Home Uncategorized ವರ್ಷದ 12 ತಿಂಗಳು ಹರಿಯುವ ಫಾಲ್ಸ್-ಭಕ್ತರಿಗೆ ಮಿನಿ ಪ್ರವಾಸಿ ತಾಣ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಗಟ್ಟಿ ಸಮಸ್ಯೆ

ವರ್ಷದ 12 ತಿಂಗಳು ಹರಿಯುವ ಫಾಲ್ಸ್-ಭಕ್ತರಿಗೆ ಮಿನಿ ಪ್ರವಾಸಿ ತಾಣ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಗಟ್ಟಿ ಸಮಸ್ಯೆ

0
ವರ್ಷದ 12 ತಿಂಗಳು ಹರಿಯುವ ಫಾಲ್ಸ್-ಭಕ್ತರಿಗೆ ಮಿನಿ ಪ್ರವಾಸಿ ತಾಣ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಗಟ್ಟಿ ಸಮಸ್ಯೆ

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ಶ್ರೀ ಗವಿ ಸಿದ್ಧಲಿಂಗೇಶ್ವರ ದೇವಾಲಯ—ಪ್ರಕೃತಿ ಸೌಂದರ್ಯ ಮತ್ತು ಭಕ್ತಿಭಾವದ ಅಪೂರ್ವ ಸಂಗಮ. ಬೆಟ್ಟದ ಮಡಿಲಲ್ಲಿ ಅರಳಿರುವ ಪುಣ್ಯಕ್ಷೇತ್ರ, ಗರ್ಭಗುಡಿಯ ಮೇಲಿನಿಂದಲೇ ವರ್ಷಪೂರ್ತಿ ಹರಿಯುವ ಮಿನಿ ಫಾಲ್ಸ್… ದೇವರ ದರ್ಶನಕ್ಕೆ ಬರುವವರಿಗಿದು ಭಕ್ತಿಯಲ್ಲಿ ತೇಲಿಸುವ ವಿಶೇಷ ಅನುಭವ. ಆದರೆ, ಇಷ್ಟೊಂದು ಶಕ್ತಿ–ಸಾಮರ್ಥ್ಯವಿದ್ದರೂ ಸರಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಸ್ಥಳ ಅಭಿವೃದ್ಧಿ ಕಾಣದೆ ‘ಪ್ರವಾಸಿಗರ ಕಣ್ಣಿಗೆ ಮರೀಚಿಕೆ’ ಆಗಿಬಿಟ್ಟಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆರೋಪಿಸಿದ್ದಾರೆ ೧) ವರ್ಷದ 12 ತಿಂಗಳು ಹರಿಯುವ ಫಾಲ್ಸ್-ಭಕ್ತರಿಗೆ ಮಿನಿ ಪ್ರವಾಸಿ ತಾಣ ಚಿಂತನಹಳ್ಳಿ ಗವಿಗೆ ಮಳೆಗಾಲ ಮಾತ್ರವಲ್ಲದೆ ವರ್ಷದ ಹನ್ನೆರಡು ತಿಂಗಳುವೂ ನೀರು ಹರಿಯುತ್ತದೆ. ಫಾಲ್ಸ್ ಮಧ್ಯೆ ದಾರಿ ಮಾಡಿಕೊಂಡು ಹೋಗಿ ದೇವರ ದರ್ಶನ ಮಾಡುವುದು ಇಲ್ಲಿ ಕಂಡುಬರುವ ಅಪರೂಪದ ಸೊಬಗು. ದಿನ ನಿತ್ಯ ನೂರಾರು ಭಕ್ತರು–ಪ್ರವಾಸಿಗರು ಆಗಮಿಸುತ್ತಿದ್ದರೂ, ಸ್ಥಳದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಗಟ್ಟಿ ಸಮಸ್ಯೆಯಾಗಿದೆ ಈ ಪುಣ್ಯ ಕ್ಷೇತ್ರದಲ್ಲಿ ವ್ಯವಸ್ಥೆಯೇ ಇಲ್ಲ ಅಂತ ಮುದ್ನಾಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಬೈಟ್ -೧ ೨)ಗವಿ ಸಿದ್ಧಲಿಂಗೇಶ್ವರ ದೇವಾಲಯಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಆದರೆ, ರಸ್ತೆಯಿಂದ ಹಿಡಿದು ಕುಳಿತುಕೊಳ್ಳುವ ಜಾಗ, ಸ್ವಚ್ಛತೆ, ಭಕ್ತರಿಗೆ ಬೇಕಾದ ಸೌಲಭ್ಯ—ಯಾವುದು ಸರಿಯಾಗಿಲ್ಲ. ದೇವಾಲಯ ಜೀರ್ಣೋದ್ಧಾರ ಮಾಡಿ, ಸೂಕ್ತ ಮೂಲಭೂತ ಸೌಕರ್ಯ ಒದಗಿಸಿ, ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಘೋಷಿಸಬೇಕು. ಅಂತ ಒತ್ತಾಯಿಸಲಾಗಿದೆ ಬೈಟ್ ೨ ೩) ವರ್ಷಪೂರ್ತಿ ಜಲಪಾತ ಹರಿಯುವ ಸ್ಥಳವೇ ವಿರಳ. ಇಲ್ಲಿ ಎಲ್ಲ ಇದೆ—ಆದರೆ ವ್ಯವಸ್ಥೆ ಮಾತ್ರ ಇಲ್ಲ. ಸರ್ಕಾರ ಗಂಭೀರವಾಗಿ ಗಮನ ಹರಿಸಿ ತಕ್ಷಣ ಜೀರ್ಣೋದ್ಧಾರ ಮಾಡಿ ಭಕ್ತಸೇವೆಯನ್ನು ಬಲಪಡಿಸುವ ಅಗತ್ಯವಿದೆ

LEAVE A REPLY

Please enter your comment!
Please enter your name here

error: Content is protected !!