ಬೆಂಗಳೂರು: ʻಡಿ.ಕೆ. ಶಿವಕುಮಾರ್ ಅವರ ಮೇಲೆ ಸುಳ್ಳು ಆರೋಪ ಮಾಡುವುದು ಪಕ್ಷದ ನಿತ್ಯದ ಅಭ್ಯಾಸವಾಗಿಬಿಟ್ಟಿದೆ. ಬೆಳಗ್ಗೆ ಆರೋಪ, ಸಂಜೆ ಪಲಾಯನ ಇದೇ ನಿಮ್ಮ ರಾಜಕೀಯ ಶೈಲಿʼ ಎಂದು ಜಾಲಿ ಡೇಸ್ ಮುಚ್ಚಲು ಡಿಸಿಎಂ ಕಾರಣ ಎನ್ನುತ್ತಿದ್ದ ಜೆಡಿಎಸ್-ಬಿಜೆಪಿ ನಾಯಕರಿಗೆ ಹಾಗೂ ಪರೋಕ್ಷವಾಗಿ ಹೆಚ್ಡಿ ಕುಮಾರಸ್ವಾಮಿ ಅವರಿಗೆ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ ಪರಿಸರ ಕಾಯಿದೆ ಉಲ್ಲಂಘನೆ ಹಿನ್ನಲೆ, ರಾಮನಗರ ಜಿಲ್ಲೆಯ ಬಿಡದಿ ಬಳಿ ಇರುವ ವೆಲ್ಸ್ ಸ್ಟುಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ ಪ್ರೈ. ಲಿ. ಸಂಸ್ಥೆ ಮುಚ್ಚಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಜಾರಿ ಮಾಡಿತ್ತು ಇದಕ್ಕೆ ಪ್ರತಿಕ್ರಿಯೆ ನೀಡದ ಕಾರಣ ಮಂಗಳವಾರ ಜಾಲಿಡೇಸ್ಗೆ ಬೀಗ ಜಡಿಯಲಾಯಿತು. ಆ ನಂತರ ಬಿಜೆಪಿ ಮತ್ತು ರಾಜಕೀಯ ನಾಯರು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು 8 ರಂದು ರಾತ್ರಿ 11:42ಕ್ಕೆ ಕಿಚ್ಚ ಸುದೀಪ್ ಪೋಸ್ಟ್ ಹಂಚಿಕೊಂಡು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಧನ್ಯವಾದ ಕೋರಿದ್ದರು. ನನ್ನ ಕರೆಗೆ ತಕ್ಷಣ ಸ್ಪಂದಿಸಿ, ಮತ್ತೆ ಬಿಗ್ಬಾಸ್ ಕಾರ್ಯಕ್ರಮ ಆರಂಭಿಸಲು ಅನುವು ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದರು ಸುದೀಪ್ ಟ್ವೀಟ್ನ್ನು ಡಿಸಿಎಂ ಡಿಕೆ ಶಿವಕುಮಾರ್ ಹೀಗೆ ಬರೆದುಕೊಂದಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅಡಚಣೆ ಮಾಡಿದರೆಂದು ಹೇಳಲು ಏನಾದರೂ ಸಾಕ್ಷಿ ಇದೆಯೇ?ಸ್ವತಃ ಸುದೀಪ್ ಅವರೇ ಈ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ರವರ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು ಬಿಗ್ ಬಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ಅವರ ಟ್ವೀಟ್ ನಿಮ್ಮ ಸುಳ್ಳು ಆರೋಪಗಳಿಗೆ ಸಮಾಧಿ ಕಟ್ಟಿದೆ ಎಂದು ಕಿಡಿಕಾರಿದ್ದಾರೆ ಕೇಂದ್ರದ ತುಕ್ಕು ( ಉಕ್ಕು) ಸಚಿವರು ರಾಜ್ಯಕ್ಕೆ ಬಂದು ಸುಳ್ಳು ಆರೋಪ ಮಾಡಿ ದೆಹಲಿಗೆ ಓಡಿ ಹೋಗುವುದು ಜನಸೇವೆ ಅಲ್ಲ. ಡಿ.ಕೆ. ಶಿವಕುಮಾರ್ ಅವರ ಬಹಿರಂಗ ಚರ್ಚೆಯ ಪಂಥಾಹ್ವಾನವನ್ನು ಸ್ವೀಕರಿಸಲು ನಿಮ್ಮ “ಉತ್ತರ ಕುಮಾರ” ಹೆದರುತ್ತಿರುವುದೇಕೆ?. ಧೈರ್ಯವಿದ್ದರೆ ಚರ್ಚೆಗೆ ಬನ್ನಿ, ರಾಜ್ಯದ ಜನರ ಮುಂದೆ ನಾಟಕ ಮಾಡ್ತಿರೋದು ಯಾರು ಅಂತ ಗೊತ್ತಾಗಲಿ ಎಂದು ಸವಾಲ್ ಹಾಕಿದ್ದಾರೆ ಬಿಗ್ ಬಾಸ್ ವಿಚಾರ ಆ ಸ್ಟುಡಿಯೊ ಮಾಲಕರು ಮತ್ತು ಅಧಿಕಾರಿಗಳ ನಡುವೆ ನಡೆಯುವುದು ಯಾವ ಕಾನೂನಿನ ಅಡಿಯಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದಕ್ಕೂ ಕಾನೂನು ಪ್ರಕಾರ ನಡೆಯುವ ಪದ್ದತಿ ಇದೆ. ಈ ಮಧ್ಯೆ ಅದಕ್ಕೆ ಡಿಸಿಎಂ ಅವರು ಹಿಂದೆ ಆಡಿದ ಮಾತು ಸೇರಿಸಿ ಕೆಲವರು ಹೇಳುತ್ತಿದ್ದಾರೆ. ಅದು ಮುಖ್ಯವಲ್ಲ. ಎಲ್ಲೊ ದಾರಿ ತಪ್ಪುತ್ತಿದೆ ಎನಿಸುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರ ವ್ಯಾಪ್ತಿ ಏನು ಬಂದ್ ಮಾಡುವ ಅಧಿಕಾರ ಇದೆಯಾ ಇಲ್ಲವಾ ನೋಡಬೇಕು. ಒಂದು ಕಡೆ ಮನರಂಜನಾ ಉದ್ಯಮ ನಡೆಯಬೇಕು ಇನ್ನೊಂದೆಡೆ ಮಾಲಿನ್ಯವಾಗದಂತೆ ನೊಡಿಕೊಳ್ಳಬೇಕಿದೆ. ಎಷ್ಟು ದಿನದಿಂದ ಈ ಸಮಸ್ಯೆ ಇದೆ. ಈಗ್ಯಾಕೆ ಈ ಕ್ರಮ ಕೈಗೊಂಡಿದ್ದಾರೆ ಎನ್ನುವ ಪ್ರಶ್ನೆ ಮೂಡುತ್ತದೆ. ಇಕೊ ಎಕನಾಮಿಕ್ಸ್ ಅಂತಾರೆ, ಆರ್ಥಿಕತೆಯೂ ನಡೆಯಬೇಕು, ಪರಿಸರವೂ ಉಳಿಯಬೇಕು. ಅದು ಈ ರಾಜ್ಯದಲ್ಲಿ ತಪ್ಪಿ ಹೋಗಿದೆ. ರಾಜ್ಯದಲ್ಲಿ ಎಲ್ಲವೂ ದಾರಿ ತಪ್ಪಿದೆ. ನಡೆದದ್ದೇ ದಾರಿ ಎನ್ನುವಂತಾಗಿದೆ. ಹಾಗೆ ಆದಾಗಲೇ ಈ ರೀತಿಯ ಘಟನೆಗಳು ನಡೆಯುತ್ತವೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅನುಮತಿ ಕೊಡೆಸಿ ಇದರಲ್ಲಿ ತಮ್ಮ ಪಾತ್ರ ಇಲ್ಲ ಎನ್ನುವುದನ್ನು ಸಾಬೀತು ಪಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದರು
ಜಾಲಿ ಡೇಸ್ ಮುಚ್ಚಲು ಡಿಸಿಎಂ ಕಾರಣ ಎನ್ನುತ್ತಿದ್ದ ಜೆಡಿಎಸ್-ಬಿಜೆಪಿ ನಾಯಕರಿಗೆ ಹಾಗೂ ಕುಮಾರಸ್ವಾಮಿಗೆ ಡಿಕೆಶಿ ಟಾಂಗ್
ಜಾಲಿ ಡೇಸ್ ಮುಚ್ಚಲು ಡಿಸಿಎಂ ಕಾರಣ ಎನ್ನುತ್ತಿದ್ದ ಜೆಡಿಎಸ್-ಬಿಜೆಪಿ ನಾಯಕರಿಗೆ ಹಾಗೂ ಕುಮಾರಸ್ವಾಮಿಗೆ ಡಿಕೆಶಿ ಟಾಂಗ್





