ರಾಜಾಜಿನಗರ: ಎಷ್ಟೇ ಟೀಕೆ ಮಾಡಿದ್ರೂ ಯಾರೂ ಸಂಘವನ್ನು ಬಿಡಲ್ಲ ಕರ್ನಾಟಕದಲ್ಲಿ ಆರ್ ಎಸ್ ಎಸ್ ಅನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಎಷ್ಟೇ ಟೀಕೆ ಮಾಡಿದರೂ ಯಾರೂ ಸಂಘವನ್ನು ಬಿಡುವುದಿಲ್ಲ. ಆರ್ ಎಸ್ ಎಸ್ ನಾಯಕರು ಟೀಕೆಗಳಿಗೆ ಉತ್ತರಿಸುವುದಿಲ್ಲ. ನಾಳೆಯಿಂದ ಆರ್ ಎಸ್ ಎಸ್ ಟೀಕೆಗಳನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಿ, ಯಾವ್ಯಾವ ಅಭಿವೃದ್ಧಿ ಮಾಡಿದ್ದೀರಿ ಎಂದು ಘೋಷಿಸಿ ಎಂದು ಅವರು ಸವಾಲು ಹಾಕಿದರು