ಗಣೇಶ ಚತೂರ್ಥಿ ಸಂಧರ್ಭದಲ್ಲಿ ಜಾನಪದ ಸಂಸ್ಕೃತಿಯ ಪ್ರತೀಕವಾಗಿ ಜೋಕುಮಾರ ಮತ್ತು ವಿಘ್ನೇಶ್ವರ ಶಿವನ ಪುತ್ರರು ಎಂ ದು ಜನಪದರು ನಂಬಿಕೊಂಡು ಬಂದಿದ್ದಾರರೆ.ಗಣೇಶ ಶಿಷ್ಟ ಸಂಸ್ಕೃತಿಯ, ವಾರಸುದಾರನಾದರೆ, ಜೋ ಕುಮಾರ ಜನಪದ ಸಂಸ್ಕೃ ತೀಯ ಪ್ರತೀಕನಾಗಿದ್ದಾನೆಂ ಲದು ನಂಬಲಾಗಿದೆ ಅದರ ಒಂದು ವಿಶೇಷ ವರದಿ ಇಲ್ಲದೆ ನೋಡಿ
ಗಣೇಶ ಚತೂರ್ಥಿ ಹಬ್ಬವು ಉತ್ತರ ಕರ್ನಾ ಟಕದಲ್ಲಿ ಒಂದು ವಿಶಿಷ್ಟ ಹಬ್ಬವಾಗಿ ಆಚರಿಸುತ್ತಾರೆ.ಗಣೇಶನನ್ನು ಕಲಾಕಾರರು ರ ಚಿಸಿದರೆ, ಜೋಕುಮಾರನನ್ನು ಊರಿನ ಕುಂಬಾರರ ಮನೆಯಲ್ಲಿ ಸಂಪ್ರದಾಯದಲ್ಲಿ ಮಣ್ಣಿನಿಂದ ತಯಾರಿಸುತ್ತಾರೆ, ಗಣೇಶ ಹುಟ್ಟುತ್ತಾನೆ ಎನ್ನು ತ್ತಾರೆ.ನಂತರ ಅಂಬಿಗರ ಮನೆಯಲ್ಲಿ ಬೆಳೆಯುತ್ತಾನೆ,ಇತ ನಿಗೆ ಬೇವಿನ ಎಲೆಯೇ ಅ ಲಂಕಾರವಾಗಿರುತ್ತದೆ.ಇತನ ನ್ನು 7 ದಿನಗಳ ಕಾಲ 7 ಊರುಗಳಿಗೆ ಸಂಚರಿಸಿ ಮನೆಮ ನೆಯಲ್ಲಿ ಜೋಕುಮಾರನ ಹಾಡು ಹಾಡುತ್ತಾರೆ.ಗಣಪ ತಿಯನ್ನು ಸೊಂಡ್ಯಾ ಎಂದರೆ ಜೋಕುಮಾರನನ್ನು ಗಂಡ್ಯಾ ಎಂದು ಜನಪದರು ಕರೆಯುತ್ತಾರೆ ಎಂದು ತಿಳಿದು ಬರುತ್ತದೆ. ಈ ಭೂಲೋಕದ ಸಂಚಾರಕ್ಕೆಆ ಪರಮಾತ್ಮನು ಇರ್ವರನ್ನು ಕಳಿಸಿ,ಜನರ ಯೋಗಕ್ಷೇಮದ ಬಗ್ಗೆ ತಿಳಿದುಕೊಂಡು ಬರಲು ಕಳಿಸಿದಾಗ,ಗಣಪನಿ ಗೆ ಭೂಲೋಕದಲ್ಲಿ ಅದ್ಧೂರಿಯಾದ ಮೆರವಣಿಗೆ ಹಾಗೂ ವಿವಿಧ ದಿನಸುಗಳ ತಿಂಡಿಯ ಪದಾರ್ಥಗಳೊಂದಿಗೆ ನೈವೇದ್ಯ ಸಮರ್ಪಣೆಗೊ ಳ್ಳುತ್ತದೆ ಎಂದು ಗಣಪತಿಯು ಆ ಸಂತೋಷ ಪರಮಾತ್ಮನಿಗೆ ಸುದ್ಧಿ ಹೇಳುತ್ತಾ ನೆ.ನಂತರ ಜೋಕುಮಾರ ಭೂಲೋಕಕ್ಕೆ ಹೋಗಿ ಜನ ರು ಮಳೆ ಬೆಳೆ ಇಲ್ಲದೆ ಅಪಾರವಾದ ತೊಂದರೆಯಲ್ಲಿದ್ದಾ ರೆ ಎಂದು ಸುದ್ಧಿ ಮುಟ್ಟಿಸು ತ್ತಾನೆ ಎಂದು ಜನಪದರ ಸಂಪ್ರದಾಯದಲ್ಲಿ ಕಂಡುಬರುತ್ತದೆ. ಜನಪದರು ಈ ವಿಶಿಷ್ಟ ಹಬ್ಬ ವನ್ನು ಸಂಪ್ರದಾಯವನ್ನಾಗಿ ಆಚರಿಸಿಕೊಂಡು ಬರುತ್ತಿ ದ್ದಾರೆ.ಈ ಸಂಸ್ಕೃತಿಗೆ ಜೋಕುಮಾರನ ಆಚರಣೆಗೆ ಗಂಗಾಮತಸ್ಥರು,ಅಂಬಿಗರು,ಮಡಿವಾಳರು,ತಳವಾರರು,ವಾಲ್ಮೀಕಿ ಜನಾಂಗದವರು, ಈ ಸಂಪ್ರದಾಯವನ್ನು ಜಾನಪದ ರೀತಿಯಲ್ಲಿ ಆಚರಿಸಿ ಕೊಂಡು ಬರುತ್ತಿರುವುದು ಒಂದು ವಿಶೇಷವಾಗಿದೆ.ಇಂತಹ ಜನಪದರನ್ನು ಗುರುತಿಸಿ ಅವರ ಸಂಪ್ರದಾಯಗಳನ್ನು ಅವರ ಅಭಿವೃದ್ಧಿಗಾಗಿ, ಶ್ರೇಯಕ್ಕಾಗಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘ ಟಕ ಕಲಬುರಗಿಯು ಶ್ರಮಿ ಸುತ್ತಿದೆ ಎಂದು ಜಿಲ್ಲಾಧ್ಯಕ್ಷ ರಾದ ಸಿ.ಎಸ್.ಮಾಲಿಪಾಟೀ ಲರು ತಿಳಿಸಿದ್ದಾರೆ