100 ಸಿಸಿಟಿವಿ, 200 ಪೊಲೀಸರು…. ದಿಲ್ಲಿ ಸ್ಫೋಟ ಪ್ರಕರಣದಲ್ಲಿ ನಾಲ್ವರು ವಶಕ್ಕೆ, 13 ಜನರ ವಿಚಾರಣೆ ಕೆಂಪುಕೋಟೆ ಸಮೀಪ ಸಂಭವಿಸಿದ ಭಾರೀ ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದು, ಪೊಲೀಸರು ಮಧ್ಯರಾತ್ರಿ ದೊಡ್ಡ ಮಟ್ಟದ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಪಹಾರ್ಗಂಜ್ ಮತ್ತು ದರ್ಯಾಗಂಜ್ನ ಹೋಟೆಲ್ಗಳಲ್ಲಿ ಶೋಧ ನಡೆದಿದ್ದು ನಾಲ್ವರು ಶಂಕಿತರು ವಶಕ್ಕೆ ಪಡೆಯಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದ್ದು, ಯುಎಪಿಎ ಮತ್ತು ಸ್ಪೋಟಕ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದ್ದು, ಎನ್ಐಎ ಕೂಡ ತನಿಖೆಯಲ್ಲಿ ಕೈಜೋಡಿಸಲಿದೆ ಕೆಂಪುಕೋಟೆ ಹೊರಭಾಗದಲ್ಲಿ ಸೋಮವಾರ ಸಂಜೆ ಸಂಭವಿಸಿದ ಭಾರೀ ಬಾಂಬ್ ಸ್ಫೋಟದಲ್ಲಿ 12 ಮಂದಿ ಸಾವಿಗೀಡಾಗಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ, ದಿಲ್ಲಿ ಪೋಲಿಸರು ವ್ಯಾಪಕ ಕಾರ್ಯಾಚರಣೆಗೆ ಇಳಿದಿದ್ದು, ಮಧ್ಯರಾತ್ರಿ ನಗರದಾದ್ಯಂತ ಭಾರೀ ಶೋಧ ಕಾರ್ಯಾಚರಣೆ ನಡೆಸಿದ್ದಾರೆ
100 ಸಿಸಿಟಿವಿ, 200 ಪೊಲೀಸರು…. ದಿಲ್ಲಿ ಸ್ಫೋಟ ಪ್ರಕರಣದಲ್ಲಿ ನಾಲ್ವರು ವಶಕ್ಕೆ, 13 ಜನರ ವಿಚಾರಣೆ
100 ಸಿಸಿಟಿವಿ, 200 ಪೊಲೀಸರು.... ದಿಲ್ಲಿ ಸ್ಫೋಟ ಪ್ರಕರಣದಲ್ಲಿ ನಾಲ್ವರು ವಶಕ್ಕೆ, 13 ಜನರ ವಿಚಾರಣೆ





