Home Uncategorized ಪಿಎಸ್ ಐ ಅಕ್ರಮ ನೇಮಕಾತಿ ಕಿಂಗ್ ಪಿನ್ ದಿವ್ಯ ಹಾಗರಗಿ ಮನೆ ಮೇಲೆ ಕಲಬುರಗಿ ಸಿಸಿಬಿ ಪೊಲೀಸರ ದಾಳಿ

ಪಿಎಸ್ ಐ ಅಕ್ರಮ ನೇಮಕಾತಿ ಕಿಂಗ್ ಪಿನ್ ದಿವ್ಯ ಹಾಗರಗಿ ಮನೆ ಮೇಲೆ ಕಲಬುರಗಿ ಸಿಸಿಬಿ ಪೊಲೀಸರ ದಾಳಿ

0
ಪಿಎಸ್ ಐ ಅಕ್ರಮ ನೇಮಕಾತಿ ಕಿಂಗ್ ಪಿನ್ ದಿವ್ಯ ಹಾಗರಗಿ ಮನೆ ಮೇಲೆ ಕಲಬುರಗಿ ಸಿಸಿಬಿ ಪೊಲೀಸರ ದಾಳಿ

ಕಲಬುರಗಿ ಬ್ರೇಕಿಂಗ್.. ಹಿಂದೂಪರ ಸಂಘಟನೆ ಕಾರ್ಯಕರ್ತೆ ಹಾಗೂ ಪಿಎಸ್ ಐ ಅಕ್ರಮ ನೇಮಕಾತಿ ಕಿಂಗ್ ಪಿನ್ ದಿವ್ಯ ಹಾಗರಗಿ ಮನೆ ಮೇಲೆ ಕಲಬುರಗಿ ಸಿಸಿಬಿ ಪೊಲೀಸರ ದಾಳಿ. ಮನೆಯಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ದಾಳಿ. ಗುಂಪು ಕಟ್ಟಿಕೊಂಡು ಇಸ್ಪೀಟ್ ಆಡುತ್ತಿದ್ದಾಗ ದಾಳಿ. ಕಲಬುರಗಿ ನಗರದ ಹಳೇ ಜೇವರ್ಗಿ ರಸ್ತೆಯಲ್ಲಿರೋ ದಿವ್ಯ ಹಾಗರಗಿ ನಿವಾಸ. ಸಿಸಿಬಿ ಅಧಿಕಾರಿಗಳ ದಾಳಿ ವೇಳೆ 42 ಸಾವಿರ ರೂಪಾಯಿ ಹಾಗೂ ಆರು ಜನ ವಶಕ್ಕೆ. ದಿವ್ಯ ಹಾಗರಗಿ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಜು ಲೇಂಗಟಿ,ರವೀಂದ್ರ ಮಾನಕರ್, ಭಾಗವಾನ ಶಿವಶರಣಪ್ಪ, ಸಂಗಮೇಶ ನಾಗಹಳ್ಳಿ ಮಲ್ಲಿನಾಥರನ್ನ ವಶಕ್ಕೆ ಪಡೆದ ಪೊಲೀಸರು. ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸ್ಟೇಷನ್ ಬಜಾರ ಠಾಣೆ ಪೊಲೀಸರುಕಲಬುರಗಿ.. ಹಿಂದೂಪರ ಸಂಘಟನೆ ಕಾರ್ಯಕತೆಳ ಪಿಎಸ್ಐ ಅಕ್ರಮ ನೇಮಕಾತಿ ಕಿಂಗ್ ಪಿನ್ ದಿವ್ಯಾ ಹಾಗರಗಿ ಮನೆಯಲ್ಲಿ ಇಸ್ಪೀಟ್ ಆಡುವಾಗ ಸಿಸಿಬಿ ಪೊಲೀಸರ ದಾಳಿ ಪ್ರಕರಣ.. ಪೊಲೀಸ್ ಠಾಣೆಯಿಂದ ಹೊರಬಂದು ದಿವ್ಯಾ ಹಾಗರಗಿ ಹೇಳಿಕೆ.. ದೀಪಾವಳಿ ಹಬ್ಬದ ನಿಮಿತ್ಯ ಮನೆಯಲ್ಲಿ ಪೂಜೆ ಇತ್ತು, ಎಲ್ಲರಿಗೂ ಮನೆಯಲ್ಲಿ ಊಟಕ್ಕೆ ಕರೆದಿದ್ದೆ.. ಕಳೆದ ಒಂದು ವಾರದ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ನಾನೊಂದು ಸ್ಟೇಟ್ಮೆಂಟ್ ಕೊಟ್ಟಿದ್ದ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಪೊಲೀಸರು ನನ್ನ ಮನೆ ಮೇಲೆ ದಾಳಿ ಮಾಡಿದ್ದಾರೆ.. ಪೊಲೀಸರು ಬಂದಾಗ ಯಾರು ಇಸ್ಪೀಟ್ ಆಟ ಆಡುತ್ತಿರಲಿಲ್ಲ ಬ್ಲಾಕ್ ಟೀ ಕುಡಿತಾ ಕುಳಿತಿದ್ದರು.. ನಮ್ಮ ಮನೆಗೆ ಬಂದಿದ್ದ ಆರು ಜನರ ಹತ್ತಿರ ಇರುವ 42000 ಹಣ ತೆಗೆದುಕೊಂಡಿದ್ದಾರೆ.. ಆರು ಜನರ ಹತ್ತಿರ 42 ಸಾವಿರ ರೂಪಾಯಿ ಇರೋದಿಲ್ಲ? ನೇರವಾಗಿ ಸಚಿವ ಪ್ರಿಯಾಂಕ ಖರ್ಗೆ ಅವರು ನನ್ನನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ.. ನನಗೆ ನನ್ನ ಗಂಡನಿಗೆ ನನ್ನ ಮಕ್ಕಳಿಗೆ ಏನಾದರೂ ಆದರೆ ಅದಕ್ಕೆ ನೇರವಾಗಿ ಪ್ರಿಯಾಂಕ ಖರ್ಗೆ ಅವರೇ ಹೊಣೆ ಆಗ್ತಾರೆ.. ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ದಿವ್ಯ ಹಾಗರಗಿ ಆಕ್ರೋಶ

LEAVE A REPLY

Please enter your comment!
Please enter your name here

error: Content is protected !!