ಪ್ರತಿಯೊಬ್ಬ ಧರ್ಮ ರಕ್ಷಣೆಯನ್ನು ಮಾಡುವ ಕಾಯದಲ್ಲಿ ತೊಡಗಬೇಕು ಎಂದು ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಜಗಜ್ಯೋತಿ ಬಸವೇಶ್ವರ ದೇವಾಲದಯಲ್ಲಿ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ನಮಗೆ ಧರ್ಮ ರಕ್ಷಣೆ ಮಾಡಲು ಆಗದಿದ್ದರೆ ಧರ್ಮವಂತರಾಗಿ ಬದುಕಿದರೆ ಅದೂ ಸಹ ಧರ್ಮ ರಕ್ಷಣೆಯೇ ಆಗಿರುತ್ತದೆ ಧರ್ಮವಂತರಾಗಿ ಬದುಕುವ ಮೂಲಕ ಇತರರಿಗೆ ಮಾದರಿಯಾಗಿರಬೇಕು ಎಂದು ಹೇಳಿದರು.





