ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಯಶವಂತರಾಯ ಪಾಟೀಲ್ ಅಷ್ಟಗಿ ಅವರು ಸುದ್ದಿಗೋಷ್ಟಿ ನಡೆಸಿ ಎಂಟನೇ ವರ್ಷದ ರಾಜ್ಯಮಟ್ಟದ ಬಸವ ಪುರಸ್ಕಾರ ಪ್ರಶಸ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶ್ರೀ ಸಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಕೊಡಮಾಡುವ 2024 ನೇ ಸಾಲಿನ ರಾಜ್ಯಮಟ್ಟದ ಬಸವ ಪುರಸ್ಕಾರ ಹಾಗೂ ಬಸವ ಸೇವಾ ರತ್ನ ಪ್ರಶಸ್ತಿಯನ್ನು 16 ಜೂನ್ 2024 ರಂದು ಪೂಜ್ಯ ಬಸವರಾಜಪ್ಪ ಅಪ್ಪ ಸಭಾ ಭವನದಲ್ಲಿ ನಡೆಯಲಿರುವ ಕಲಬುರಗಿ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಪ್ರಧಾನ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಮತ್ತು ಸಮಾಜ ಸೇವಕ ಶರಣಗೌಡ ಪಾಳಾ ಹಾಗೂ ಸಮ್ಮೇಳನದ ಸಂಚಾಲಕ ಪೋಫೆಸರ್ ಯಶವಂತರಾಯಗೌಡ ಅಷ್ಟಗಿ ತಿಳಿಸಿದರು





