ಚಿತ್ತಾಪುರ: ತಿಂಗಳ ಹಿಂದೆ ತಮ್ಮನಿಂದ ಅಣ್ಣನನ್ನೇ ಹತ್ಯೆಗೈದ ಘಟನೆ ಪೊಲೀಸರ ತನಿಖೆಯಿಂದ ಬಯಲಾಗಿದೆ.ತಾಲ್ಲೂಕಿನ ಇಟಗಾ ಗ್ರಾಮದ ಕಾಮಣ್ಣ ದೊಡ್ಡ ಹಣಮಂತ (೩೫) ಬರ್ಬರವಾಗಿ ಹತ್ಯೆಯಾದ ವ್ಯಕ್ತಿ. ಸುರೇಶ ದೊಡ್ಡ ಹಣಮಂತ ಕೊಲೆ ಮಾಡಿರುವ ಆರೋಪಿ ಎಂದು ಪೊಲೀಸರ ತನಿಖೆಯಿಂದ ಬಹಿರಂಗಗೊAಡಿದ್ದು, ಅಣ್ಣನ ಮೇಲಿನ ಸಿಟ್ಟಿನಿಂದ ಹತ್ಯೆ ಮಾಡಿರುವುದಾಗಿ ಎನ್ನಲಾಗಿದೆ.
ಜು.೫ರಂದು ಇಟಗಾ ಗ್ರಾಮದಲ್ಲಿ ಕಾಮಣ್ಣ ದೊಡ್ಡ ಹಣಮಂತ ಅವರ ಮೃತದೇಹ ಅವರ ಮನೆಯ ಸಂದಿಯಲ್ಲಿ ಬಿದ್ದಿತ್ತು. ಮನೆಯ ಛತ್ತಿನ ಮೇಲಿನಿಂದ ಬಿದ್ದು ಮೃತಪಟ್ಟಿರಬೇಕು ಎಂದು ಅಂತ್ಯಕ್ರಿಯೆ ಮಾಡಲಾಗಿತ್ತು. ಮಗನ ಸಾವಿನ ಕುರಿತು ಸಂಶಯವಿದೆ ಎಂದು ಮೃತ ಕಾಮಣ್ಣನ ತಾಯಿ ಪಾರ್ವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ಆಧರಿಸಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾಮಣ್ಣನ ಶವವನ್ನು ತಹಶೀಲ್ದಾರ್ ಅಮರೇಶ ಬಿರಾದಾರ್ ನೇತೃತ್ವದಲ್ಲಿ ಹೊರಗೆ ತೆಗೆಸಿ ಮರಣೋತ್ತರ ಶವಪರೀಕ್ಷೆ ಮಾಡಿಸಿದ್ದರು. ಶವ ಪರೀಕ್ಷೆ ವರದಿ ಬಳಿಕ ಕೊಲೆ ಆಗಿರುವ ಕುರಿತು ಖಚಿತಪಡಿಸಿಕೊಂಡು ಆ. ೨೩ ರಂದು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಸೇಡA ತಾಲೂಕಿನ ತೊಲಮಾಮಡಿ ಗ್ರಾಮದಲ್ಲಿ ಹೊಲ ಖರೀದಿ ಮಾಡಿದ್ದು, ಮಾರಾಟ ಮಾಡುವುದು ಬೇಡ ಎಂದರೂ ಕೇಳದೆ ಎರಡು ತಿಂಗಳ ಹಿಂದೆ ೫೬ ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ. ಹೊಲ ಮಾರಿದ ಸ್ವಲ್ಪ ಹಣವನ್ನು ಕಾಮಣ್ಣ ತಂದೆ-ತಾಯಿ ಹೆಸರಿನಲ್ಲಿ, ಇನ್ನೂ ಸ್ವಲ್ಪ ಹಣವನ್ನು ತನ್ನ ಹೆಸರಿನಲ್ಲಿ ಇಟ್ಟಿದ್ದ. ಆದರೆ ತಮ್ಮ ಸುರೇಶನ ಹೆಸರಿನಲ್ಲಿ ಹಣ ಇಟ್ಟಿರಲಿಲ್ಲ. ಕೇಳಿದರೂ ಕೊಟ್ಟಿರಲಿಲ್ಲ ಎಂದು ತಿಳಿದು ಬಂದಿದೆ.
ಅಣ್ಞನ ವಿರುದ್ದ ವೈಷಮ್ಯ ಇಟ್ಟುಕೊಂಡ ತಮ್ಮ ಕೊಲೆ ಮಾಡಿವ ಮೂಲಕ ತನ್ನ ಕ್ರೌರ್ಯವನ್ನು ಮೆರದಿದ್ದಾನೆ ಎಂದು ತಿಳಿದ್ದು ಬಂದಿದ್ದೆ, ಬಂಧಿತ ಕೊಲೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಸ್ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್ಪಿ ಶ್ರೀನಿಧಿ, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರ ನೇತೃತ್ವದಲ್ಲಿ ರಚಿಸಲಾಗಿರುವ ತನಿಖಾ ತಂಡದ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐಗಳಾದ ಶ್ರೀಶೈಲ್ ಅಂಬಾಟಿ, ಚಂದ್ರಾಮ (ತನಿಖೆ), ಎಎಸ್ಐ ಲಾಲಾಹ್ಮದ್, ಸಿಬ್ಬಂದಿ ನಾಗೇಂದ್ರ, ಬಸವರಾಜ, ಚಂದ್ರಶೇಖರ, ಸವಿಕುಮಾರ, ಅಯ್ಯಣ್ಣ, ಸಿದ್ದರಾಮೇಶ, ಈರೇಶ, ವೀರಭದ್ರ ಇದ್ದರು