ಸಿಎಂ ಡಿನ್ನರ್ ಮೀಟಿಂಗ್ ಗೂ ಅಧಿಕಾರ ಹಸ್ತಾಂತರಕ್ಕೂ ಸಂಬಂಧವಿಲ್ಲ: ಪರಮೇಶ್ವರ್ ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಅವರು ಮುಖ್ಯಮಂತ್ರಿಗಳ ಡಿನ್ನರ್ ಮೀಟಿಂಗ್ಗೂ, ಎರಡೂವರೆ ವರ್ಷಗಳ ಅಧಿಕಾರ ಹಸ್ತಾಂತರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳು ಕೆಲವೊಮ್ಮೆ ಊಟಕ್ಕೆ ಕರೆಯುತ್ತಾರೆ, ಇದು ಹೊಸದೇನಲ್ಲ. ಬಿಹಾರ ಚುನಾವಣೆಗೆ ಸಂಬಂಧಿಸಿ ಸಿಎಂ ಕರೆದಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಹೇಗೆ ಬೇಕಾದರೂ ಮಾತನಾಡಬಹುದು. ಶಾಸಕರ ಅಭಿಪ್ರಾಯ ಪಡೆದೇ ಹೈಕಮಾಂಡ್ ಸಿಎಂ ಆಯ್ಕೆ ಮಾಡುತ್ತದೆ ಎಂಬ ಡಿಕೆಶಿಗೆ ನೀಡಿದ ತಿರುಗೇಟಿನ ಬಗ್ಗೆಯೂ ಪ್ರಸ್ತಾಪಿಸಿದರು