗಳಿಗೆ ಗಂಭೀರ ಗಾಯವಾದ ಘಟನೆ ರೋಣ ತಾಲೂಕಿನ ಜಿಗಳೂರು ಗ್ರಾಮದಲ್ಲಿ ನಡೆದಿದೆ. ಹನುಮಂತ ಬೇಡರ ಎಂಬ ರೈತನಿಗೆ ಸೇರಿದ ಕೊಟ್ಟಿಗೆ ಹಾಗೂ ಜಾನುವಾರುಗಳು ಇವಾಗಿವೆ. ಘಟನೆಯಿಂದ ದನದ ಕೊಟ್ಟಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕೊಟ್ಟಿಗೆಯಲ್ಲಿದ್ದ ಕೃಷಿ ಸಾಮಗ್ರಿಗಳು ಹಾಗೂ ಕೆಂಪು ಒಣ ಮೆಣಸಿನಕಾಯಿ ಸುಟ್ಟು ಕರಕಲಾಗಿವೆ. ಇನ್ನೆರಡು ಎತ್ತುಗಳಿಗಾದ ಗಾಯ ತಾಳಲಾರದೆ ಒದ್ದಾಡುತ್ತಿವೆ.