ಕಲಬುರಗಿ: ಕಲಬುರಗಿಯಲ್ಲಿ ಸಚಿವ ಪ್ರೀಯಾಂಕ ಖರ್ಗೆ ಹೇಳಿಕೆ. RSS ನವರು ಎಲ್ಲಾ ಶಾಸಕರಿಗೆ ಬೈದಿದ್ದಾರಾ ?, ನನಗೆ ಒಬ್ಬನಿಗೆ ಬೈದಿದ್ದಾರೆ. RSS ನವರು ನಮ್ಮ ಕ್ಷೇತ್ರದಲ್ಲಿ ಪಥ ಸಂಚಲನ ಮಾಡಲು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ನಾನು ಎಲ್ಲೂ ಹೇಳಿಲ್ಲ RSS ಬ್ಯಾನ್ ಮಾಡಬೇಕು ಅಂತ. RSS ನವರು ಹಾಸ್ಟೆಲ್ ವಿದ್ಯಾರ್ಥಿಗಳನ್ನು ಕರೆಯುತ್ತಿದ್ದಾರೆ. ವಿದ್ಯಾರ್ಥಿಗಳು ಓದಲು ಬರ್ತಾರೆ ಇವರು ಪಥ ಸಂಚಲನಕ್ಕೆ ಬನ್ನಿ ಅಂತಾರೆ. ನಾವು ಪ್ರತಿಭಟನೆ ಮಾಡಬೇಕಾದ್ರೆ ನಾವು ಪರವಾನಿಗೆ ಪಡೆಯುತ್ತೇವೆ. ಆದ್ರೆ ಅವರು ಪರವಾನಿಗೆ ಕೇಳದೆ ಮಾಹಿತಿಗಾಗಿ ಅಂತ ಪತ್ರ ಕೊಡ್ತಾರೆ. ಅಧಿಕಾರಿಗಳ ಬಳಿ ಪರವಾನಗಿ ಕೇಳಿಲ್ಲ. ನಾನು ಪತ್ರ ಬರೆದಿದ್ದೇನೆ ಅಂತ ನನ್ನ ಮೇಲೆ ಮುಗಿಬಿದ್ದಿದ್ದಾರೆ. RSS ರಿಜಿಸ್ಟರ್ ಇಲ್ಲದ ಬಾಡಿ ಇದೆ. ಬಿಜೆಪಿ ಅವರು ನಮ್ಮ ಮೇಲೆ ಮುಗಿ ಬೀಳ್ತಾರೆ, ಮಾತಾಡ್ತಾರೆ. RSS ಯಾವುದೇ ಪಕ್ಷಕ್ಕೆ ಸೀಮಿತ ಇಲ್ಲ ಅಂತಾರೆ. ಆದರೆ ಬಿಜೆಪಿ ಅವರು ಯಾಕೆ RSS ಪರ ವಹಿಸುತ್ತಾರೆ. RSS ಬಗ್ಗೆ ಮಾತಾಡಿದರೆ ನನಗೆ ದೇಶ ವಿದೇಶದಿಂದ ಫೋನ್ ಮಾಡಿ ಬೈದಿದ್ದಾರೆ. ನನಗೆ, ನಮ್ಮ ಕುಟುಂಬಕ್ಕೆ ಬೈದಿದ್ದಾರೆ ಯಾರಾದ್ರೂ ಬಿಜೆಪಿ ಅವರು ಅದನ್ನ ಖಂಡಿಸಿದ್ದಾರಾ?. ಮಾಹಿತಿಗಾಗಿ ಅಂತ ಅರ್ಜಿ ಕೊಟ್ರೆ ನಾವು ಅವರಿಗೆ ಯಾಕೆ ಪರವಾನಿಗೆ ಕೊಡಬೇಕು. ಪರವಾನಗಿ ಕೊಡಿ ಅಂತ ಕೇಳಿದ್ರೆ ನಮ್ಮ ಅಧಿಕಾರಿಗಳು ಅವರಿಗೆ ಕೊಡ್ತಾ ಇದ್ರು. ಲಾಠಿ ಬಿಸಿ ಹೋದ್ರೆ ಮಕ್ಕಳ ಮೇಲೆ ಪರಿಣಾಮ ಬೀರುತ್ತೆ ಅಂತ ಮತ್ತೊಂದು ಸಂಘಟನೆ ಕೊಡಬೇಡಿ ಅಂತ ಹೇಳಿದ್ದಾರೆ
RSS ನವರು ನಮ್ಮ ಕ್ಷೇತ್ರದಲ್ಲಿ ಪಥ ಸಂಚಲನ ಮಾಡಲು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ;ಪ್ರೀಯಾಂಕ ಖರ್ಗೆ
RSS ನವರು ನಮ್ಮ ಕ್ಷೇತ್ರದಲ್ಲಿ ಪಥ ಸಂಚಲನ ಮಾಡಲು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ;ಪ್ರೀಯಾಂಕ ಖರ್ಗೆ





