ತಾಲ್ಲೂಕಿನ ಬಾಲೆನಹಳ್ಳಿ ರಾಮಜೋಗಿಹಳ್ಳಿ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆ ಬೆಳೆದ ಹೊಲಗಳಿಗೆ ಬೇಟಿ ನೀಡಿದ ಕೃಷಿ ತಾಂತ್ರಿಕಾ ಅಧಿಕಾರಿಗಳ ತಂಡ ಪ್ರಯೋಗಿಕವಾಗಿ ಇ-ಸ್ಯಾಪ್ ಮೊಬೈಲ್ ತಂತ್ರಾಂಶ ಬಳಕೆ ವಿಧಾನವನ್ನು ರೈತರಿಗೆ ತಿಳಿಸಿಕೊಟ್ಟಿತು.
ಬೆಳೆಗಳ ಸಮಗ್ರ ಪೀಡೆ ನಿರ್ವಹಣೆ ಸಲುವಾಗಿ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಕೃಷಿ ಇಲಾಖೆ ಸಿದ್ಧಪಡಿಸಿರುವ ಇ-ಸ್ಯಾಪ್ ಮೊಬೈಲ್ ತಕ್ರಾಂಶ ತಪ್ಪದೆ ಬಳಕೆ ಮಾಡಿಕೊಂಡು ಕೀಟಬಾಧ * ಹತೋಟಿ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ