ಚಿತ್ತಾಪುರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದ ಆವರಣದಲ್ಲಿ ವಿಶ್ವಹಿಂದೂ ಪರಿಷತ್ ಚಿತ್ತಾಪುರ ಪ್ರಖಂಡ ಕಲಬುರ್ಗಿ ಗ್ರಾಮಾಂತರ ಜಿಲ್ಲೆ ವತಿಯಿಂದ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಶ್ವ ಹಿಂದೂ ಪರಿಷದ್ ಷಷ್ಠಿಪೂರ್ತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ,
ಕೆಲವರು ಹಿಂದುಗಳಿಗೆ ವಿವಿಧ ಆಸೆಗಳನ್ನು ತೋರಿಸಿ ಮತಾಂತರ ಮಾಡುತ್ತಿದ್ದಾರೆ.ಮತಾಂತರ ಹಿಂದೂ ಧರ್ಮಕ್ಕೆ ಅಂಟಿದ ಪಿಡುಗು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಪ್ರಮುಖ ಕೃಷ್ಣ ಜೋತಿ ಹೇಳಿದರು.
ಹಿಂದೂ ಧರ್ಮ ಅತಿ ಪ್ರಾಚೀನ ಧರ್ಮ, ಆದರೆ ಜಾತಿ ಜಾತಿ ಹೆಸರಿನಲ್ಲಿ ಒಡೆದು ಹೋಗಿದೆ.ಹಿಂದೂ ಧರ್ಮದ ಮೇಲೆ ಕ್ರಿಶ್ಚನ್ ಮಷಿನರಿಗಳು ಮತಾಂತರ ಮಾಡುವುದು ಹಾಗೂ లవా ಜಿಹಾದ್ ಹೆಸರಿನಲ್ಲಿ ನಮ್ಮಹೆಣ್ಣುಮಕ್ಕಳ ಮೇಲೆಕಣ್ಣು ಹಾಕಿ ಜಿಹಾದ್ ಪದದ ವಿರುದ್ಧ ಕೆಲಸ ಮಾಡುತ್ತಿದ್ದಾರೆ.ಅಂತವರ ವಿರುದ್ಧ ವಿಶ್ವಹಿಂದೂ ಧರ್ಮದ ಸಂರಕ್ಷಣೆ ಮಾಡುವುದು ಕೇವಲ ವಿಶ್ವಹಿಂದೂ ಪರಿಷದ್ ಕೆಲಸವಲ್ಲ, ಪ್ರತಿಯೊಬ್ಬ ಹಿಂದೂ ಕೂಡ ಧರ್ಮ ರಕ್ಷಣೆ ಮಾಡಬೇಕು ಎಂದು ಹೇಳಿದರು.
ಓರಿಯಂಟ್ ಕಂಪನಿಯ ಸಹಾಯಕ ಉಪಾಧ್ಯಕ್ಷ ಸಾಚಿಕುಮಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಗವಾನ್ ಶ್ರೀಕೃಷ್ಣ ಹಿರಿಯರಿಗೆ, ಮಹಿಳೆಯರಿಗೆ ಸೇರಿ ಸಕಲ ಜೀವರಾಶಿ ಗಳಿಗೆ ಗೌರವ ಕೊಡಬೇಕು ಎಂದು ಹೇಳಿದ್ದಾರೆ ನಮ್ಮ ಧರ್ಮದ ಮೌಲ್ಯಗಳನ್ನು ನಾವು ಮರೆಯಬಾರದು, ಹಿಂದೂ ಧರ್ಮದ ರಕ್ಷಣೆಗೆ ನಾವೆಲ್ಲ ಒಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕಂಬಳೆಶ್ವರ ಮಠದ ಸೋಮಶೇಖರ ಶಿವಾಚಾರ್ಯರು, ಅವದೂತ ನಾಗಲಿಂಗ ಶರಣರು,ಶಿವಕುಮಾರ್ ರೇಣುಕಾ ಬಿರಾದಾರ, ಪ್ರದೀಪ್ ಪಾಟೀಲ್ ಸೇಡಂ ಪ್ರಮುಖರಾದ ಬಸವರಾಜ ಬೆಣ್ಣೂರಕರ್, ಯಲ್ಲಾಲಿಂಗ ಭಂಕುರ, ನಾಗರಾಜ್ ಭಂಕಲಗಿ, ಗೋಪಾಲ್ ರಾಠೋಡ್, ಮೇಫರಾಜ್ ಗುತ್ತೇದಾರ, ಮಲ್ಲಿಕಾರ್ಜುನ ಪೂಜಾರಿ, ರವೀಂದ್ರ ಸಜ್ಜನಶೆಟ್ಟಿ,ಕೊಟ್ಟೇಶ್ವರ್ ರೇಷ್ಠ, ಆನಂದ ಪಾಟೀಲ್ ನರಿಬೋಳ,ಬಸವರಾಜ್ ಹೂಗಾರ್, ಸಂತೋಷ ಹಾವೇರಿ, ಮಲ್ಲಶೆಟ್ಟಿ ಸಂಗಾವಿ, ಬಾಲಾಜಿ ಬುರಬುರೇ, ಮಹಾದೇವ ಅಂಗಡಿ, ವಿಶ್ವರಾಧ್ಯರೆಡ್ಡಿ ಕರದಾಳ,ಮಲ್ಲಣ್ಣ ಮೂಡಬಳ, ಮಾಸ್ಟರ್ ವಿಶ್ವನಾಥ ಅಫಜಲಪುರಕರ್, ಅಜಯ್ ಬಿದ್ರಿ, ಸಾಬಣ್ಣ ಪೂಜಾರಿ, ಸುವರ್ಣ ಶಿಲ್ಪಿ, ಲಕ್ಷ್ಮೀ ಮಟ್ಟಿ ಸಕ್ಕುಭಾಯಿ ಕುಲಕರ್ಣಿ, ಶ್ಯಾಮ್ ಮೇಧಾ ಸೇರಿದಂತೆ ಇತರರಿ ದ್ದರು