Home Uncategorized ಶಾಸಕ ಸವದಿ ನಿವಾಸಕ್ಕೆ ಶಾಸಕ ಮಹೇಂದ್ರ ಬೇಟಿ; ಬೆಳಗಾವಿ ರಾಜಕಾರಣದಲ್ಲಿ ಮಿಂಚಿನ ಸಂಚಲನ

ಶಾಸಕ ಸವದಿ ನಿವಾಸಕ್ಕೆ ಶಾಸಕ ಮಹೇಂದ್ರ ಬೇಟಿ; ಬೆಳಗಾವಿ ರಾಜಕಾರಣದಲ್ಲಿ ಮಿಂಚಿನ ಸಂಚಲನ

0
ಶಾಸಕ ಸವದಿ ನಿವಾಸಕ್ಕೆ ಶಾಸಕ ಮಹೇಂದ್ರ ಬೇಟಿ; ಬೆಳಗಾವಿ ರಾಜಕಾರಣದಲ್ಲಿ ಮಿಂಚಿನ ಸಂಚಲನ

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಬೆಳಗಾವಿ ಕಾಂಗ್ರೆಸ್‌ನಲ್ಲಿ ಭಿನ್ನಮತದ ಬಿರುಗಾಳಿ ಬೀಸುತ್ತಿದ್ದೆ, ನಿನ್ನೆ ಅಷ್ಟೇ ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಶಾಸಕ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತಿದ್ದಂತೆ ಬೆಳಗಾವಿ ರಾಜಕಾರಣದಲ್ಲಿ ಮಿಂಚಿನ ಸಂಚಲನ ಪ್ರಾರಂಭವಾಗಿದ್ದು ಅಥಣಿ ಶಾಸಕ ಲಕ್ಷ್ಮಣ್ ಸವದಿ ನಿವಾಸಕ್ಕೆ ಕುಡಚಿ ಶಾಸಕ ಮಹೇಂದ್ರ ತಮ್ಮನ್ನವರ್ ಬೇಟಿ ನೀಡಿ ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

ಲೋಕೋಪಯೋಗಿ ಹಾಗು ಬೆಳಗಾವಿ ಜಿಲ್ಲಾ ಉಸ್ತುವಾರಿ ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಅಥಣಿ  ಶಾಸಕ ಲಕ್ಷ್ಮಣ್ ಸವದಿ ಕುಡಚಿ ಶಾಸಕ ಮಹೇಂದ್ರ ತಮ್ಮನ್ನವರ್ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಬೆಳಗಾವಿ ರಾಜಕಾರಣದಲ್ಲಿ ಸಂಚಲನ ಮುಡಸಿದೆ.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ  ಅಥಣಿಯಲ್ಲಿ ಇರುವ ನಿವಾಸಕ್ಕೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ದಿಢೀರ್ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ , ಸತೀಶ್ ಜಾರಕಿಹೊಳಿ ಈ ಇಬ್ಬರು ನಾಯಕರನ್ನೇ ಟಾರ್ಗೆಟ್ ಮಾಡಿ ಬಹಿರಂಗ ಮಾತಿನ ಯುದ್ಧ ಸಾರಿದರು.

ಅಥಣಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬೆಂಬಲಿಗರು ಬಿಜೆಪಿಗೆ ಬೆಂಬಲಿಸಿದ್ದಾರೆ ಹಾಗೂ

ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಪಕ್ಷೇತರ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ‌ಂದು ಸಚಿವ ಸತೀಶ್ ಜಾರಕಿಹೊಳಿ ಕಳೆದ ಮೂರು ದಿನಗಳಿಂದ ಸವದಿ, ತಮ್ಮಣ್ಣವರ ವಿರುದ್ಧ ಸತೀಶ್ ವಾಗ್ದಾಳಿ ನಡೆಸಿದರು.

ಸತೀಶ್ ಆರೋಪದ ಬೆನ್ನಲ್ಲೇ ಉಭಯ ನಾಯಕರ ಭೇಟಿ, ಸುದೀರ್ಘ ಮಾತುಕತೆ ನಡೆಸಿದ್ದಾರೆ ಮಾತೊಂದು ಕಡೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಈ ಎರಡೂ ಗುಂಪಿನ ಸದಸ್ಯರಿಂದ ಅಂತರ ಕಾಯ್ದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here

error: Content is protected !!