Home Uncategorized ಕನ್ನಡ ನಾಮಫಲಕಗಳನ್ನುತೆರವು ಮಾಡಿರುವ ಕುರಿತು ಮಾತಿನ ಚಕಮಕಿ ಮುಂದುವರೆದು ಮಸಿ ಬಳದಿರುವ ಬಗ್ಗೆ ಸ್ಪಷ್ಠನೆ

ಕನ್ನಡ ನಾಮಫಲಕಗಳನ್ನುತೆರವು ಮಾಡಿರುವ ಕುರಿತು ಮಾತಿನ ಚಕಮಕಿ ಮುಂದುವರೆದು ಮಸಿ ಬಳದಿರುವ ಬಗ್ಗೆ ಸ್ಪಷ್ಠನೆ

0
ಕನ್ನಡ ನಾಮಫಲಕಗಳನ್ನುತೆರವು ಮಾಡಿರುವ ಕುರಿತು ಮಾತಿನ ಚಕಮಕಿ ಮುಂದುವರೆದು ಮಸಿ ಬಳದಿರುವ ಬಗ್ಗೆ  ಸ್ಪಷ್ಠನೆ

ನಗರಾಭಿವೃದ್ಧಿ ಕಛೇರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಲಬುರಗಿ ಜಿಲ್ಲಾ ಘಟಕ ಭೇಟಿ ನೀಡಿ, ಕಣ್ಣಿ ಮಾರ್ಕೆಟ್ ಏರಿಯಾದಲ್ಲಿರುವ ಕಟ್ಟಡದೆ ಮೇಲೆ ಇರುವ ಕನ್ನಡ ನಾಮಫಲಕಗಳನ್ನು ತೆರವು ಮಾಡಿರುವ ಕುರಿತು ನಗರಾಭಿವೃದ್ಧಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ಮುಂದುವರೆದು ಅಧಿಕಾರಿಗಳಿಗೆ ಮಸಿ ಬಳದಿರುವ ಬಗ್ಗೆ ಸಮರ್ಥಿಸಿ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಠನೆ ನೀಡಿಲಾಗಿದೆ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು ಕಡ್ಡಾಯವಾಗಿ ಪ್ರತಿಯೊಂದು ನಾಮಫಲಕಗಳಲ್ಲಿ ಶೇಕಡಾ 60% ಮೋದಲಾರ್ಧದಲ್ಲಿ ಮತ್ತು ಆಂಗ್ಲಭಾಷೆ ಕನ್ನಡವನ್ನು ಆದೇಶವಿರುತ್ತದೆ. ಹೀಗಿರುವಾಗ ಕಲಬುರಗಿ ನಗರದಲ್ಲಿ ತರಕಾರಿ ಮಾರುಕಟ್ಟೆ ಸಂಕೀರ್ಣಕಟ್ಟಡದ ಮೇಲೆ ಸ್ವಲ್ಪ ದಿನಗಳ ಹಿಂದೆ ಕನ್ನಡ ನಾಮಫಲಕಗಳನ್ನು ಅಳವಡಿಸಲಾಗಿತ್ತು. ಹೀಗಿರುವಾಗ ಎಂ.ಎಸ್.ಕೆ. ಮಿಲ್ ನಲ್ಲಿರುವಂಥ ಮುಸಲ್ಮಾನ ಬಾಂಧವರು ಕನ್ನಡ ನಮ್ಮ ಮಾತೃ ಭಾಷೆ ನಾವು ಬಳಸಲೇಬೇಕು. ಆದರೆ ಉರ್ದು ಭಾಷೆಯ ಕಡಗಣನೆ ಆಗಿದೆ. ದಯವಿಟ್ಟು ಉರ್ದು ಭಾಷೆ ಅಳವಡಿಸಿ ಎಂದು ಮಾಧ್ಯಮದವರ ಮುಖಾಂತರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆದಾದನಂತರ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ಅಧಿಕಾರಿಯು ಅಲ್ಲಿ ಉರ್ದು ಭಾಷೆಯನ್ನು ಅಳವಡಿಸಿದೆ. ಕನ್ನಡ ಭಾಷೆಯನ್ನು ತೆರವುಗೊಳಿಸಿದ್ದಾರೆ. ಈ ವಿಷಯವಾಗಿ ನಾವು ತರಕಾರಿ ಮಾರುಕಟ್ಟೆ ಸಂಕೀರ್ಣಕ್ಕೆ ತೆರಳಿ ವಿಚಾರಿಸಿದಾಗ ಯಾಕೆ ಕನ್ನಡ ನಾಮಫಲಕಗಳನ್ನು ತೆರವುಗೊಳಿಸಿದ್ದೀರಿ ಎಂದು ವಿಚಾರಿಸಿದಾಗ ಉರ್ದು ಭಾಷೆಯನ್ನು ಅಳವಡಿಸಿಲ್ಲ. ಹಾಗಾಗಿ ಈ ನಾಮಫಲಕವನ್ನು ತೆರವುಗೊಳಿಸಿದ್ದಾರೆ ಎಂದು ಉತ್ತರವನ್ನು ಕೊಟ್ಟದ್ದಾರೆ. ಈ ವಿಚಾರವಾಗಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡ ಕರವೇ ಕಾರ್ಯಕರ್ತರು ಕಚೇರಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಇದನ್ನು ನಾವು ತೆರವು ಗೊಳಿಸಿಲ್ಲ. ಇದನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಅಧಿಕಾರಿಗಳು ಬಂದಾಗ ನಾವು ಶಾಂತ ರೀತಿಯಿಂದ ಅವರಿಗೆ ಮನವಿ ಮಾಡಿಕೊಳ್ಳುತ್ತೇವೆ. ಕರ್ನಾಟಕ ಸರ್ಕಾರದ ಆದೇಶದಂತೆ ಕನ್ನಡದ ನಾಮಫಲಕವನ್ನು ಬಳಸುವುದು ಹಾಗೂ ಹಾಕುವುದು ತಮ್ಮ ಕರ್ತವ್ಯವಾಗಿರುತ್ತದೆ. ಎಂದು ಹೇಳಿದಾಗ ಅವರು ನಮಗೆ ನಾವು ಸಭೆ ಮಾಡುತ್ತೇವೆ. ಸಭೆ ಮಾಡಿ ನಿರ್ಣಯವನ್ನು ತೆಗೆದುಕೊಳ್ಳುತ್ತೇವೆ ಎಂದು ಹಾರಿಕೆ ಉತ್ತರವನ್ನು ಕೊಡುತ್ತಾರೆ. ಹೀಗಾಗಿ ಅಧಿಕಾರಿಗಳು ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಮಸಿ ಬಳೆದಿದ್ದಾರೆ ಅದನ್ನ ರಾಜಕೀಯವಾಗಿ ಬಳಸಿಕೊಂಡು ನಮ್ಮನ್ನ ಬಂಧನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ

LEAVE A REPLY

Please enter your comment!
Please enter your name here

error: Content is protected !!