Google search engine
ಮನೆUncategorizedಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರುಗಳ ಚುಣಾವಣೆ ಸೂಕ್ತ...

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರುಗಳ ಚುಣಾವಣೆ ಸೂಕ್ತ ಅಭ್ಯರ್ಥಿಗಳನ್ನೂ ಆಯ್ಕೆ ಮಾಡಿ; ಶರಣು ಮೋದಿ

ಇದೇ ತಿಂಗಳ 25 ರಂದು ಅಖಿಲ‌ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರುಗಳ ಚುಣಾವಣೆ ನಡೆಯಲಿದ್ದೂ ಚುಣಾವಣೆಯಲ್ಲಿ ಸೂಕ್ತ ಅಭ್ಯರ್ಥಿಗಳನ್ನೂ ಆಯ್ಕೆ ಮಾಡಿ ಎಂದು ಜಿಲ್ಲಾಧ್ಯಕ್ಷ ಶರಣು ಮೋದಿ ಅವರು ಮನವಿ ಮಾಡಿದ್ದಾರೆ.

 ಇಂದು ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಅಖಿಲ ಭಾರತ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ 27 ಸ್ಥಾನಗಳಿಗೆ ಕಾರ್ಯನಿರ್ವಾಹಕ ಸಮಿತಿಯ ಚುಣಾವಣೆಗೆ ಒಟ್ಟು 57 ಜನ ಕಣದಲ್ಲಿದ್ದಾರೆ. ಕಲಬುರಗಿ ಜಿಲ್ಲೆಯ ಮೂರು ಜನ ರಾಜಶೇಖರ ಸೀರಿ, ಶಶಿಕಾಂತ ಪಾಟೀಲ್ ಹಾಗೂ ಸಂತೋಷ ಪಾಟೀಲ್ ಸರಡಗಿ ಇವರು ಕಣದಲ್ಲಿದ್ದಾರೆ. ಈಗಾಗಲೇ ರಾಜ್ಯ ಘಟಕದ ಅಧ್ಯಕ್ಷರಾಗಿ ಶ್ರೀ ಶಂಕರ ಬಿದರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ರಾಷ್ಟ್ರೀಯ ಘಟಕದ ಕಾರ್ಯಕಾರಿ ಸಮಿತಿಗೆ ಸಚಿವರಾಗಿ ಶ್ರೀ ಶರಣಬಸಪ್ಪಾ ದರ್ಶನಾಪೂರ ಹಾಗೂ ಚಂದು ಪಾಟೀಲ್ ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಾಸಭಾದ ರಾಜ್ಯ ಘಟಕದ ಚುಣಾವಣೆಗೆ ರಾಜ್ಯದಲ್ಲಿ ಸುಮಾರು ಮೂವತ್ತೊಂದು ಸಾವಿರ ಮತದಾರರಿದ್ದಾರೆ. ಅದರಲ್ಲಿ ಕಲಬುರಗಿ ಜಿಲ್ಲೆಯಲ್ಲಿ 1933 ಮತದಾರರು ಇದ್ದೂ, ಮತದಾನವು 25 ರಂದು ಬೆಳಿಗ್ಗೆ 8 ಗಂಟೆಯಿಂದ 5 ಗಂಟೆಯವರೆಗೆ ಉದ್ಯಾನವನದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸಂದರ್ಭದಲ್ಲಿ ಶರಣು ಪಪ್ಪಾ, ಸುಧಾ ಹಾಲ್ಕಯಿ, ಶಶಿಕಾಂತ ಪಾಟೀಲ್, ಸೋಮಶೇಖರ ಹಿರೇಮಠ, ರಾಜಶೇಖರ ಸೀರಿ ಇದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!