Home Uncategorized ಅತಿವೃಷ್ಟಿಯಿಂದಹಾನಿಗೊಳಗಾದರೈತರಬ್ಯಾಂಕ್ ಖಾತೆಗೆ ಶೀಘ್ರವಾಗಿ ಪರಿಹಾರ ಧನ ಜಮೆ; ಶರಣಪ್ರಕಾಶ ಪಾಟೀಲ

ಅತಿವೃಷ್ಟಿಯಿಂದಹಾನಿಗೊಳಗಾದರೈತರಬ್ಯಾಂಕ್ ಖಾತೆಗೆ ಶೀಘ್ರವಾಗಿ ಪರಿಹಾರ ಧನ ಜಮೆ; ಶರಣಪ್ರಕಾಶ ಪಾಟೀಲ

0
ಅತಿವೃಷ್ಟಿಯಿಂದಹಾನಿಗೊಳಗಾದರೈತರಬ್ಯಾಂಕ್ ಖಾತೆಗೆ ಶೀಘ್ರವಾಗಿ ಪರಿಹಾರ ಧನ ಜಮೆ; ಶರಣಪ್ರಕಾಶ ಪಾಟೀಲ

ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರ ಬ್ಯಾಂಕ್ ಖಾತೆಗೆ ಶೀಘ್ರವಾಗಿ ಪರಿಹಾರ ಧನ ಜಮೆ ಮಾಡಲಾಗುವುದು ಎಂದು ಸಚಿವ ಡಾ ಶರಣಪ್ರಕಾಶ ಪಾಟೀಲ ಹೇಳಿದರು ಸೇಡಂ ಅತಿವೃಷ್ಟಿ ಯಿಂದ ನಿರಂತರ ಮಳೆಯಿಂದ ಹಾನಿಗೊಳಗಾದ ರೈತರ ಬೆಳೆಹಾನಿ ಪರಿಹಾರ ಹಣವನ್ನು ರಾಜ್ಯ ಸರಕಾರದಿಂದ ಶೀಘ್ರವಾಗಿ ಖಾತೆಗೆ ಜಮೆ ಮಾಡಲಾಗುವದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ ಶರಣಪ್ರಕಾಶ ಪಾಟೀಲ ಹೇಳಿದರು. ತಾಲೂಕಿನ ಕೋಡ್ಲಾ ಗ್ರಾಮದ ಲ್ಲಿ ಲೋಕೋಪಯೋಗಿ ಇಲಾಖೆ 2019-20 ನೇ ಸಾಲಿನ ಲೆಕ್ಕ ಶಿರ್ಷಿಕೆ ಡಿ,ಎಂ,ಎಸ್ ಯೋಜನೆಯಡಿಯಲ್ಲಿ ಕೋಡ್ಲಾ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ 16 ಹೆಚ್ಚುವರಿ ಕೋಣೆಗಳ ಕಾಮಗಾರಿಗಳಾದ ಪ್ರಯೋಗಾಲಯ,ವಾಚನಾಲಯ, ಕುಡಿಯುವ ನೀರಿನ ಪಿಲ್ಟರ್, ಶೌಚಾಲಯ, ಕಂಪೌಂಡ ಗೋಡೆ ನಿರ್ಮಾಣ ಲೋಕಾರ್ಪಣೆ ಗೊಳಿಸಿ ಮಾತನಾಡಿ ಅತಿವೃಷ್ಟಿ ಯಿಂದ ಹಾನಿಗೊಳಗಾದ ಹಿಂಗಾರು ಬೆಳೆಗಳು 75000 ಸಾವಿರ ಎಕರೆ ಬೆಳೆ ಹಾನಿಗೊಳಗಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೈಮಾನಿಕ ಸಮೀಕ್ಷೆ ನಡೆಸಿದ್ದರು ಒಂದೆರಡು ವಾರದಲ್ಲಿ ಪರಿಹಾರ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಇದು ರೈತರಿಗೆ ನಿಜವಾದ ಗ್ಯಾರಂಟಿಯಾಗಿದೆ. ಓಟಿಗಾಗಿ 5 ಗ್ಯಾರಟಿ ಯೋಜನೆಗಳು ನೀಡುತ್ತಿಲ್ಲ ವಿರೋಧ ಪಕ್ಷದವರಿಗೆ ನಾವು ನೀಡುವ ಯೋಜನೆಗಳು ಅರಗಿಸಿಕೊಳ್ಳಲು ಆಗುತ್ತಿಲ್ಲ ಆದ್ದರಿಂದ ನಮ್ಮ ಸರಕಾರದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಇವೆಲ್ಲ 5 ಗ್ಯಾರಂಟಿಗಳು ಓಟಿಗಾಗಿ ಅಲ್ಲ ಬಡವರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳು ನೀಡಿತ್ತಿದ್ದೇವೆ ಎಂದರು. ಏಳು ದಶಕ ಕಂಡಂತ ಸರಕಾರಿ ಮಾದರೀಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದಲ್ಲಿ ಮುಖ್ಯಗುರುಗಳಾದ ಮುಡಬಿ ಗುಂಡೇರಾವ ಅವರಿಗೆ ಸಚಿವ ಡಾ ಶರಣಪ್ರಕಾಶ ಪಾಟೀಲ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಸವರಾಜ ಪಾಟೀಲ ಊಡಗಿ, ಗ್ರಾಮ ಪಂಚಾಯತಿ ಅದ್ಯೆಕ್ಷೆ ಲಕ್ಷ್ಮಿ, ಸೇಡಂ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಮುಧೋಳ ಬ್ಲಾಕ್ ಅದ್ಯಕ್ಷ ರವಿಂದ್ರ ನಂದಿಗಾಮ, ರವಿ ಸಾಹು ತಂಬಾಕೆ ಕೋಡ್ಲಾ, ಪರ್ವತರೆಡ್ಡಿ ಪಾಟೀಲ, ವಾಸವದತ್ತಾ ಸಿಮೆಂಟ್ ಕಾರ್ಖಾನೆ ಕಾರ್ಮಿಕ ಸಂಘದ ಅದ್ಯಕ್ಷ ಸತೀಷರೆಡ್ಡಿ ಪಾಟೀಲ ರಂಜೋಳ, ಸಿದ್ದು ಬಾನರ್,ಸಹಾಯಕ ಅಯುಕ್ತ ಪ್ರಭುರೆಡ್ಡಿ, ತಹಶಿಲ್ದಾರ ಶ್ರೀಯಾಂಕ ಧನಶ್ರೀ, ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ, ಸಿ,ಪಿ,ಐ, ಮಹಾದೇವ ದಿಡ್ಡಿಮನಿ, ಜೈಭೀಮ ಊಡಗಿ ಜಗನ್ನಾಥ ಚಿಂತಪಳ್ಳಿ ಇದ್ದರು. ಶರಣಪ್ಪ ಎಳ್ಳಿ ssvtv news ಸೇಡಂ

LEAVE A REPLY

Please enter your comment!
Please enter your name here

error: Content is protected !!