Home Uncategorized ಸಂಪುಟ ಪುನಾರಚನೆಗೆ ರಾಹುಲ್ಗಾಂಧಿ ತಾತ್ವಿಕ ಒಪ್ಪಿಗೆ ನೀಡಿರುವ ಬೆನ್ನಲ್ಲೆ, ಸಿದ್ಧರಾಮಯ್ಯ ಅವರು ನಾಳೆ; ದೆಹಲಿಚರ್ಚೆ

ಸಂಪುಟ ಪುನಾರಚನೆಗೆ ರಾಹುಲ್ಗಾಂಧಿ ತಾತ್ವಿಕ ಒಪ್ಪಿಗೆ ನೀಡಿರುವ ಬೆನ್ನಲ್ಲೆ, ಸಿದ್ಧರಾಮಯ್ಯ ಅವರು ನಾಳೆ; ದೆಹಲಿಚರ್ಚೆ

0

ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಕಾಂಗ್ರೆಸ್ ವರಿಷ್ಠ ರಾಹುಲ್ಗಾಂಧಿ ತಾತ್ವಿಕ ಒಪ್ಪಿಗೆ ನೀಡಿರುವ ಬೆನ್ನಲ್ಲೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಾಳೆ ಮತ್ತೆ ದೆಹಲಿಗೆ ಹೋಗುತ್ತಿದ್ದು, ಸಚಿವ ಸಂಪುಟ ಪುನಾರಚನೆಯ ಸ್ವರೂಪದ ಸಂಬಂಧ ವರಿಷ್ಠರೊಡನೆ ಚರ್ಚೆ ನಡೆಸುವರು ಈ ಎಲ್ಲ ಬೆಳವಣಿಗೆಗಳ ನಡುವೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ನಡೆ ನಿಗೂಢವಾಗಿದ್ದು, ಅವರ ನಡೆ, ನಿಲುವಿನ ಮೇಲೆ ಎಲ್ಲವೂ ನಿಂತಿದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನಿನ್ನೆ ದೆಹಲಿಗೆ ತೆರಳಿ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಸಂಪುಟ ಪುನಾರಚನೆಯ ಪ್ರಸ್ತಾವವನ್ನು ಅವರ ಮುಂದಿಟ್ಟಿದ್ದು, ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ ಎಂದು ಗ್ರೀನ್ ಸಿಗ್ನ್‌ಲ್ ನೀಡಿದ್ದರು. ಸಂಪುಟ ಪುನಾರಚನೆಗೆ ರಾಹುಲ್‌ಗಾಂಧಿ ಅವರು ಸಮ್ಮತಿ ವ್ಯಕ್ತಪಡಿಸಿದ ಬಳಿಕ ಕಾಂಗ್ರೆಸ್‌ನಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ರಾಜ್ಯ ಕಾಂಗ್ರೆಸ್ನ ವಿದ್ಯಮಾನಗಳು ವರಿಷ್ಠರ ಅಂಗಳದಲ್ಲಿ ಸದ್ದು ಮಾಡುತ್ತಿವೆ. ಸಂಪುಟ ಪುನಾರಚನೆಯ ಚೆಂಡು ಈಗ ಎಐಸಿಸಿ ಅಧ್ಯಕ್ಷರ ಅಂಗಳದಲ್ಲಿದ್ದು, ಅವರ ವಿವೇಚನೆಯಂತೆ ಎಲ್ಲವೂ ತೀರ್ಮಾನವಾಗಲಿದೆ. ಹಾಗಾಗಿಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ನಾಳೆ ದೆಹಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇವರ ಜತೆ ಚರ್ಚೆ ನಡೆಸಿ ಸಂಪುಟ ಪುನಾರಚನೆಗೆ ಯಾವಾಗ ಮಹೂರ್ತ ನಿಗದಿ ಮಾಡಬೇಕು, ಎಷ್ಟು ಸಚಿವರನ್ನು ಕೈಬಿಟ್ಟು, ಎಷ್ಟು ಮಂದಿ ಹೊಸಬರಿಗೆ ಅವಕಾಶ ನೀಡಬೇಕು ಎಲ್ಲದರ ಬಗ್ಗೆ ಸಮಗ್ರ ಚರ್ಚೆ ನಡೆಸುವರು. ಸಂಪುಟ ಪುನಾರಚನೆ ಮತ್ತೆ ಸದ್ದು ಮಾಡುತ್ತಿರುವಾಗಲೇ ನಿನ್ನೆ ದೆಹಲಿಗೆ ತೆರಳಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲೇ ಉಳಿದಿದ್ದು ಇಂದು ಅವರು ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಈ ಭೇಟಿ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಸಂಪುಟ ಪುನಾರಚನೆ ಬಗ್ಗೆ ವರಿಷ್ಠರಿಗೆ ಏನೆಲ್ಲಾ ಮಾಹಿತಿ ನೀಡಿ ಸಂಪುಟ ಪುನಾರಚನೆಗೆ ಹೈಕಮಾಂಡ್ ಕೈಗೊಂಡಿರುವ ನಿರ್ಧಾರವನ್ನು ಬದಲಿಸಿ ಪುನಾರಚನೆ ಬದಲು ವಿಸ್ತರ್ಣೆಗಷ್ಟೇ ಎಲ್ಲವನ್ನೂ ಸೀಮಿತಗೊಳಿಸುವ ಸಾಧ್ಯತೆಗಳಿದ್ದು, ಡಿ.ಕೆ. ಶಿವಕುಮಾರ್ ಅವರ ನಡೆ ನಿಲುವಿನ ಮೇಲೆ ಸಂಪುಟ ಪುನಾರಚನೆಯ ವಿದ್ಯಮಾನಗಳು ನಿಂತಿವೆ. ಅಧಿಕಾರ ಹಂಚಿಕೆ, ನವೆಂಬರ್ ಕ್ರಾಂತಿ ಎಲ್ಲದ್ದಕ್ಕೂ ಬ್ರೇಕ್ ಬಿದ್ದು ಸಂಪುಟ ಪುನಾರಚನೆ ಮುನ್ನಲೆಗೆ ಬಂದಿರುವುದರಿಂದ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಡಿ.ಕೆ. ಶಿವಕುಮಾರ್ ತಮ್ಮ ರಾಜಕೀಯ ನಡೆಯನ್ನು ಯಾವ ರೀತಿ ಇಡುತ್ತಾರೆ, ವರಿಷ್ಠರನ್ನು ಭೇಟಿ ಮಾಡಿ ಅಧಿಕಾರ ಹಂಚಿಕೆಯ ವಿಚಾರವನ್ನು ಇತ್ಯರ್ಥ ಮಾಡಿಕೊಳ್ಳುವರೇ ಇಲ್ಲವೆ ಎಂಬುದರ ಮೇಲೆ ಸಂಪುಟ ಪುನಾರಚನೆಯ ತೀರ್ಮಾನ ಆಗಲಿ. ಹಾಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರು ರಾಹುಲ್‌ಗಾಂಧಿ ಅವರ ಜತೆ ಚರ್ಚಿಸಿದ ಬಳಿಕವೇ ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ ಎಲ್ಲದರ ಬಗ್ಗೆಯೂ ಒಂದು ತೀರ್ಮಾನ ಕೈಗೊಳ್ಳುವರು ಎಂದು ಹೇಳಲಾಗುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ವಾಸ್ತವ್ಯ ಹೂಡಿ ವರಿಷ್ಠರ ಭೇಟಿಗೆ ಮುಂದಾಗಿರುವಾಗಲೇ ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಸಹ ಇಂದು ಬೆಳಗ್ಗೆ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳಸಿದ್ದು, ಡಿಕೆಶಿ ಸಹೋದರರ ನಡೆ ನಿಗೂಢವಾಗಿದೆ. ರಾಜ್ಯ ಸಚಿವ ಸಂಪುಟ ಪುನಾರಚನೆ ಬದಲಾಗಿ ಖಾಲಿ ಇರುವ ಎರುಡ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳೋಣ ಎಂಬ ನಿಲುವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರದ್ದಾಗಿದೆ. ಸಚಿವ ಸಂಪುಟ ಪುನಾರಚನೆಗೆ ಅವಕಾಶ ನೀಡಿದರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಇದರಿಂದ ಅಧಿಕಾರ ಹಂಚಿಕೆಯ ಒಪ್ಪಂದಕ್ಕೆ ಹಿನ್ನಡೆಯಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಡಿ.ಕೆ. ಶಿವಕುಮಾರ್ ಅವರಿದ್ದು, ಸಂಪುಟ ಪುನಾರಚನೆಗೆ ಪೂರ್ಣ ಪ್ರಮಾಣದ ಒಪ್ಪುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. ಹಾಗಾಗಿಯೇ ಮಲ್ಲಿಕಾರ್ಜುನಖರ್ಗೆ ಅವರು ಎಲ್ಲರೊಡನೆ ಸಮಾಲೋಚಿಸಿ ನಂತರ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಲಿದ್ದಾರೆ

LEAVE A REPLY

Please enter your comment!
Please enter your name here

error: Content is protected !!