Home Uncategorized ಕ್ಯಾಂಡಲ ಮಾರ್ಚ ಮೂಲಕ ಜನರಲ್ಲಿ ಸ್ವಚ್ಛತೆಯ ಮಹತ್ವ ಮತ್ತು ಮಾದಕ ವ್ಯಸನ ಮುಕ್ತದಿಂದ ಪರಿವರ್ತನೆ ಜಾಗೃತಿ

ಕ್ಯಾಂಡಲ ಮಾರ್ಚ ಮೂಲಕ ಜನರಲ್ಲಿ ಸ್ವಚ್ಛತೆಯ ಮಹತ್ವ ಮತ್ತು ಮಾದಕ ವ್ಯಸನ ಮುಕ್ತದಿಂದ ಪರಿವರ್ತನೆ ಜಾಗೃತಿ

0
ಕ್ಯಾಂಡಲ ಮಾರ್ಚ ಮೂಲಕ  ಜನರಲ್ಲಿ  ಸ್ವಚ್ಛತೆಯ ಮಹತ್ವ  ಮತ್ತು ಮಾದಕ ವ್ಯಸನ ಮುಕ್ತದಿಂದ ಪರಿವರ್ತನೆ ಜಾಗೃತಿ

ಕ್ಯಾಂಡಲ ಮಾರ್ಚ ಮೂಲಕ ಜನರಲ್ಲಿ ಸ್ವಚ್ಛತೆಯ ಮಹತ್ವ ಮತ್ತು ಮಾದಕ ವ್ಯಸನ ಮುಕ್ತದಿಂದ ಪರಿವರ್ತನೆ ಜಾಗೃತಿ ಕಾರ್ಯಕ್ರಮಕ್ಕೆ ಮರಕಲ ಗ್ರಾಮದಲ್ಲಿ ಚಾಲನೆ ನೀಡಿದ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ಮಾಣಿಕರಾವ ಪಾಟೀಲ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ವತಿಯಿಂದ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾದ ಸ್ವಚ್ಛತೆಯ ಮಹತ್ವ ಮತ್ತು ಮಾದಕ ವ್ಯಸನ ಮುಕ್ತದಿಂದ ಪರಿವರ್ತನೆ ಜಾಗೃತಿ ಕಾರ್ಯಕ್ರಮವನಕ್ಕೆ ಬೀದರ ನಗರದ ಹೋರವಲಯದಲ್ಲಿ ಬರುವ ಮರಕಲ ಗ್ರಾಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ಮಾಣಿಕರಾವ ಪಾಟೀಲ ಅವರು ಉದ್ಘಾಟಿಸಿದ ನಂತರ . ಮಾಣಿಕರಾವಪಾಟೀಲ್ ಅವರು ಮಾತನಾಡಿ ಸೆಪ್ಟೆಂಬರ 17 _ರಿಂದ ಅಕ್ಟೋಬರ 2 ರಾಷ್ಟ್ರಪಿತ ಮಹಾತ್ಮಗಾಂಧಿಯವರ ಜಯಂತಿಯ ವರೆಗೆ ಸ್ಚಚ್ಛತೆಯೆ ಸೇವೆ ಅಭಿಯಾನದಡಿ ವಿವಿಧ ಸ್ಚಚ್ಛತಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಲ್ಲರೂ ಸ್ವಯಂಪ್ರೇರಿತವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳಬೇಕೆಂದು ಮತ್ತು ಅಕ್ಟೋಬರ 2 ರಾಷ್ಟ್ರಪಿತ ಮಹಾತ್ಮಗಾಂಧಿಯವರ ಜಯಂತಿಯಂದು ವಿಶೇಷ ಗ್ರಾಮ ಸಭೆ ಇದ್ದು ಗ್ರಾಮ ಸಭೆಯಲ್ಲಿ ಎಲ್ಲರೂ ಭಾಗವಹಿಸಿ ಅವಶ್ಯಕ ವಿರುವಕಾಮಗಾರಿಗಳ ಪ್ರಸ್ತಾಪಮಾಡುವಂತೆ ತಿಳಿಸಿದರು.. ಕಾರ್ಯಕ್ರಮದ ಅಂತಿಮದಲ್ಲಿ ಕ್ಯಾಂಡಲ ಮಾರ್ಚ ಕೈಗೊಂಡು ಸ್ಚಚ್ಛತೆಯ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ ನಂತರ ಕಾರ್ಯಕ್ರಮವನದನ್ನುದ್ದೇಶಿಸಿ ಪಿಡಿಓ ಉಮೇಶ ಜಾಬಾ ಇವರು ಸ್ವಚ್ಛತೆಯ ಮಹತ್ವ, ಸ್ಚಚ್ಛತೆಯನ್ನು ಕಾಪಾಡಿಕೊಳ್ಳಲು ಸಮುದಾಯದ ಪಾತ್ರ ಕರ್ತವ್ಯ ಮತ್ತು ಜವಾಬ್ದಾರಿಯನ್ನು ತಿಳಿಸಿದರು ಹಾಗೂ ಪ್ಲಾಸ್ಟಿಕ ಬಳಸುವುದನ್ನು ಬಿಟ್ಟು ಕೈ ಚೀಲ ಬಳಕೆ ಮಾಡುವಂತೆ ಸಲಹೆ ನೀಡಿದರು. ಮಾದಕ ವ್ಯಸನದಿಂದ ಯುವಕರು, ಮಧ್ಯಮ ವರ್ಗದ ವಯಸ್ಕರು ದಿನವಿಡಿ ಕೆಲಸ ಮಾಡಿದ ಮಾಡಿದ ದುಡ್ಡನ್ನೆಲ್ಲ ಸಾರಾಯಿಗೆ ಸುರಿಯಿವಂತಹ ಪರಿಸ್ಥಿತಿಇದೆ ಸರಾಯಿಯ ಸಹವಾಸದಿಂದ ಹೆಂಡರು ಮಕ್ಕಳು ಉಪವಾಸ ಇರುವಂತಹ ಪರಿಸ್ಥಿತಿ ಇದೆ ವ್ಯಸನಗಳು ದೈಹಿಕ ಅನಾರೋಗ್ಯಕ್ಕೆ ಕಾರಣವಾಗುವದಲ್ಲದೆ ಕೌಟುಂಬಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ಕೂಡ ಹಾಳು ಮಾಡುತ್ತಿದೆ. ಮಾದಕ ವ್ಯಸನಮುಕ್ತಗೊಳಿಸಿವುದು ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿಗ್ರಾಮ ಪಂಚಾಯತಿಯ ಕಾರ್ಯದರ್ಶಿ ಕಾಶಿನಾಥಜಾಂತೆ ಗ್ರಾಮ ಪಂಚಾಯತ ಸದಸ್ಯರು/ಸಿಬ್ಬಂದಿ ವರ್ಗ ಹಾಗೂ ಗ್ರಾಮದ ಹಿರಿಯ/ಕಿರಿಯ ಮುಖಂಡರು ಯುವಕ ಯುವತಿಯರು ಸಭೆಯಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

error: Content is protected !!