Home Uncategorized ಅಜ್ನಾನದ ಕತ್ತಲೆಯಿಂದ ಹೊರಬರಬೇಕಾದರೆ ಹೃದಯ ಮಂದಿರದಲ್ಲಿ ಜ್ನಾನದ ದೀಪ ಬೆಳಸಿಕೊಳ್ಳಬೇಕು ; ಶ್ರೀ ಡಾ ಚನ್ನವೀರ ಶಿವಾಚಾರ್ಯ

ಅಜ್ನಾನದ ಕತ್ತಲೆಯಿಂದ ಹೊರಬರಬೇಕಾದರೆ ಹೃದಯ ಮಂದಿರದಲ್ಲಿ ಜ್ನಾನದ ದೀಪ ಬೆಳಸಿಕೊಳ್ಳಬೇಕು ; ಶ್ರೀ ಡಾ ಚನ್ನವೀರ ಶಿವಾಚಾರ್ಯ

0

ಅಜ್ನಾನದ ಕತ್ತಲೆಯಿಂದ ಹೊರಬರಬೇಕಾದರೆ ಹೃದಯ ಮಂದಿರದಲ್ಲಿ ಜ್ನಾನದ ದೀಪ ಬೆಳಸಿಕೊಳ್ಳಬೇಕು ಎಂದು ಹಾರಕೂಡ ಸಂಸ್ಥಾನ ಮಠದ ಡಾ ಚನ್ನವೀರ ಶಿವಚಾರ್ಯರು ನುಡಿದರ

ಸೇಡಂ ಹೃದಯ ಮಂದಿರದಲ್ಲಿ ಜ್ನಾನವೆಂಬ ದೀಪ ಬೆಳಸಿಕೊಂಡಾಗ ಅಜ್ನಾನದ ಕತ್ತಲಿನಿಂದ ಹೊರಬರಲು ಸಾದ್ಯವಾಗಲಿದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ  ಶ್ರೀ ಡಾ ಚನ್ನವೀರ ಶಿವಾಚಾರ್ಯ  ನುಡಿದರು .

ಪಟ್ಟಣದ ಕೊತ್ತಲಬಸವೇಶ್ವರ ದೇವಲಾಯದಲ್ಲಿ ತಾಲೂಕಿನ ಭಕ್ತರು ಆಯೋಜಿಸಿದ್ದ ತುಲಾಭಾರ  ಕಾರ್ಯಕ್ರಮದಲ್ಲಿ ಆಶೀರ್ವಚನ  ನೀಡಿ ಜೀವಂತ ಇದ್ದಾಗ ಭಕ್ತರ ಮನೆಗೆ ಹೋಗುವ ಗುರುಗಳು ಬಹಳಷ್ಟಿದ್ದಾರೆ  ಆದರೆ  ಭಕ್ತ  ಇಲ್ಲದಾಗ ಹೋಗುವ ಗುರುಗಳು  ಮೇಲೆತ್ತುವ ಕೆಲಸ ಮಾಡುವಲ್ಲಿ ಹಾರಕೂಡ ಮಠವಿದೆ.

ಕಷ್ಟ ಎಂದು ಬಂದ ಭಕ್ತರಿಗೆ ಶ್ರೀ ಮಠದ ಲಿಂಗೈಕ್ಯ ಶ್ರೀ ಚನ್ನಬಸವ. ಶಿವಯೋಗಿಗಳು  ಕೈ ಹಿಡಿದು ಮೇಲೆತ್ತುವ ಕೆಲಸ ಮಾಡಿದ್ದಾರೆ ಆದ್ದರಿಂದ ಹಿಂದೂ ಧರ್ಮದರ್ಮದವರಲ್ಲದೆ ಕ್ರೈಸ್ತ,ಮುಸ್ಲಿಂ,  ಸೇರಿ  ಸರ್ವ ಧರ್ಮದವರು  ಶ್ರೀ ಮಠದ ಭಕ್ತರಿದ್ದಾರೆ ಸೇಡಂ ರೈತರು ಈ ಬಾರಿ ಸಮೃದ್ಧ ಬೆಳೆಗಳನ್ನು ಬೆಳೆದಿದ್ದಾರೆ ಮುಂದಿನ  10-15 ವರ್ಷ ಇದೇ ರೀತಿಯ ಫಲ ಸಿಗುವಂತಾಗಬೇಕು ನೆನಪಿರಲಿ ರೈತ ಒಂದು ದಿನ ರಾಜ ಮಹಾರಾಜ ನಾಗಿ ಮೆರೆಯಲಿದ್ದಾನೆ ಎಂದು ಭವಿಷ್ಯ ನುಡಿದರು.

ಈ ಸಂಧರ್ಭದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಭಿವೃದ್ದಿ ಸಚಿವ ಡಾ  ಶರಣಪ್ರಕಾಶ ಪಾಟೀಲ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಜೆಡಿಎಸ್ ಜಿಲ್ಲಾದ್ಯಕ್ಷ ಬಾಲರಾಜ ಗುತ್ತೆದಾರ, ಶಿವಕುಮಾರ ಪಾಟೀಲ ತೆಲ್ಕೂರ, ರಾಜಶೇಖರ ನೀಲಂಗಿ, ನಾಗರಾಜ ಪಾಟೀಲ, ಶ್ರೀಮಂತ ಆವಂಟಿ, ಕೊತ್ತಲಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ, ಹಾಲಪಯ್ಯ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ ಇದ್ದರು.

LEAVE A REPLY

Please enter your comment!
Please enter your name here

error: Content is protected !!