Google search engine

ಹೊನ್ನಾಳಿ;ಆರೆಸ್ಸೆಸ್ ಸಂಘದ ಶತಾಬ್ದ ನೂರನೇ ವರ್ಷದ ಪಥಸಂಚಲನ

ಹೊನ್ನಾಳಿ;ಆರೆಸ್ಸೆಸ್ ಸಂಘದ ಶತಾಬ್ದ ನೂರನೇ ವರ್ಷದ ಪಥಸಂಚಲನ

ಹೊನ್ನಾಳಿ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಶತಾಬ್ದ ನೂರನೇ ವರ್ಷದ ಮೊದಲ ವಿಜಯದಶಮಿ ಅಂಗವಾಗಿ ಭಾನುವಾರ ಅದ್ದೂರಿಯಾಗಿ ಪಥಸಂಚಲನ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಹಸ್ರಾರು ಸ್ವಯಂಸೇವಕರು ಭಾಗವಹಿಸಿದ್ದರು. ಪಥಸಂಚಲನದ ಮಾರ್ಗದುದ್ದಕ್ಕೂ ಸಾರ್ವಜನಿಕರು ಭಾರತ ಮಾತೆಗೆ ಮತ್ತು ಆರ್‌ಎಸ್‌ಎಸ್‌ಗೆ ಜೈಕಾರ ಕೂಗಿದರು. ಅಲ್ಲಲ್ಲಿ ಕೇಸರಿ ಅಲಂಕಾರ ಮಾಡಲಾಗಿತ್ತು ಮತ್ತು ಮನೆಗಳ ಮುಂದೆ ಸ್ವಯಂ ಸೇವಕರನ್ನು ಸ್ವಾಗತಿಸಲು ರಂಗೋಲಿಗಳನ್ನು ಬಿಡಿಸಲಾಗಿತ್ತು. ದುರ್ಗಿಗುಡಿ ಮತ್ತು ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯವಾಹ ಮಾರುತಿ, ತಾಲೂಕು ಕಾರ್ಯವಾಹ ಗುರುಶಂಕರ, ಸಹ ಕಾರವಾಹ ಸಂತೋಷ್, ಸಂಘದ ಪ್ರಮುಖರಾದ ಅರುಣಕುಮಾರ್, ಭರತ್, ಹರ್ಷ, ವಿಠಲ್, ಉಮಾನಾಥ್, ಶ್ರೀನಿವಾಸ್ವಮೂರ್ತಿ, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಬಿಜೆಪಿ ತಾಲೂಕಾಧ್ಯಕ್ಷ ಅರಕೆರೆ ನಾಗರಾಜ್, ಎ. ಬಿ. ಹನುಮಂತಪ್ಪ, ಶಾಂತರಾಜ್‌ ಪಾಟೀಲ್‌, ಜೆ. ಕೆ. ಸುರೇಶ್, ಎಂ. ಆರ್. ಮಹೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಡಿಮೆ ತೋರಿಸು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!