ರೈತರಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಕಾಣಿಕೆಯೇ ಬೆಲೆ ಏರಿಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರು ಒಂದು ಚಿಕ್ಕ ಹೊಲದ ಪಾಣಿ ತೆಗೆದುಕೊಳ್ಳಬೇಕಾದರೆ 10 ರೂಪಾಯಿ ಇದ್ದ ಬೆಲೆ ಈಗ 25 ರಿಂದ 35 ರೂಪಾಯಿ ಆಗಿದೆ. ಅದೇ ರೀತಿ ವಿದ್ಯುತ್ ಬಿಲ್ 4 ರೂಪಾಯಿ ಇದ್ದಿದ್ದು 7 ರೂಪಾಯಿಗೆ ಏರಿಕೆ ಆಗಿದೆ ಎಂದು ಬಿವೈ ವಿಜಯೇಂದ್ರ ಉಲ್ಲೇಖಿಸಿದರು.





