ಕಲಬುರಗಿ ಚಿಂಚೋಳಿ ಕ್ರಾಸ್ ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಬೇಕೆಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಒತ್ತಾಯಿಸಿದ್ದಾರೆ ಸೇಡಂ ಕಠೋರ ತಪ್ಪಸಿನಿಂದ ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಹೆಸರನ್ನು ಪಟ್ಟಣದ ಕಲಬುರ್ಗಿ ಚಿಂಚೋಳಿ ವೃತ್ತಕ್ಕೆವ ನಾಮಕರಣ ಮಾಡಬೇಕೆಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಒತ್ತಾಯಿಸಿದ್ದಾರೆ .ಕೊತ್ತಲಬಸವೇಶ್ವರ ದೇವಾಲಯದ ಆವರಣದಲ್ಲಿ ತಾಲೂಕಾ ವಾಲ್ಮೀಕಿ ಸಮಾಜದಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿ ರಾಮಯಣದಂತಹ ಮಹಾ ಕಾವ್ಯವನ್ನು ಕೊಡುಗೆ ನೀಡಿದ ಮಹರ್ಷಿ ವಾಲ್ಮೀಕಿ ಇಡೀ ಜಗತ್ತಿಗೆ ಆದರ್ಶ ಪ್ರಿಯರಾಗಿದ್ದಾರೆ ವಾಲ್ಮೀಕಿ ಮಹರ್ಷಿ ಜನಿಸದಿದ್ದರೆ ರಾಮನ ಆದರ್ಶಗಳು ಜಗತ್ತಿಗೆ ತಿಳಿಯುತ್ತಿರಲಿಲ್ಲ . ವಾಲ್ಮೀಕಿ ಸಮಾಜದ ತಾಲೂಕಾ ಅದ್ಯಕ್ಷ ಚಂದ್ರಕಾಂತ ನಾಯಿಕೋಡಿ ಅದ್ಯಕ್ಷತೆ ಹಾಗೂ ಸರ್ವ ಪದಾದಿಕಾರಿಗಳು ನೇತೃತ್ವದಲ್ಲಿ ಪ್ರಪಥಮ ಜಯಂತಿ ಅದ್ದೂರಿಯಾಗಿ ನಡೆದಿದ್ದು ಸಂತೋಷದ ವಿಷಯ ಮುಂಬರುವ ದಿನಗಳಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿ ಸ್ಥಾಪನೆಯಾಗಬೇಕು ಅದಕ್ಕಿಂತ ಮುಂಚಿತವಾಗಿ ಪಕ್ಷತೀತವಾಗಿ ಕಲಬುರಗಿ ಚಿಂಚೋಳಿ ಕ್ರಾಸ್ ವೃತಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು. ರಾಜ್ಯ ತೋಟಗಾರಿಕೆ ಮಹಾಮಂಡಳಿ ನಿರ್ದೇಶಕ ಬಸವರಾಜ ಪಾಟೀಲ ಊಡಗಿ ಮಾತನಾಡಿ ವಾಲ್ಮೀಕಿ ಸಮಾಜದವರು ಹಿಂದುಳಿದವರಾಗಿದ್ದಾರೆ ಆರ್ಥಿಕ ವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಬಲಿಷ್ಠರಾಗಬೇಕಾಗಿದೆ ಸಚಿವ ಶರಣಪ್ರಕಾಶ ಪಾಟೀಲ ಅವರು ಕೆಲಸದ ಒತ್ತಡದಿಂದ ಈ ಕಾರ್ಯಕ್ರಮಕ್ಕೆ ಬರಲು ಆಗಿರುವದಿಲ್ಲ ನಿಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸಲು ಸಚಿವ ಡಾ ಶರಣಪ್ರಕಾಶ ಪಾಟೀಲ ಸದಾ ಸಿದ್ದರಿದ್ದಾರೆ ನಿಮ್ಮೆಲ್ಲ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು ಪರಿಹಾರ ಕಲ್ಪಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ಕಾರ್ಯಕ್ರಮಕ್ಕೂ ಮುಂಚಿತವಾಗಿ ವಾಲ್ಮೀಕಿ ಸಮಾಜದ ಯುವಕರು ಬೈಕ್ ರ್ಯಾಲಿ ಮೂಲಕ ತೆರದ ವಾಹನದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಅಲಿಗೆ,ಡೊಳ್ಳು ,ವ್ಯಾದಮೇಳಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಜರುಗಿತು. ಈ ಸಂದರ್ಭದಲ್ಲಿ ಹಾಲಪಯ್ಯ ವಿರಕ್ತ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಗೋಲಪಲ್ಲಿಯ ಶ್ರೀ ವರದಾನಂದ ಸ್ವಾಮೀಜಿ, ಮಳ ಖೇಡದ ಶ್ರೀ ಕೊಟ್ಟುರೇಶ್ವರ ಸ್ವಾಮೀಜಿ, ರಾಯಚೂರ ಜಿಲ್ಲಾ ವಾಲ್ಮೀಕಿ ಸಮಾಜದ ಅದ್ಯಕ್ಷ ವೆಂಕಟೇಶ ನಾಯಕ, ತಾಲೂಕಾ ಅದ್ಯಕ್ಷ ಚಂದ್ರಕಾಂತ ನಾಯಿಕೋಡಿ, ಜ್ಯೋತಿ ಮಾರ್ಲಾ, ಬಾಗ್ಯಲಕ್ಷ್ಮಿ ನಾಯಿಕೋಡಿ, ಶಂಭುಲಿಂಗ ನಾಟೀಕಾರ, ಸತೀಷ ಪೂಜಾರಿ, ಸುನೀಲ ಸಟಪಟನಳ್ಳಿ, ನಾಗಜ್ಯೊತಿ ಕಡಬಗಾಂವ, ಆರತಿ ಕಡಗಂಚಿ ಇದ್ದರು. ಶರಣಪ್ಪ ಎಳ್ಳಿ ssvtv news ಸೇಡಂ
ಚಿಂಚೋಳಿ ಕ್ರಾಸ್ ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಬೇಕೆಂದು ಮಾಜಿ ಶಾಸಕ ತೆಲ್ಕೂರ ಒತ್ತಾಯ
ಚಿಂಚೋಳಿ ಕ್ರಾಸ್ ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಬೇಕೆಂದು ಮಾಜಿ ಶಾಸಕ ತೆಲ್ಕೂರ ಒತ್ತಾಯ





