Google search engine
ಮನೆLocal Newsಶ್ರೀ ರೇಣುಕಾಚಾರ್ಯರ ತತ್ವ , ಸಿದ್ಧಾಂತಗಳು ಜಗತ್ತಿನ ಎಲ್ಲರ ಒಳಿತನ್ನು ಬಯಸುತ್ತದೆ: ಡಾ: ಪಿ ಶಿವರಾಜು

ಶ್ರೀ ರೇಣುಕಾಚಾರ್ಯರ ತತ್ವ , ಸಿದ್ಧಾಂತಗಳು ಜಗತ್ತಿನ ಎಲ್ಲರ ಒಳಿತನ್ನು ಬಯಸುತ್ತದೆ: ಡಾ: ಪಿ ಶಿವರಾಜು

ಶ್ರೀ ರೇಣುಕಾಚಾರ್ಯರ ತತ್ವ , ಸಿದ್ಧಾಂತಗಳು ಜಗತ್ತಿನ ಎಲ್ಲರ ಒಳಿತನ್ನು ಬಯಸುತ್ತದೆ: ಡಾ: ಪಿ ಶಿವರಾಜು

ಶ್ರೀ ರೇಣುಕಾಚಾರ್ಯರ ತತ್ವ , ಸಿದ್ಧಾಂತಗಳು ಜಗತ್ತಿನ ಎಲ್ಲರ ಒಳಿತನ್ನು ಬಯಸುತ್ತದೆ: ಡಾ: ಪಿ ಶಿವರಾಜು ಮೈಸೂರು,ಮಾ.1(ಕರ್ನಾಟಕ ವಾರ್ತೆ):- ಶ್ರೀ ರೇಣುಕಾಚಾರ್ಯರ ತತ್ವ , ಸಿದ್ಧಾಂತಗಳು ಜಗತ್ತಿನ ಎಲ್ಲರ ಒಳಿತನ್ನು ಬಯಸುತ್ತದೆ. ‘ಮಾನವ ಕುಲಕ್ಕೆ ಒಳಿತಾಗಲಿ’ ಎಂಬ ಉದಾತ್ತ ಚಿಂತನೆ ನಮಗೆ ಎಂದೆಂದಿಗೂ ಆದರ್ಶವಾಗಿರಬೇಕು.ಅವರ ಆದರ್ಶದ ದಾರಿದೀಪದಲ್ಲಿ ಶಾಂತಿ, ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ.ಶಿವರಾಜು ಅವರು ತಿಳಿಸಿದರು. ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಶ್ರೀ ರೇಣುಕಾಚಾರ್ಯ ಜಯಂತೋತ್ಸವ ಸಮಿತಿ ವತಿಯಿಂದ ಕರ್ನಾಟಕದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು . ನಾವು ಸುಮಾರು 30 ಕ್ಕು ಹೆಚ್ಚು ಜಯಂತಿಯನ್ನು ಪ್ರತಿ ವರ್ಷ ಆಚರಿಸುತ್ತೇವೆ. ಒಂದು ಸಮಾಜದ ಕಣ್ಣಾಗಿ ಇಡೀ ಸಮಾಜದ ಮಾನವೀಯತೆಯ ಪ್ರತಿರೂಪವಾಗಿ ಹಾಗೂ ಮನುಷ್ಯ ಕುಲಕ್ಕೆ ಬೆಳಕಾಗಿ ಬಂದಂತಹ ವ್ಯಕ್ತಿಗಳ ಜಯಂತಿಯನ್ನು ಆಚರಿಸುವುದರ ಜೊತೆಗೆ ಅವರ ಆದರ್ಶಗಳನ್ನು ನಾವು ಪಾಲನೆ ಮಾಡಬೇಕು ಎಂದು ಹೇಳಿದರು. ರೇಣುಕಾಚಾರ್ಯ ತತ್ವಗಳು ಹಾಗೂ ಅವರು ಈ ಸಮಾಜಕ್ಕೆ ನೀಡಿದಂತಹ ಸಿದ್ಧಾಂತಗಳು, ಮಾನವೀಯ ಮೌಲ್ಯಗಳು, ಆದರ್ಶಗಳು ಹಾಗೂ ಅವರು ಬಿತ್ತಿದಂತಹ ಬೀಜ ಇಂದು ಹೆಮ್ಮೆರವಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ಒಂದು ಫಲ ಕೊಡುವ ಮರವಾಗಿ ಬೆಳೆದಿದೆ ಎಂದು ತಿಳಿಸಿದರು. ವೀರಶೈವ ಪರಂಪರೆಯಲ್ಲಿ ಇಡೀ ಸಮುದಾಯಕ್ಕೆ ಆದರ್ಶದಾಯಕ ಸಿದ್ಧಾಂತವನ್ನು ಪರಿಚಯಿಸಿದಂತಹ ಮಹನೀಯ ವ್ಯಕ್ತಿ ರೇಣುಕಾಚಾರ್ಯ. ಶ್ರೀ ರೇಣುಕಾಚಾರ್ಯರು ಎಂದಿಗೂ ಅಮರವಾಗಿ ಇರುತ್ತಾರೆ ಹಾಗೂ ನಮ್ಮೆಲ್ಲರ ಜೀವನದಲ್ಲಿ ಆದರ್ಶವಾಗಿ ಇರುತ್ತಾರೆ ಎಂದು ಹೇಳಿದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!