Google search engine
ಮನೆLocal Newsಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡ ಪಿಡಿಓ ಮೇಲೆ ಕ್ರಮಕೈಗೊಳ್ಳಲು ಮೇಲಾಧಿಕಾರಿ ಹಿಂದೇಟು ಆರೋಪ

ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡ ಪಿಡಿಓ ಮೇಲೆ ಕ್ರಮಕೈಗೊಳ್ಳಲು ಮೇಲಾಧಿಕಾರಿ ಹಿಂದೇಟು ಆರೋಪ

ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡ ಪಿಡಿಓ ಮೇಲೆ ಕ್ರಮಕೈಗೊಳ್ಳಲು ಮೇಲಾಧಿಕಾರಿ ಹಿಂದೇಟು ಆರೋಪ

ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡ ಪಿಡಿಓ ಮೇಲೆ ಕ್ರಮಕೈಗೊಳ್ಳಲು ಮೇಲಾಧಿಕಾರಿ ಹಿಂದೇಟು ಆರೋಪ ಯಾದಗಿರಿ ತಾಲೂಕಿನ ಮುದ್ನಾಳ ಗ್ರಾ.ಪಂ.ಯಲ್ಲಿ ನೀಲಕಂಠ ಪಿಡಿಓ ರವರು ಹಣ ದುರ್ಬಳಕೆ ಮಾಡಿಕೊಂಡಿದ್ದು, ಇವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ, ಅಮಾನತ್ತಿನಲ್ಲಿಟ್ಟು ತನಿಖೆ ಮಾಡಿ, ದುರ್ಬಳಕೆಯಾದ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಮರು ಪಾವತಿಸಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ ಆಗ್ರಹಿಸಿದ್ದಾರೆ ಯಾದಗಿರಿ ತಾಲೂಕಿನ ಮುದ್ನಾಳ ಗ್ರಾ.ಪಂ.ಯಲ್ಲಿ ನೀಲಕಂಠ ಪಿಡಿಓರವರ ಅವಧಿಯಲ್ಲಿ ೧೫ ನೇ ಹಣಕಾಸು ಯೋಜನೆಯಡಿ & ತೆರಿಗೆ ಸಂಗ್ರಹ, ಮನರೇಗಾ ಯೋಜನೆಯಡಿಯಲ್ಲಿ ಖರ್ಚಾದ ಮೊತ್ತದ ಬಗ್ಗೆ ಕೂಲಂಕೂಶವಾಗಿ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ. ಹಾಗೂ ೨೦೨೧-೨೨ ನೇ ಸಾಲಿನಲ್ಲಿ ಪ್ರಾರಂಭಿಸಿದ ಗೋದಾಮ ಕಾಮಗಾರಿ ಸಂಪೂರ್ಣವಾಗಿ ಅಂದಾಜು ಪ್ರತಿಕೆ ಪ್ರಕಾರ ಅನುಷ್ಠಾನಗೊಳಿಸಿದಿದ್ದರೂ ಸಹ ಮುಂಗಡವಾಗಿ ಒಂದೇ ದಿನ ದಿ:೦೩-೧೦-೨೦೨೩ ರಂದು ರೂ. ೧೮,೬೪,೦೦೦/- ಪಾವತಿಸಿದ್ದು, ಮತ್ತು ೨೦೨೧-೨೨ ನೇ ಸಾಲಿನ ಠಾಣಗುಂದಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ತಳಕ ಗ್ರಾಮದ ಬಸವನಕಟ್ಟೆಯಲ್ಲಿ ದನ ಕರುಗಳಿಗೆ ಕುಡಿಯುವ ನೀರಿನ ತೊಟ್ಟಿ, ಬಸವನ ದೇವಸ್ಥಾನದಿಂದ ಹಳ್ಳದವರೆಗೆ ಸಿಸಿ ಚರಂಡಿ ಮಾಡದೇ, ನಕಲಿ ದಾಖಲೆಗಳು ಸೃಷ್ಟಿಸಿ, ಸುಮಾರು ರೂ. ೧.೬೦ ಲಕ್ಷ ಅನಾಮತ್ ಹಣ ಲೂಟಿ ಮಾಡಿದ್ದಾರೆ.ಮುದ್ನಾಳ ಗ್ರಾಮದ ಮಾಜಿ ಗ್ರಾ.ಪಂ. ಉಪಾಧ್ಯಕ್ಷರಾದ ಸುಭಾಷರಡ್ಡಿ ರವರ ಕುಟುಂಬದಲ್ಲಿ ೪೭-೦೦ ಎಕರೆ ಜಮೀನು ಇದ್ದು, ಇಬ್ಬರು ಸರ್ಕಾರಿ ನೌಕರರ ಇದ್ದರೂ ಮೃತಪಟ್ಟವರ ಬಳಿ ೨ ಬಾರಿ ಅಕ್ರಮವಾಗಿ ಸರ್ಕಾರಿ ಜಾಗ ಸೇರ್ಪಡೆ ಮಾಡಿದ್ದು, ೧-೭೩/೨ ೨೦೦೯-೧೦ ಆಸ್ತಿ ನಂ. ೧-೭೪ ಮಲ್ಲೇಶಪ್ಪಗೌಡ ತಂ/ ಲಕ್ಷö್ಮಣಗೌಡ ಮೃತಪಟ್ಟು ೫೦ ವರ್ಷ ಮೇಲ್ಪಟ್ಟು ಆಗಿದ್ದು, ಸದರಿ ಹಣಮಂತರಡ್ಡಿ ಬಿಲ್ಕಲೆಕ್ಟರ್ ಆಗಿದ್ದ ಅವಧಿಯಲ್ಲಿ ೨೦೦೩-೦೪ ರಲ್ಲಿ & ೨೦೦೯-೧೦ ರಲ್ಲಿ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಮೃತಪಟ್ಟವರ ಹೆಸರು ಯಾವುದೇ ದಾಖಲೆ ಇಲ್ಲದೇ, ಹೆಸರು ಸೇರ್ಪಡೆ ಮಾಡಿದ್ದು, ಕಾನೂನು ಬಾಹಿರವಾಗಿದೆ, ಸಾಯಬಣ್ಣ ತಂ/ ತಿಮ್ಮಣ್ಣ ಅವರ ಹತ್ತಿರ ಖರೀದಿ ಮಾಡಿದ ಜಾಗ ಎಂದು ತಿಳಿಸಿದ್ದಾರೆ. ಆದರೆ ಇದು ಸುಳ್ಳು ಮಾಹಿತಿ ನೀಡಿದ್ದು, ಸಾಯಬಣ್ಣ ಖರೀದಿಗೆ ಕೊಟ್ಟ ಜಾಗ ಆಗಿರುವುದಿಲ್ಲ. ಈ ಎಲ್ಲಾ ಆಸ್ತಿ ಮಾಲೀಕರ ಮೂಲ ದಾಖಲೆಗಳು ಪರಿಶೀಲನೆ ಮಾಡಿರುವುದಿಲ್ಲ, ಅಲ್ಲದೇ ಸದರಿ ಜಾಗದಲ್ಲಿ ಯಾವುದೇ ದಾಖಲೆ ಇಲ್ಲದೇ ಇದ್ದರೂ, ಪರವಾನಿಗೆ, ೯ & ೧೧ ಇಲ್ಲದೇ ಇದ್ದರೂ ಅಕ್ರವiವಾಗಿ ಸುಭಾಷರಡ್ಡಿ ಮನೆ ನಿರ್ಮಿಸಿದ್ದು, ಬಡವರಿಗೆ ೨೦*೩೦ ರ ನಿವೇಶನ ನೀಡಬೇಕೆಂದು ಸರ್ಕಾರದ ನಿಯಮವಿದ್ದು, ಆದರೆ ನಿಯಮ ಗಾಳಿಗೆ ತೂರಿ, ಅಕ್ರಮವಾಗಿ ೬೦*೮೦ ರಷ್ಟು ಅಕ್ರಮ ಮನೆ ಕಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!