Google search engine
ಮನೆUncategorizedಭಾರತೀಯ ರೂಪಾಯಿ ಅಮೆರಿಕನ್ ಡಾಲರ್ ಎದುರು ಕುಸಿಯುತ್ತಿರುವ ಬಗ್ಗೆ ಕಾಂಗ್ರೆಸ್ ಪಕ್ಷ ಟೀಕಿಸಿದೆ

ಭಾರತೀಯ ರೂಪಾಯಿ ಅಮೆರಿಕನ್ ಡಾಲರ್ ಎದುರು ಕುಸಿಯುತ್ತಿರುವ ಬಗ್ಗೆ ಕಾಂಗ್ರೆಸ್ ಪಕ್ಷ ಟೀಕಿಸಿದೆ

ಭಾರತೀಯ ರೂಪಾಯಿ ಅಮೆರಿಕನ್ ಡಾಲರ್ ಎದುರು ಕುಸಿಯುತ್ತಿರುವ ಬಗ್ಗೆ ಕಾಂಗ್ರೆಸ್ ಪಕ್ಷ ಟೀಕಿಸಿದೆ

ಭಾರತೀಯ ರೂಪಾಯಿ ಅಮೆರಿಕನ್ ಡಾಲರ್ ಎದುರು ಕುಸಿಯುತ್ತಿರುವ ಬಗ್ಗೆ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದೆ. 2013 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಆಗಿನ ಯುಪಿಎ ಸರ್ಕಾರದ ವಿರುದ್ಧ ಮೋದಿ ಅವರು ನೀಡಿದ್ದ ಹೇಳಿಕೆಗಳನ್ನು ಕಾಂಗ್ರೆಸ್ ನೆನಪಿಸಿದೆ ರೂಪಾಯಿ ಅಮೆರಿಕನ್ ಡಾಲರ್ ಎದುರು 98 ಪೈಸೆ ಕುಸಿದು, 89.66ರ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿತ್ತು. ದೇಶೀಯ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ಗೆ ಭಾರೀ ಬೇಡಿಕೆ, ಸ್ಥಳೀಯ ಮತ್ತು ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ವ್ಯಾಪಕ ಮಾರಾಟದ ಒತ್ತಡ, ಮತ್ತು ವ್ಯಾಪಾರ ಸಂಬಂಧಿತ ಅನಿಶ್ಚಿತತೆಗಳು ಈ ಕುಸಿತಕ್ಕೆ ಕಾರಣವಾಗಿವೆ. ಸೋಮವಾರ, ರೂಪಾಯಿ 89.46ರಲ್ಲಿ ವಹಿವಾಟು ಆರಂಭಿಸಿ, 89.17ರ ವರೆಗೆ ಏರಿತು. ಇದು ಹಿಂದಿನ ದಿನಕ್ಕಿಂತ 49 ಪೈಸೆ ಏರಿಕೆಯಾಗಿದೆಈ ಬಗ್ಗೆ ಕಾಂಗ್ರೆಸ್ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದಾರೆ. ” ರೂಪಾಯಿ ಡಾಲರ್ ಎದುರು ನಿರಂತರವಾಗಿ ಕುಸಿಯುತ್ತಿದೆ. ಇದು 90 ರೂಪಾಯಿಗಳ ಗಡಿಯನ್ನು ದಾಟುವ ಹಂತದಲ್ಲಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು 2013 ರ ತಮ್ಮ ಹೇಳಿಕೆಗಳನ್ನು ನೆನಪಿಸಿಕೊಳ್ಳುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಆಗ ಮೋದಿ ಅವರು, “ನೋಡಿ, ರೂಪಾಯಿ ಎಷ್ಟು ವೇಗವಾಗಿ ಕುಸಿಯುತ್ತಿದೆ. ಕೆಲವೊಮ್ಮೆ ರೂಪಾಯಿ ಮತ್ತು ದೆಹಲಿಯ ಸರ್ಕಾರ, ಯಾರ ಘನತೆ ವೇಗವಾಗಿ ಕಡಿಮೆಯಾಗುತ್ತದೆ ಎಂಬ ಸ್ಪರ್ಧೆ ನಡೆಯುತ್ತಿದೆ ಅನಿಸುತ್ತದೆ” ಎಂದು ಹೇಳಿದ್ದರು. ಈ ವಿಡಿಯೋವನ್ನು ಸಹ ಅವರು ಹಂಚಿಕೊಂಡಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!