. ಬೋಧಿಸತ್ವ ಅನಾಗರಿಕ ಧಮ್ಮಪಾಲರ 160 ನೇ ಜನ್ಮ ದಿನಾಚರಣೆ ಪ್ರಯುಕ್ತ, ಬೋದಗಯ ಬಿಟಿ ಆ್ಯಕ್ಟ್ 1949ರ ವಿರುಧ್ದ, ಬಿಹಾರ ರಾಜ್ಯದ ರಾಜಧಾನಿ ಪಾಟ್ನಾದಲ್ಲಿ ಸೆಪ್ಟೆಂಬರ್ 17 ರಂದು 5 ಲಕ್ಷ ಬೌಧ್ದರ ಶಾಂತಿರ್ಯಾಲಿ ಮತ್ತು ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಬುದ್ದಘೋಷ ಅವರು ತಿಳಿಸಿದ್ದಾರೆ
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಅಖಿಲ ಭಾರತ ಬೌಧ್ದ ವೇದಿಕೆ ವತಿಯಿಂದ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಇದೇ ತಿಂಗಳ 17 ರಂದು ಮಂಗಳವಾರ ಬಿಹಾರದ ಪಾಟ್ನಾದಲ್ಲಿರುವ ಗಾಂಧಿ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಗೆ ಅಖಿಲ ಭಾರತ ಬೌಧ್ದ ವೇದಿಕೆ ಮತ್ತು ಭಾರತದ ಎಲ್ಲಾ ಬೌಧ್ದ ಸಂಘಟನೆಗಳ ಬ್ಯಾನರ್ ಅಡಿಯಲ್ಲಿ ಬೋಧಿಸತ್ವ ಅನಾಗರಿಕ ಧಮ್ಮಪಾಲ್ ಅವರ 160 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಬೋದ್ ಗಯಾ ಬಿ.ಟಿ ಕಾಯಿದೆ 1949ರ (ಬಿ.ಟಿ.ಎಮ್.ಸಿ) ವಿರುದ್ಧ ಸಾರ್ವಜನಿಕ ಮತ್ತು ಶಾಂತಿ ಸಭೆ ಹಮ್ಮಿಕೊಂಡಿದ್ದೂ, ಇದರಲ್ಲಿ 5 ಲಕ್ಷ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬುದ್ದನ ಅನುಯಾಯಿಗಳು ಸೇರಲಿದ್ದು, ಅದರಲ್ಲಿ ಕಲಬುರಗಿ ಜಿಲ್ಲೆಯಿಂದ ಕನಿಷ್ಟ 500 ಜನರು ಭಾಗವಹಿಸಲು ಹೊರಡಲಿದ್ದೇವೆ, ಇನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸೇರಿ 10 ರಿಂದ 15 ಸಾವಿರ ಬುದ್ದನ ಅನುಯಾಯಿಗಳು ಮತ್ತು ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಎ.ಬಿ ಹೊಸಮನಿ, ಸೂರ್ಯಕಾಂತ ನಿಂಬಾಳ್ಕರ್, ಸುರೇಶ ಹಾದಿಮನಿ, ಅರ್ಜುನ್ ಭದ್ರೆ, ಎಸ್. ಆರ್ ಕೊಲ್ಲೂರ ಸೇರಿದಂತೆ ಹಲವರು ಭಾಗವಹಿಸಿದ್ದರು