Home Uncategorized ಆಹಾರ ಪದಾರ್ಥಗಳ ಕಿಟ್ ಹಾಗೂ ಒಂದು ನೂರು ಜೀವ ರಕ್ಷಕ ಕವಚಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರ ಸಂಸದ ;ರಾಧಾಕೃಷ್ಣ

ಆಹಾರ ಪದಾರ್ಥಗಳ ಕಿಟ್ ಹಾಗೂ ಒಂದು ನೂರು ಜೀವ ರಕ್ಷಕ ಕವಚಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರ ಸಂಸದ ;ರಾಧಾಕೃಷ್ಣ

0
ಆಹಾರ ಪದಾರ್ಥಗಳ ಕಿಟ್ ಹಾಗೂ ಒಂದು ನೂರು ಜೀವ ರಕ್ಷಕ ಕವಚಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರ  ಸಂಸದ ;ರಾಧಾಕೃಷ್ಣ

ಕಲಬುರಗಿ ಒಂದು ಸಾವಿರ ಆಹಾರ ಪದಾರ್ಥಗಳ ಕಿಟ್ ಹಾಗೂ ಒಂದು ನೂರು ಜೀವ ರಕ್ಷಕ ಕವಚಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ ಸಂಸದ ರಾಧಾಕೃಷ್ಣ ದೊಡ್ಡಮನಿ ಜಿಲ್ಲಾಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಭೀಮಾ, ಬೆಣ್ಣೆತೊರ ನದಿಗಳಲ್ಲಿ ಪ್ರವಾಹ ಉಂಟಾಗಿದೆ. ಪರಿಣಾಮ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ ವಸತಿ ಊಟದ ಹಾಗೂ ಇತರೆ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯ ಜನರ ಸಂಕಷ್ಟಕ್ಕೆ ಮಿಡಿದಿರುವ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಈಗಾಗಲೇ 2500 ಆಹಾರ ಪದಾರ್ಥಗಳ ಕಿಟ್ ಗಳನ್ನು ಜಿಲ್ಲಾಡಳಿತದ ಮೂಲಕ ಸಂತ್ರಸ್ತರಿಗೆ ವಿತರಿಸಿದ್ದರು. ಈಗ ಮತ್ತೆ ಬೇಡಿಕೆ ಹಿನ್ನೆಲೆಯಲ್ಲಿ ಮತ್ತೆ ಎರಡನೆಯ ಬಾರಿಗೆ ಒಂದು ಸಾವಿರ ಆಹಾರದ ಕಿಟ್ ಜೊತೆಗೆ ಒಂದು ನೂರು ಜೀವ ರಕ್ಷಕ ಕವಚಗಳನ್ನು ಕೂಡಾ ಇಂದು ಕಲಬುರಗಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಹಾಗೂ ಡಾ ಕಿರಣ್ ದೇಶಮುಖ್ ಅವರು ಮೂಲಕ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರಿಗೆ ಹಸ್ತಾಂತರಿಸಿದ್ದು ಸಂತ್ರಸ್ತರಿಗೆ ಹಂಚುವಂತೆ ಸೂಚಿಸಿದ್ದಾರೆ.. ಭಾರೀ ಪ್ರಕೃತಿ ವಿಕೋಪಕ್ಕೆ ಜಿಲ್ಲೆ ನಲುಗಿದೆ. ನದಿಗಳು ತುಂಬಿ ಹರಿಯುತ್ತಿರುವುದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ನೂರಾರು ಮನೆಗಳು ಬಿದ್ದಿವೆ. ಮಳೆ ಹಾಗೂ ಪ್ರವಾಹದಿಂದ ಆದ ನಷ್ಟದ ( ಬೆಳೆ ಹಾಗೂ ಇತ್ಯಾದಿ) ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ನೆರೆ ಪರಿಹಾರಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ

LEAVE A REPLY

Please enter your comment!
Please enter your name here

error: Content is protected !!