Google search engine
ಮನೆUncategorizedಉತ್ತರ ನಗರ ಪಾಲಿಕೆ ಸ್ವಚ್ಛತೆ: ಸರ್ವಜ್ಞ ನಗರಕ್ಕೆ ಮೊದಲ ಸ್ಥಾನ

ಉತ್ತರ ನಗರ ಪಾಲಿಕೆ ಸ್ವಚ್ಛತೆ: ಸರ್ವಜ್ಞ ನಗರಕ್ಕೆ ಮೊದಲ ಸ್ಥಾನ

ಉತ್ತರ ನಗರ ಪಾಲಿಕೆ ಸ್ವಚ್ಛತೆ: ಸರ್ವಜ್ಞ ನಗರಕ್ಕೆ ಮೊದಲ ಸ್ಥಾನ

ಉತ್ತರ ನಗರ ಪಾಲಿಕೆ ಸ್ವಚ್ಛತೆ: ಸರ್ವಜ್ಞ ನಗರಕ್ಕೆ ಮೊದಲ ಸ್ಥಾನ ಸಾಮೂಹಿಕ ಬೃಹತ್ ಸ್ವಚ್ಛತಾ ಕಾರ್ಯದಲ್ಲಿ 599 ಟನ್ ತ್ಯಾಜ್ಯ ಸಂಗ್ರಹ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರಕ್ಕೆ 1 ಲಕ್ಷ ರೂ. ನಗದು ಬಹುಮಾನ ಬೆಂಗಳೂರು ನಗರ ಜಿಲ್ಲೆ, ನವೆಂಬರ್ 10 (ಕರ್ನಾಟಕ ವಾರ್ತೆ) : ಉತ್ತರ ನಗರ ಪಾಲಿಕೆಯನ್ನು ಸುಂದರ ಮತ್ತು ಸ್ವಚ್ಛ ಪಾಲಿಕೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೈಗೊಂಡಿದ್ದ ಅಭಿಯಾನದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಪ್ರತಿನಿಧಿಸುವ ವಿಧನಾಸಭಾ ಕ್ಷೇತ್ರವಾದ ಸರ್ವಜ್ಞ ನಗರ ಮೊದಲ ಸ್ಥಾನ ತನ್ನದಾಗಿಸಿದೆ. “ಸ್ವಚ್ಛತಾ ಅಭಿಯಾನದಲ್ಲಿ ನಮ್ಮ ಸರ್ವಜ್ಞನಗರ ಪ್ರಥಮ ಸ್ಥಾನ ಪಡೆದಿರುವುದು ಅತ್ಯಂತ ಸಂತಸದ ವಿಷಯ. ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಜನರ ಆರೋಗ್ಯ ರಕ್ಷಣೆಯೇ ನಮ್ಮ ಮೊದಲ ಆದ್ಯತೆ. ನಮ್ಮ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಲೇ ಇರುತ್ತದೆ. ಇದಕ್ಕಾಗಿ ನಮ್ಮ ಪೌರ ಕಾರ್ಮಿಕರಿಗೆ ನಾನು ಋಣಿ. ಅವರ ಸೇವೆ ಅಮೂಲ್ಯ, ಅವರನ್ನು ಕ್ಷೇತ್ರದ ಜನತೆ ಗೌರವ ಅಭಿಮಾನದಿಂದ ಕಾಣಬೇಕು ಎಂದು ಮನವಿ ಮಾಡುತ್ತೇನೆ,”ಎಂದು ಸಚಿವ ಜಾರ್ಜ್ ಹೇಳಿದ್ದಾರೆ. ಬೆಂಗಳೂರು ಉತ್ತರ ನಗರ ಪಾಲಿಕೆಯನ್ನು ಸುಂದರ ನಗರ ಪಾಲಿಕೆಯನ್ನಾಗಿಸಲು ಕೈಗೊಂಡ ಸಾಮೂಹಿಕ ಬೃಹತ್ ಸ್ವಚ್ಛತಾ ಕಾರ್ಯದ ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ಯಲಹಂಕದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಪೌರಕಾರ್ಮಿಕರೊಟ್ಟಿಗೆ ಜ್ಯೋತಿ ಬೆಳಗುವುದರ ಮೂಲಕ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, “ಸ್ವಚ್ಛ ಪರಿಸರವನ್ನು ನಿರ್ಮಿಸಿ, ನಾಗರಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಪಾಲಿಕೆಯು ಅನೇಕ ಕಾರ್ಯಕ್ರಮಗಳ ಮೂಲಕ ಪ್ರಥಮ ಹೆಜ್ಜೆ ಇರಿಸಿದೆ. ಈ ಪ್ರಯತ್ನದಲ್ಲಿ ಪೌರಕಾರ್ಮಿಕರ ಪ್ರಯತ್ನದೊಂದಿಗೆ ನಾಗರಿಕರ ಸಹಭಾಗಿತ್ವ ಹಾಗೂ ಪ್ರೋತ್ಸಾಹ ಅಗತ್ಯ. ಪ್ರತಿ ಶುಕ್ರವಾರ “ಫೋನ್ ಇನ್” ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಕ್ರಮ ಕೈಗೊಳ್ಳಲಾಗುತ್ತಿದೆ,” ಎಂದರು. ನಿರಂತರ 8 ಗಂಟೆಗಳ ಕಾಲ ಸ್ವಚ್ಛತಾ ಕಾರ್ಯ ಉತ್ತರ ನಗರ ಪಾಲಿಕೆಯಲ್ಲಿ ಶನಿವಾರ ಬೆಳಗ್ಗೆ 10:00ರಿಂದ ಸಂಜೆ 4:00ರವರೆಗೆ ಸತತ 8 ಗಂಟೆಗಳ ಕಾಲ ಹೆಬ್ಬಾಳ, ಪುಲಿಕೇಶಿನಗರ, ಸರ್ವಜ್ಞನಗರ, ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ ಮತ್ತು ರಾಜರಾಜೇಶ್ವರಿ ನಗರ ವಿಭಾಗಗಳು ಸೇರಿ ಒಟ್ಟು 95 ಕಿ.ಮೀ ರಸ್ತೆಗಳಲ್ಲಿ ತ್ಯಾಜ್ಯ, ಹೂಳು, ಭಗ್ನಾವಶೇಷಗಳು, ಮರದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸುವ ಜೊತೆಗೆ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಲಾಯಿತು. 599 ಟನ್ ತ್ಯಾಜ್ಯ ಸಂಗ್ರಹ: ನಗರ ಪಾಲಿಕೆಯ 7 ವಿಭಾಗಗಳಿಂದ ಒಟ್ಟು 95 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆಗಳು ಮತ್ತು ಮೀಡಿಯನ್ಸ್ ಗಳಲ್ಲಿ ನಡೆದ ಈ ಅಭಿಯಾನದಲ್ಲಿ ಒಟ್ಟು 4200 ಪೌರಕಾರ್ಮಿಕರು, 69 ಟ್ರ್ಯಾಕ್ಟರ್ಗಳು, 70 ಆಟೋ ಟಿಪ್ಪರ್ ಗಳು ಹಾಗೂ 5 ಜೆಸಿಬಿ ಯಂತ್ರಗಳನ್ನು ಬಳಸಿ ಹೂಳು/ಮಣ್ಣು ಮತ್ತು ತ್ಯಾಜ್ಯ/ಕಸ ತೆರವು ಕಾರ್ಯಗಳು ಕೈಗೊಳ್ಳಲಾಯಿತು. ಈ ಅಭಿಯಾನದ ಮೂಲಕ 275 ಟನ್ ಕಟ್ಟಡ ಅವಶೇಷ, 28 ಟನ್, ಪಾದಚಾರಿ ಮಾರ್ಗಗಳಲ್ಲಿನ ಹಳೆಯ ಸೋಫಾ ಚಾಪೆ ಮತ್ತು ಇತರ ಹಳೆಯ ಅನುಪಯುಕ್ತ ವಸ್ತುಗಳು, ಖಾಲಿ ನಿವೇಶನಗಳಲ್ಲಿ 86 ಟನ್ ಹಾಗೂ 210 ಟನ್ ಒಣ ತ್ಯಾಜ್ಯ ಸಂಗ್ರಹಣೆ ಮಾಡಲಾಗಿದೆ. ಒಟ್ಟಾರೆಯಾಗಿ 599 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ. ಎಲ್ಲಾ ವಿಭಾಗದ ಅಧಿಕಾರಿಗಳು ಭಾಗಿ: ಬೃಹತ್ ಸಾಮೂಹಿಕ ಸ್ವಚ್ಛತಾ ಅಭಿಯಾನದಲ್ಲಿ ಪಾಲಿಕೆಯ ಘನತ್ಯಾಜ್ಯ ವಿಭಾಗ, ಇಂಜಿನಿಯರಿಂಗ್ ವಿಭಾಗ, ರಸ್ತೆ ಮೂಲಸೌಕರ್ಯ (RI) ವಿಭಾಗ, ಆರೋಗ್ಯ ವಿಭಾಗ, ಟ್ರಾಫಿಕ್ ಪೋಲಿಸ್, ತೋಟಗಾರಿಕೆ ವಿಭಾಗ, ಅರಣ್ಯ ವಿಭಾಗ, ಕೆರೆಗಳ ನಿರ್ವಹಣೆ ವಿಭಾಗ ಸೇರಿದಂತೆ ಇತರೆ ಇಲಾಖೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಸ್ಥಳೀಯ ಸಂಘ-ಸಂಸ್ಥೆಗಳು ಪಾಲ್ಗೊಂಡಿದ್ದರು. ಅಧಿಕಾರಿಗಳಿಗೆ ಉತ್ತೇಜನ ನೀಡಲು ಕಾರ್ಯಕ್ರಮ ಆಯೋಜನೆ: ಪಾಲಿಕೆ ಅಧಿಕಾರಿಗಳನ್ನು ಗುರುತಿಸಿ ಉತ್ತೇಜಿಸುವ ನಿಟ್ಟಿನಲ್ಲಿ ಹಾಗೂ ಉತ್ತಮವಾಗಿ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುವ ಮೊದಲ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಪಾಲಿಕೆಯ ವತಿಯಿಂದ ಬಹುಮಾನಗಳನ್ನು ನೀಡುವ ಸಲುವಾಗಿ ಉತ್ತಮವಾಗಿ ಸ್ವಚ್ಛತಾ ಕಾರ್ಯ ನಿರ್ವಹಿಸಿದ ವಿಧಾನಸಭಾ ಕ್ಷೇತ್ರಗಳನ್ನು ಮುಖ್ಯ ಅಭಿಯಂತರರಾದ ರಂಗನಾಥ್ ಮತ್ತು ಯಮುನಾ ರವರ ನೇತೃತ್ವದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಸಂಘ-ಸಂಸ್ಥೆಗಳ ಮೂಲಕ ರಸ್ತೆಗಳ ಸ್ವಚ್ಛತೆಯ ಗುಣಮಟ್ಟ ಹಾಗೂ ತ್ಯಾಜ್ಯ ಸಂಗ್ರಹಣೆಯ ಆಧಾರದ ಮೇಲೆ ತಪಾಸಣೆ ಮಾಡಿ, ವಿಜೇತರನ್ನು ಆಯ್ಕೆ ಮಾಡಲಾಗಿರುತ್ತದೆ. ಆಯ್ಕೆ ಮಾಡಲಾದ ವಿಧಾನಸಭಾ ಕ್ಷೇತ್ರಗಳು ಹಾಗೂ ಬಹುಮಾನದ ವಿವರಗಳು: 1. ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ – ಪ್ರಥಮ ಬಹುಮಾನ – ₹1 ಲಕ್ಷ. 2.ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ – ದ್ವಿತೀಯ ಬಹುಮಾನ – ₹50 ಸಾವಿರ 3. ಯಲಹಂಕ ವಿಧಾನಸಭಾ ಕ್ಷೇತ್ರ – ತೃತೀಯ ಬಹುಮಾನ – ₹25 ಸಾವಿರ ಉಳಿದಂತೆ, ವಿಭಾಗವಾರು ಪ್ರತ್ಯೇಕ ಸಮಾಧಾನಕರ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಗರ ಪಾಲಿಕೆಯ ಅಪರ ಆಯುಕ್ತರಾದ ಅಮರೇಶ್ ಹೆಚ್, ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್, ಮುಖ್ಯ ಅಭಿಯಂತರರಾದ ರಂಗನಾಥ್, ಯಮುನಾ, ಉಪ ಆಯುಕ್ತರಾದ ಮಂಗಳ ಗೌರಿ, ಪ್ರಕಾಶ್, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಘನ ತ್ಯಾಜ್ಯ ವಿಭಾಗದ ಅಭಿಯಂತರರು, ಆರೋಗ್ಯ ವಿಭಾಗದ ಸಿಬ್ಬಂದಿ, ಪೌರ ಕಾರ್ಮಿಕರು ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!