ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಕಲಬುರಗಿ ಮತ್ತು ಕರ್ನಾಟಕ ಅಲೆಮಾರಿ ಅರೇ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟದ ವತಿಯಿಂದ ಕಲಬುರಗಿ ಜಿಲ್ಲೆಯ ಸಮಸ್ತ ಎಲ್ಲ ಹಿಂದುಳಿದ ವರ್ಗಗಳು ಮತ್ತು ಅಲೇಮಾರಿ ಅರೆ ಅಲೆಮಾರಿ ಸಮುದಾಯಗಳ ಬಂದುಗಳು ಸಮೀಕ್ಷೆಯಲ್ಲಿ ಭಾಗವಹಿಸಿಲು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಲಾಗಿದೆ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದಲ್ಲಿರುವ ಸುಮಾರು 2 ಕೋಟಿ ಕುಟುಂಬಗಳು, 7 ಕೋಟಿ ಜನಸಂಖ್ಯೆ ಜನರ ಸಾಮಾಜಿಕ, ಶೈಕ್ಷಣಿಕ ಜಾತಿ ಸಮೀಕ್ಷೆಯನ್ನು ಮಾಡಲು ದಿನಾಂಕ 12-6-2025 ರಂದು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ದಿನಾಂಕ 22-09-2025 ರಿಂದ 7-10-2025 ರವರೆಗೆ ರಾಜ್ಯದಲ್ಲಿ ಸುಮಾರು 1 ಲಕ್ಷ 75 ಶಿಕ್ಷಕರನ್ನು ಬಳಸಿಕೊಂಡು ಜೊತೆಗೆ ಆಶಾ ಕಾರ್ಯಕರ್ತೆಯರನ್ನು ಎನ್.ಸಿ.ಸಿ. ಎನ್.ಎಸ್.ಎಸ್. ಸ್ವಯಂ ಸೇವಕರನ್ನು ಮತ್ತು ಮಾಸ್ಟರ್ ಟೈನರಗಳನ್ನು ಒಳಗೊಂಡು ಸುಮಾರು 420 ಕೋಟಿ ರೂಪಾಯಿ ವೆಚ್ಚದಲ್ಲಿ ಹಿಂದುಳಿದವಗೆ ಬಡತನ, ನಿರುದ್ಯೋಗ, ಅನಕ್ಷರಸ್ಥೆ ಹೋಗಲಾಡಿಸಲು ಕರ್ನಾಟಕ ಸರ್ಕಾರ ವಿಶೇಷ ಪ್ರಯತ್ನವನ್ನು ಈ ಸಮೀಕ್ಷೆಯ ಮೂಲಕ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿ ಎಲ್ಲ ಹಿಂದುಳಿದ ಸಮುದಾಯದ ಬಂದುಗಳು ಈ ಸಮಿಕ್ಷೆಯಲ್ಲಿ ಪಾಲ್ಗೊಳ್ಳಬೇಕು ಅಂತ ಮನವಿ ಮಾಡಲಾಗಿದೆ
ಸಮಸ್ತ ಹಿಂದುಳಿದ ವರ್ಗಗಳು ಮತ್ತು ಅಲೇಮಾರಿ ಅರೆ ಅಲೆಮಾರಿ ಸಮುದಾಯಗಳ ಬಂದುಗಳು ಸಮೀಕ್ಷೆಯಲ್ಲಿ ಭಾಗವಹಿಸಿಲು ಮನವಿ
ಸಮಸ್ತ ಹಿಂದುಳಿದ ವರ್ಗಗಳು ಮತ್ತು ಅಲೇಮಾರಿ ಅರೆ ಅಲೆಮಾರಿ ಸಮುದಾಯಗಳ ಬಂದುಗಳು ಸಮೀಕ್ಷೆಯಲ್ಲಿ ಭಾಗವಹಿಸಿಲು ಮನವಿ





