ಬೇರೆ ದೇಶಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ ಉತ್ಪಾದನೆ ಹೆಚ್ಚು ಮಾಡಬೇಕು-ಸಿ. ಎಸ್. ಬಾಬು ನಾಗೇಶ್ ನಮ್ಮ ದೇಶದಲ್ಲಿ ಉತ್ಪಾದನೆ ಮಾಡಿದ ಸರಕುಗಳನ್ನು ಬೇರೆದೇಶಕ್ಕೆ ರಪ್ತು ಮಾಡುವುದು ಹಾಗೂ ಬೇರೆ ದೇಶದ ವಸ್ತುಗಳನ್ನು ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುವುದು ಉದ್ಯಮವಾಗಿದ್ದು, ಬೇರೆ ದೇಶದಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ ಉತ್ಪಾದನೆಯನ್ನು ಹೆಚ್ಚು ಮಾಡಬೇಕೆಂದು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಜಂಟಿ ನಿರ್ದೇಶಕರಾದ ಸಿ. ಎಸ್. ಬಾಬು ನಾಗೇಶ್ ಅವರು ಹೇಳಿದರು ಇಂದು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರದ ವತಿಯಿಂದ ಮೈಸೂರಿನ ಹೋಟೆಲ್ ಪ್ರೆಸಿಡೆಂಟ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ, ರಾಜ್ಯ ರಫ್ತು ವಲಯವನ್ನು ವಿಸ್ತರಿಸಿ, ರಫ್ತು ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಕೈಗಾರಿಕೋದ್ಯಮಿಗಳು ಹಾಗೂ ವಾಣಿಜೋದ್ಯಮಿಗಳಿಗಾಗಿ 6 ದಿನಗಳ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು ಒಬ್ಬ ಉತ್ತಮ ರಫ್ತುದಾರರಾಗ ಬೇಕಾದರೆ ಮೊದಲು ಮಾರುಕಟ್ಟೆಯ ಬಗ್ಗೆ ಅಧ್ಯಯನ ಮಾಡುವುದು ಬಹಳ ಮುಖ್ಯವಾಗಿದ್ದು , ನಾವು ಮಾರುಕಟ್ಟೆ ಅಧ್ಯಯನ ಮಾಡಿದಾಗ ನಮಗೆ ತಿಳುವಳಿಕೆ ಬರುತ್ತದೆ. ಇಂದಿನ ವಾತಾವರಣದಲ್ಲಿ ಯಾವುದಕ್ಕೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ತಿಳಿದುಕೊಂಡು ಸರಕುಗಳನ್ನು ಉತ್ಪಾದನೆ ಮಾಡುವುದು ಉತ್ತಮವಾಗಿದೆ ಎಂದರು ಭಾರತದ ರಫ್ತಿನ ಸೇವೆಯಲ್ಲಿ ಕರ್ನಾಟಕ ಶೇ.41ರಷ್ಟು ಸೇವೆಯನ್ನು ಒದಗಿಸುತ್ತಿದ್ದು, ಕರ್ನಾಟಕ ಸರಕುಗಳನ್ನು ರಫ್ತು ಮಾಡುವಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ ಹಾಗೂ ಸರಕು ಆಮದು ಮಾಡಿಕೊಳ್ಳುವಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ರಫ್ತಿನಲ್ಲಿ ಕರ್ನಾಟಕ ಮೊದಲ ಸ್ಥಾನ. ಮಹಾರಾಷ್ಟ್ರ ಎರಡನೇ ಸ್ಥಾನ, ತಮಿಳುನಾಡು ಮೂರನೇ ಸ್ಥಾನ, ಗುಜರಾತ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು, ಸರಕುಗಳನ್ನು ಆಮದು ಮಾಡಿಕೊಳ್ಳುವಲ್ಲಿ ಗುರುರಾತ್ ಮೊದಲನೇ ಸ್ಥಾನ, ಮಹಾರಾಷ್ಟ್ರ ಎರಡನೇ ಸ್ಥಾನ, ತಮಿಳುನಾಡು ಮೂರನೇ ಸ್ಥಾನ, ಕರ್ನಾಟಕ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ತಿಳಿಸಿದರು ರಾಜ್ಯದ ರಫ್ತು ಉದ್ಯಮವನ್ನು ಹೆಚ್ಚು ಮಾಡುವುದು ಈ ತರಬೇತಿಯ ಮೂಲ ಉದ್ದೇಶವಾಗಿದ್ದು, ವಿ ಟಿ ಪಿ ಸಿ ಸಂಸ್ಥೆ ನಮ್ಮ ರಾಜ್ಯದಲ್ಲಿ ಬಿಟ್ಟರೆ ಬೇರೆ ಎಲ್ಲೂ ರಫ್ತು ತರಬೇತಿ ಸಂಸ್ಥೆ ಇಲ್ಲ ಆದ್ದರಿಂದ ಶಿಬಿರಾರ್ಥಿಗಳು ಈ 6 ದಿನಗಳ ರಫ್ತು ತರಬೇತಿ ಕಾರ್ಯಕ್ರಮವನ್ನು ಸದುಪಯೋಗ ಪಡೆದುಕೊಳ್ಳಿ. ರಫ್ತು ಹೆಚ್ಚು ಮಾಡುವುದಕ್ಕೆ ಏನು ಬೆಂಬಲಬೇಕು ಅದನ್ನು ನಾವು ಕೊಡುತ್ತೇವೆ ಎಂದರು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಜೈನ್ ಅವರು ಮಾತನಾಡಿ ರಫ್ತು ಉದ್ಯಮ ಎಂಬುದು ಸವಾಲು ಕ್ಷೇತ್ರವಾಗಿದ್ದು, ಯಾವುದಾದರೂ ಉತ್ಪನ್ನಗಳನ್ನು ನಾವು ತಯಾರು ಮಾಡುತ್ತಿದ್ದೇವೆ ಎಂದರೆ ಮೊದಲು ಸ್ವದೇಶದಲ್ಲಿ ಉತ್ಪನ್ನಗಳನ್ನು ತಯಾರಿಸಿ ಹೆಚ್ಚು ರಫ್ತು ಮಾಡಬೇಕು. ಬೇರೆ ಬೇರೆ ದೇಶಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಈ ಆರು ದಿನಗಳ ಕಾಲ ನಡೆಯುವ ತರಬೇತಿ ಕಾರ್ಯಕ್ರವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ರಫ್ತುದಾರಾಗಬೇಕು ಎಂದು ಹೇಳಿದರು ಈ ಶಿಬಿರದಲ್ಲಿ ಬೆಂಗಳೂರು, ಮೈಸೂರು, ಸಾಗರ, ಹಿನಕಲ್, ಹುಣಸೂರು ಬಾಗಲಕೋಟೆಯಿಂದ ಶಿಬಿರಾರ್ಥಿಗಳು ಆಗಮಿಸಿದ್ದರು. ಜಿಲ್ಲಾ ಪಂಚಾಯತ್ ಮತ್ತು ವಿಟಿಪಿಸಿ – ರಫ್ತು ಸೌಲಭ್ಯ ಕೇಂದ್ರದ ಉಪ ನಿರ್ದೇಶಕರಾದ ಮೇಘಲಾ ಎಲ್ ಅವರು ಅತಿಥಿಗಳನ್ನು ಸ್ವಾಗತಿಸಿದರು
ಬೇರೆ ದೇಶಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ ಉತ್ಪಾದನೆ ಹೆಚ್ಚು ಮಾಡಬೇಕು;. ಬಾಬು ನಾಗೇಶ್
ಬೇರೆ ದೇಶಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ ಉತ್ಪಾದನೆ ಹೆಚ್ಚು ಮಾಡಬೇಕು;. ಬಾಬು ನಾಗೇಶ್





