ಬೆಂಗಳೂರು: ಗುತ್ತಿಗೆದಾರಾರ ನೋವು ಅರ್ಥವಾಗುತ್ತದೆ, ಬೆದರಿಕೆ ಸಾಧ್ಯವಿಲ್ಲ
ಶನಿವಾರ ತಮ್ಮ ಸರಕಾರಿ ನಿವಾಸದಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿ, ಗುತ್ತಿಗೆದಾರರ ನೋವು ಅರ್ಥವಾಗುತ್ತದೆ ಆದರೆ ಯಾರೂ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಾದ್ಯಂತ ಇರುವ ಗುತ್ತಿಗೆದಾರರಿಗೆ ಬಿಲ್ ಬಾಕಿ ನೀಡಲು ಹಣಕಾಸು ಇಲಾಖೆಯಿಂದ 50-100 ಕೋಟಿ ರೂ. ಬಿಡುಗಡೆಯಾಗಿದ್ದು, ಅದನ್ನು ಯಾರಿಗೆ ಹಂಚಬೇಕು ಎಂದು ಗುತ್ತಿಗೆದಾರರೇ ನಿರ್ಧರಿಸುವಂತಿಲ್ಲ ಎಂದರು. ಸಣ್ಣ ಗುತ್ತಿಗೆದಾರರಿಗೆ 15 ಲಕ್ಷದಿಂದ 1 ಕೋಟಿ ರೂ. ವರೆಗೆ ಹಾಗೂ ದೊಡ್ಡ ಗುತ್ತಿಗೆದಾರರಿಗೆ 2,000 ಕೋಟಿ ರೂ. ವರೆಗೆ ಬಿಲ್ ಬಾಕಿ ಇದೆ ಎಂದು ಅವರು ತಿಳಿಸಿದರು





