Google search engine
ಮನೆCOOKING WITH KITCHEN TIPSಪೈನಾಪಲ್ ಕೇಸರಿಬಾತ್ ಮಾಡುವ ವಿಧಾನ

ಪೈನಾಪಲ್ ಕೇಸರಿಬಾತ್ ಮಾಡುವ ವಿಧಾನ

ಪೈನಾಪಲ್ ಕೇಸರಿಬಾತ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?

1.ಪೈನಾಪಲ್

2.ತುಪ್ಪ

  1. ಸಕ್ಕರೆ
  2. ರವೆ

    5. ಗೋಡಂಬಿ

    6. ದ್ರಾಕ್ಷಿ

ಪೈನಾಪಲ್ ಕೇಸರಿಬಾತ್ ಮಾಡುವ ವಿಧಾನ

ಅರ್ಧ ಕಪ್ ತುಪ್ಪ ಹಾಕಿ ಬಿಸಿಯಾದ ಬಳಿಕ ಗೋಡಂಬಿ, ದ್ರಾಕ್ಷಿ ಹಾಕಿಕೊಂಡು ಫ್ರೈ ಮಾಡಿ

ಇದೇ ತುಪ್ಪಕ್ಕೆ ರವೆಯನ್ನು ಹಾಕಿಕೊಂಡು ಹುರಿದುಕೊಳ್ಳಬೇಕು ಚೆನ್ನಾಗಿ ಫ್ರೈ ಮಾಡಬೇಕು ಇದು ಘಮ ಘಮ ಎನ್ನುವಂತೆ ಹುರಿಯಬೇಕು

ಇನ್ನೊಂದು ಒಲೆಯಲ್ಲಿ 3 ಕಪ್ ನೀರು ಹಾಕಿ ಕುದಿಬರಲು ಬಿಡಬೇಕು. ಈಗ ಹುರಿದ ಈ ರವೆಗೆ ಪಕ್ಕದಲ್ಲಿ ಕುದಿಯುತ್ತಿರುವ ನೀರನ್ನು ತೆಗೆದು ಈ ರವೆಗೆ ಹಾಕಿಕೊಳ್ಳಬೇಕು. ಹಾಗೆ ಕುದಿಬರಲು ಬಿಡಬೇಕು ಈಗ ಸಣ್ಣದಾಗಿ ಹೆಚ್ಚಿಕೊಂಡಿರುವ ಅರ್ಧ ಕಪ್ ಪೈನಾಪಲ್ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು

ಹಳದಿ ಅಥವಾ ಕೇಸರಿ ಬಣ್ಣ ಸೇರಿಸಿಕೊಂಡು ಮಿಕ್ಸ್ ಮಾಡಿ. ಇದಕ್ಕೆ ಮತ್ತೆ ಅರ್ಧ ಕಪ್ ತುಪ್ಪ ಸೇರಿಸಿಕೊಳ್ಳಬೇಕು. ಹಾಗೆ ಹುರಿದುಕೊಂಡಿದ್ದ ಗೋಡಂಬಿ ದ್ರಾಕ್ಷಿ ಹಾಕಿ ಮುಚ್ಚಳ ಮುಚ್ಚಿ 2 ನಿಮಿಷ ಬಿಡಬೇಕು ಅನಂತರ ಮುಚ್ಚಳ ತೆಗೆದರೆ ರವೆ ಸ್ವಲ್ಪ ಗಟ್ಟಿಯಾಗಿರಲಿದೆ ಈಗ ಇದಕ್ಕೆ ರವೆ ತೆಗೆದುಕೊಂಡ ಕಪ್‌ನಲ್ಲಿಯೇ ಅರ್ಧ ಕಪ್ ಸಕ್ಕರೆಯನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು ಚೆನ್ನಾಗಿ ಸಕ್ಕರೆ ಕರಗುವಂತೆ ಮಿಶ್ರಣ ಮಾಡಬೇಕು  ಒಂದೆರಡು ನಿಮಿಷದಲ್ಲಿ ಸಕ್ಕರೆ ಕರಗಲಿದೆ

1 ನಿಮಿಷ ಬಿಡಿ. ಸಣ್ಣ ಉರಿಯಲ್ಲಿ ಬಿಡಿ ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಮೃದುವಾದ ಪೈನಾಪಲ್ ಕೇಸರಿ ಬಾತ್ ಸಿದ್ದವಾಗುತ್ತೆ, ನೀವು ಸಹ ಮನೆಯಲ್ಲಿ ವಿಶೇಷ ದಿನದಂದು ಇದನ್ನು ಮಾಡಿ ಸವಿದು ನೋಡಿ. ಬಹಳ ಸುಲಭದ ಹಾಗೆ ಎಲ್ಲರಿಗೂ ಇಷ್ಟವಾಗುವ ಸಿಹಿ ತಿಂಡಿ ಇದು. ಸುಲಭವಾಗಿ ಮಾಡಬಹುದು ಹೆಚ್ಚಿನ ಪ್ರಮಾಣದಲ್ಲಿ ಮಾಡಿ ಇಟ್ಟರೆ ಇದನ್ನು ಬಹಳ ದಿನ ಇಟ್ಟು ಕೂಡ ಸವಿಯಬಹುದು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!