Home Uncategorized ಒಬ್ಬೊಬ್ಬ ಸಂಚುಕೋರರನ್ನು ಸುಮ್ಮನೆ ಬಿಡೋದಿಲ್ಲʼ: ಭೂತಾನ್ನಿಂದ ಮೋದಿ ಎಚ್ಚರಿಕೆ

ಒಬ್ಬೊಬ್ಬ ಸಂಚುಕೋರರನ್ನು ಸುಮ್ಮನೆ ಬಿಡೋದಿಲ್ಲʼ: ಭೂತಾನ್ನಿಂದ ಮೋದಿ ಎಚ್ಚರಿಕೆ

0
ಒಬ್ಬೊಬ್ಬ ಸಂಚುಕೋರರನ್ನು ಸುಮ್ಮನೆ ಬಿಡೋದಿಲ್ಲʼ: ಭೂತಾನ್ನಿಂದ ಮೋದಿ ಎಚ್ಚರಿಕೆ

ಒಬ್ಬೊಬ್ಬ ಸಂಚುಕೋರರನ್ನು ಸುಮ್ಮನೆ ಬಿಡೋದಿಲ್ಲʼ: ಭೂತಾನ್ನಿಂದ ಮೋದಿ ಎಚ್ಚರಿಕೆದೆಹಲಿಯಲ್ಲಿ ನಡೆದ ಕಾರು ಸ್ಫೊಟದಿಂದಾಗಿ ಅಘಾತವಾಗಿದೆ. ಸಂತ್ರಸ್ತ ಕುಟುಂಬಸ್ಥರ ಜೊತೆ ಇಡೀ ದೇಶವಿದೆ. ದಾಳಿಯಲ್ಲಿ ಭಾಗಿಯಾಗಿರುವ ಸಂಚುಕೋರರನ್ನು ಸುಮ್ಮನೆ ಬಿಡುವ ಮಾತೇ ಇಲ್ಲ. ಆಳವಾಗಿ ಪ್ರಕರಣದ ತನಿಖೆ ನಡೆಸಿ, ದುಷ್ಕರ್ಮಿಗಳನ್ನು ಹೊರ ತರಲಾಗುತ್ತದೆ ಎಂದು ಪ್ರಧಾನಿ ಮೋದಿ ಅವರು ಭೂತಾನ್ನ ರಾಜಧಾನಿ ಥಿಂಪುನಿಂದ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಫೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಭೂತಾನ್ನಿಂದ ವಿಡಿಯೋ ಹೇಳಿಕೆ ಹಂಚಿಕೊಂಡಿದ್ದಾರೆ. ʻಈ ಕೃತ್ಯದ ಹಿಂದಿರುವ ಸಂಚುಕೋರರನ್ನು ಸುಮ್ಮನೆ ಬಿಡೋದಿಲ್ಲ. ನಮ್ಮ ತನಿಖಾ ಸಂಸ್ಥೆ ಕೃತ್ಯದ ಆಳಕ್ಕಿಳಿದು ದುಷ್ಕರ್ಮಿಗಳು ಯಾರೆಂದು ಪತ್ತೆ ಮಾಡಲಿದೆʼ ಎಂದು ಎಚ್ಚರಿಕೆ ನೀಡಿದ್ದಾರೆಪ್ರಧಾನಿ ಮೋದಿ ಅವರು ಎರಡು ದಿನಗಳ ಭೂತಾನ್ ಪ್ರವಾಸದಲ್ಲಿದ್ದಾರೆ. ಭೂತಾನ್ ರಾಜಧಾನಿ ಥಿಂಪುವಿನಿಂದಲೇ ದುಷ್ಕರ್ಮಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಘಟನೆಯಲ್ಲಿ ಪ್ರಾಣಕಳೆದುಕೊಂಡ ಅಮಾಯಕರಿಗೆ ಸಂತಾಪ ಸೂಚಿಸಿದ್ದಾರೆ. ದೆಹಲಿ ಸ್ಫೋಟದ ನಂತರ ಪ್ರಧಾನಿ ಮೋದಿ ಅವರ ಮೊದಲ ಸಂದೇಶ ಇದಾಗಿದೆಇಂದು ನಾನು ಬಹಳ ದುಃಖ, ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ. ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಭೀಕರ ಘಟನೆ ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ. ತನ್ನವರನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳ ನೋವು ಏನೆಂದು ನಾನು ಅರ್ಥಮಾಡಿಕೊಳ್ಳಬಲ್ಲೆ. ಇಡೀ ದೇಶ ಇಂದು ಅವರೊಂದಿಗೆ ನಿಂತಿದೆ, ನಿಲ್ಲುತ್ತದೆʼ ಎಂದು ಪ್ರಧಾನಿ ಮೋದಿ ಅವರು ಭರವಸೆ ನೀಡಿದರುಸೋಮವಾರ ರಾತ್ರಿಯಿಡೀ ತನಿಖೆ ನಡೆಸುತ್ತಿರುವ ಎಲ್ಲಾ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದ್ದೆ. ನಮ್ಮ ತನಿಖಾ ಸಂಸ್ಥೆಗಳು ಈ ಸಂಚಿನ ಮೂಲವನ್ನು ಆಳವಾಗಿ ತನಿಖೆ ನಡೆಸಿ ಪತ್ತೆಹಚ್ಚಲಿವೆ. ಪ್ರಕರಣದ ಹಿಂದಿರುವ ಸಂಚುಕೋರರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಪ್ರತಿಯೊಬ್ಬರನ್ನು ಕಾನೂನಿನ ಮುಂದೆ ತಂದು ನಿಲ್ಲಿಸಲಾಗುತ್ತದೆ.ʼ ಎಂದು ಭೂತಾನ್ನ ರಾಜಧಾನಿ ಥಿಂಪುನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಕೆ ನೀಡಿದ್ದಾರೆ

LEAVE A REPLY

Please enter your comment!
Please enter your name here

error: Content is protected !!