Home Local News ಶಿವಶರಣರ ನಡೆನುಡಿಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು

ಶಿವಶರಣರ ನಡೆನುಡಿಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು

0
ಶಿವಶರಣರ ನಡೆನುಡಿಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು  ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು

ಸೇಡಂ 12 ನೇ ಶತಮಾನದ ಪ್ರತಿಯೊಬ್ಬರ ಶಿವಶರಣರ ನಡೆನುಡಿಗಳು ನಮ್ಮ ಜೀವನದಲ್ಲಿ ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕೆಂದು ಕೊತ್ತಲಬಸವೇಶ್ವರ ದೇವಾಲಯದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮಿಜಿ ಹೇಳಿದರು ನಿಜಶರಣ ಅಂಬಿಗರ ಚೌಡಯ್ಯ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪಲ್ಲಕ್ಕಿ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿ ದಿವಂಗತ ವಿಠ್ಠಲ್ ಹೇರೂರ ಅವರು ತಮ್ಮ ಜೀವಿತ ಅವಧಿಯಲ್ಲಿ ಕೋಲಿ ಸಮಾಜವನ್ನು ಜನಜಾಗೃತಿ ಗೊಳಿಸಿ ಅಂಬಿಗರ ಚೌಡಯ್ಯನವರು ನಮ್ಮ ಗುರು ಎಂದು ಪರಿಚಿಯಿಸಿ ಸರಕಾರದಿಂದಲೇ ಜಯಂತಿ ಆಚರಿಸಲು ಹೋರಾಟ ಮಾಡಿದರು ಅವರ ತತ್ವ ಆದರ್ಶಗಳು ತಾವೆಲ್ಲರೂ ಪಾಲಿಸಬೇಕೆಂದು ಹೇಳಿದರು. ಹಾಲಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ 12 ನೇ ಶತಮಾನದಲ್ಲಿ ಬಸವಣ್ಣನವರ ಜೊತೆಗೆ ಇದ್ದು ಅವರ ದಿಟ್ಟವಾದ ನುಡಿಗಳು ನೇರವಾದ ವಚನಗಳಿಂದ ಇಡೀ ಸಮಾಜವನ್ನು ತಿದ್ದಿದಕ್ಕಾಗಿ ಅಣ್ಣ ಬಸವಣ್ಣನವರೆ ಅಂಬಿಗರ ಚೌಡಯ್ಯನವರಿಗೆ ಶರಣರಲ್ಲಿಯೇ ನೀನು ನಿಜಶರಣ ಎಂದು ಬಿರುದು ನೀಡಿದರು 12 ಶತಮಾನದಲ್ಲಿ ಹೇಳಿದ ವಚನಗಳು ಈಗ ಅದು ಸತ್ಯವಾಗಿ ಅನ್ನಿಸುತ್ತಿದೆ ಎಂದರು. ಡಾ ಬಾಗ್ಯಶ್ರೀ , ಪಲ್ಲವಿ ಗುತ್ತೇದಾರ, ಡಾ ಶ್ರೀನಿವಾಸ ಮೊಕದಮ್ ನಿಜಶರಣ ಅಂಬಿಗರ ಚೌಡಯ್ಯ ಅದ್ಯಕ್ಷ ಮಾತನಾಡಿದರು ರಾಜ್ಯ ಮಟ್ಟದ ವಿಜಯ ರತ್ನ ಪ್ರಶಸ್ತಿ ಪಡೆದ ಕೋಲಿ ಸಮಾಜದ ಮಹಿಳಾ ಘಟಕ ಅದ್ಯಕ್ಷೆ ಜ್ಯೋತಿ ಮಾರ್ಲಾ ಅವರಿಗೆ ಸತ್ಕರಿಸಲಸಯಿತು ವಿವಿಧ ಕ್ಷೇತ್ರಗಳಲ್ಲಿ ಸಾದನೆ ಗೈದ ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು ಕಾರ್ಯಕ್ರಮಕ್ಕೂ ಮುಂಚಿತವಾಗಿ ಕೊತ್ತಲ ಬಸವೇಶ್ವರ ದೇವಾಲಯದಿಂದ ನಿಜಶರಣ ಅಂಬಿಗರ ಚೌಡಯ್ಯ ನವರ ಪುತ್ಥಳಿವರಗೆ ಪುರವಂತರು ಪ್ರಯೋಗ ಕುಣಿತದೊಂದಿಗೆ ಮಹಿಳೆಯರ ಕುಂಭ ಮೇಳ ಅಲಿಗೆ,ಡೊಳ್ಳು ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಶಿವಕುಮಾರ ಪಾಟೀಲ ತೆಲ್ಕೂರ್, ಡಾ ಬಾಗ್ಯಾಶ್ರೀ, ಪಲ್ಲವಿ ಗುತ್ತೇದಾರ, ಸುನಿತಾ ತಳವಾರ, ನಿಜಶರಣ ಅಂಬಿಗರ ಚೌಡಯ್ಯ ಚಾರಿಟೇಬಲ್ ಟ್ರಸ್ಟ್ ಅದ್ಯಕ್ಷ ಡಾ ಶ್ರೀನಿವಾಸ ಮೊಕದಮ್, ಮಲ್ಲಿಕಾರ್ಜುನ ಮೆಕಾನಿಕ್,ನಾಗೇಂದ್ರಪ್ಪ ಲಿಂಗಮಪಲ್ಲಿ, ಸುಭಾಷ ಆರಬೋಳ, ಚನ್ನಬಸಪ್ಪ ನಾಟೀಕಾರ, ಪ್ರಮುಖರಾದ ಸತ್ಯಕುಮಾರ ಬಾಗೋಡಿ, ಕಾಶಿನ್ನಾಥ ನಿಡಗುಂದಾ, ಸಿದ್ದು ಬಾನರ್, ನಾಗಪ್ಪ ಕೊಳ್ಳಿ, ಹಾಗೂ ಟ್ರಸ್ಟಿನ ಪಧಾದಿಕಾರಿಗಳು,ಕೋಲಿ ಸಮಾಜದ ಗಣ್ಯರು,ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here

error: Content is protected !!