ಶಿವಶರಣ ಮಾದಾರ ಚನ್ನಯನ ಮೂರ್ತಿ ಅನಾವರಣಕ್ಕೆ ವಿವಿಧ ಸಮಿತಿ ರಚಿಸಲಾಗಿದೆ ಎಂದು ಮಾದಿಗ ಸಮಾಜದ ಅದ್ಯಕ್ಷ ಮಾರುತಿ ಕೋಡಂಗಲಕರ್ ತಿಳಿಸಿದ್ದಾರೆ ಸೇಡಂ ಶಿವಶರಣ ಮಾದಾರ ಚನ್ನಯ್ಯನವರ ಮೂರ್ತಿ ಅನಾವಾರಣ ಹಾಗೂ ಜಯಂತ್ಯೋತ್ಸವ ನಿಮಿತ್ತವಾಗಿ ಅದ್ದೂರಿಯಾಗಿ ಆಚರಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ತಾಲೂಕಾ ಮಾದಿಗ ಸಮಾಜದ ಅದ್ಯಕ್ಷ ಮಾರುತಿ ಕೋಡಂಗಲಕರ್ ಹೇಳಿದರು ಪಟ್ಟಣದ ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿ ಪಟ್ಟಣದ ಮುಖ್ಯ ಭಾಗದಲ್ಲಿ ಶಿವಶರಣ ಮಾದರ ಚನ್ನಯ್ಯನವರ ಪಂಚಲೋಹದ ಮೂರ್ತಿ ಅನಾವರಣ ಹಾಗೂ ಜಯಂತ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲು ವಿವಿಧ ಸಮಿತಿಗಳನ್ನು ರಚಿಸಿ ಅವರವರಿಗೆ ಜವಬ್ದಾರಿ ನೀಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಸವರಾಜ ಮಳಗಿ, ಬಸಣ್ಣ ರೆನ್ನೆಟ್ಲಾ,ಶಿವಪುತ್ರಪ್ಪ ಮೋಘಾ, ಮಲ್ಲಿಕಾರ್ಜುನ ವಾಲಿಕಾರ, ಜಗನ್ನಾಥ ಚಿಂತಪಳ್ಳಿ, ಶಂಭುಲಿಂಗ ನಾಟೀಕಾರ, ಸುಂದರ ಮಂಗಾ, ಮಾರುತಿ ಮುಗುಟಿ,ನಾಗರಾಜ ನಂದೂರ,ರಾಮು ಕಣಿಕಲ್,ಹಣಮಂತ ಭರತನೂರ, ಅನಂತಪ್ಪ ಮೋತಕಪಲ್ಲಿ, ಸತೀಷ ಇಂಜಳ್ಳಿಕರ್, ರವಿ ಯಂಪಳ್ಳಿ ಇದ್ದರು. ಶರಣಪ್ಪ ಎಳ್ಳಿ ssvtv news ಸೇಡಂ
ಶಿವಶರಣ ಮಾದಾರ ಚನ್ನಯನ ಮೂರ್ತಿ ಅನಾವರಣಕ್ಕೆಸಮಿತಿ ರಚಿಸಲಾಗಿದೆ ; ಮಾರುತಿ ಕೋಡಂಗಲಕರ್ ತಿಳಿಸಿದ್ದಾರೆ
ಶಿವಶರಣ ಮಾದಾರ ಚನ್ನಯನ ಮೂರ್ತಿ ಅನಾವರಣಕ್ಕೆಸಮಿತಿ ರಚಿಸಲಾಗಿದೆ ; ಮಾರುತಿ ಕೋಡಂಗಲಕರ್ ತಿಳಿಸಿದ್ದಾರೆ





