ತಾಳಿಕೋಟೆ ಪಟ್ಟಣದ ಹೊರವಲಯದಲ್ಲಿ ಎರಡು ದಿನಗಳಲ್ಲಿ ಸರಣಿ ಅಪಘಾತಗಳು ಸಂಭವಿಸಿವೆ ಆ ಕಾರಣದಿಂದ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಮುಂಜಾಗ್ರತ ಕ್ರಮಗಳನ್ನು ವಾಹನ ಸವಾರಿಗಳಿಗೆ ಅರಿವು ಮುಟ್ಟಿಸುವ ನಿಟ್ಟಿನಲ್ಲಿ ಇಲಾಖಾ ಸಿಬ್ಬಂದಿಗಳಿಗೆ ತಿಳಿಸಿದರು.
ಈಗ 12 ಪೊಲೀಸ ವಸತಿ ಗ್ರಹಗಳ ನಿರ್ಮಾಣ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗ್ರಹಗಳನ್ನು ಹಂತ ಹಂತವಾಗಿ ನಿರ್ಮಾಣ ಮಾಡಲಾಗುವುದು. ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ 443 ಅಪಘಾತಗಳು ಸಂಭವಿಸಿದ್ದು 500 ಜನ ಪ್ರಾಣ ಕಳೆದುಕೊಂಡಿದ್ದಾರೆ ಈ ವರ್ಷ 260 ಅಪಘಾತಗಳು ಸಂಭವಿಸಿವೆ ಈ ಕಾರಣದಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ರಸ್ತೆ ನಿಯಮ ಪಾಲನೆ ಮಾಡಲೇಬೇಕು ಎಂದು ಮಾಧ್ಯಮದ ಜೊತೆ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಮಯದಲ್ಲಿ ಡಿವೈಎಸ್ ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿ ಎಸ್ ಐ ರಾಮನಗೌಡ ಶಂಕನಾಳ, ಪಿಎಸ್ಐ ಆರ್ ಎಸ್ ಭಂಗಿ, ಸಿಬ್ಬಂದಿಗಳಾದ ಎಮ್ ಎಲ್ ಪಟ್ಟೀದ, ಸಿದ್ದನಗೌಡ ದೊಡ್ಡಮನಿ, ಆರ್ ಎಸ್ ಒಡೆಯರ, ಎಸ್ ಪಿ ಜಾಧವ, ಡಿ ಎಸ್ ಕನ್ನೊಳ್ಳಿ, ಎಸ್ ಸಿ ರೆಡ್ಡಿ ಹಲವರು ಉಪಸ್ಥಿತರಿದ್ದರು