ಕಲಬುರಗಿ ನಗರದಲ್ಲಿನ ಗುಲಬರ್ಗಾ ವಿಶ್ವ ವಿದ್ಯಾಲಯದ ಜ್ಞಾನಗಂಗಾ ಆವರದಲ್ಲಿನ ವಸತಿ ನಿಲಯದಲ್ಲಿ ಗಣೇಶೋತ್ಸವ ಪ್ರಯುಕ್ತ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು
ನಗರದ ಸೇಡಂ ರಸ್ತೆಯ ಹೊರವಲಯದಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿನ ವಸತಿ ನಿಲಯದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಗಣೇಶ ಮೂರ್ತಿಯನ್ನು ಪೂಜೆ ಪುನಸ್ಕಾರಗಳೊಂದಿಗೆ ವಿವಿಧ ಹೂವು ಹಣ್ಣುಗಳಿಂದ ಅಲಂಕರಿಸಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಶರಣು ಗಾಣಗಾಪುರ ಅವರು ಮಾತನಾಡಿ ಇಲ್ಲಿ ನಾವು ಐದು ದಿನಗಳ ಕಾಲ ಗಣೇಶನನ್ನು ಪ್ರತಿಷ್ಟಾಪಿಸುತ್ತಿದ್ದು ಗಣೇಶ ಅವನ ಕೃಪಾಶೀರ್ವಾದ ಹೀಗೆ ಎಲ್ಲರ ಮೇಲೆ ಇರುವಂತೆ ಮಾಡಲಿ ಎಂದರು